ಬೆಂಗಳೂರು ಪ್ರೊಫೆಷನಲ್ಸ್ ಮೀಟ್-2017 ಉದ್ಘಾಟನೆ

Update: 2017-03-12 18:04 GMT

 ಬೆಂಗಳೂರು,ಮಾ.12: ಟೀಮ್ ಬಿಪಿಎಂ ಮತ್ತು ಆಪ್ ಕಾ ಪಥ್ ಇಲ್ಲಿ ಆಯೋಜಿಸಿದ್ದ ಮೂರನೇ ಆವೃತ್ತಿಯ ಬೆಂಗಳೂರು ಪ್ರೊಫೆಷನಲ್ಸ್ ಮೀಟ್ -2017 ಅನ್ನು ಫಿಝಾ ಡೆವಲಪರ್ಸ್‌ನ ಆಡಳಿತ ನಿರ್ದೇಶಕ ಮತ್ತು ಬೆಂಗಳೂರಿನ ಬ್ಯಾರೀಸ್ ವೆಲ್ಫೇರ್ ಅಸೋಸಿಯೇಷನ್  ಅಧ್ಯಕ್ಷ ಬಿ.ಎಂ.ಫಾರೂಕ್ ಅವರು ಉದ್ಘಾಟಿಸಿದರು.

ವಿದ್ಯಾರ್ಥಿಗಳು,ಹೊಸದಾಗಿ ಉದ್ಯೋಗಳಿಗೆ ಸೇರಿಕೊಂಡವರು ಮತ್ತು ವಿವಿಧ ಕ್ಷೇತ್ರಗಳಲ್ಲಿಯ ಹಿರಿಯ ಅನುಭವಿ ವೃತ್ತಿಪರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

 ವೃತ್ತಿಪರತೆ ಕುರಿತು ನಡೆದ ಗುಂಪು ಚರ್ಚೆ ಕಾರ್ಯಕ್ರಮವು ಇದೀಗಷ್ಟೇ ತಮ್ಮ ಕಾಲೇಜು ವ್ಯಾಸಂಗ ಮುಗಿಸಿ ಹೊರಜಗತ್ತಿಗೆ ತೆರೆದುಕೊಳ್ಳುತ್ತಿರುವ ಯುವಜನರು ಮತ್ತು ಉದ್ಯಮರಂಗದ ತಜ್ಞರ ನಡುವೆ ಸಂವಾದಕ್ಕೆ ಅವಕಾಶ ಕಲ್ಪಿಸಿತ್ತು. ಮುಹಮ್ಮದ್ ಶಮ್ಮಾಸ್,ಸಿರಾಜ್,ಅಮನ್ ಪಿ.ವಿ.,ನಿಸಾರ್ ಹಸನ್,ಸುನೀತಾ ಹಬೀಬ್,ಇಫ್ಲು ರಹಮಾನ್ ಪಾಲ್ಗೊಂಡಿದ್ದು,ಸಫೀರ್ ನಿರೂಪಿಸಿದರು.

ಹೂಡಿಕೆಗಳ ಉತ್ತಮ ವಿಧಾನಗಳು ಹಾಗೂ ಸುಸ್ಥಿರ ಆದಾಯ ,ಇಸ್ಲಾಮ್‌ನಲ್ಲಿ ಜೀವನ ಇತ್ಯಾದಿಗಳ ಬಗ್ಗೆಯೂ ಗೋಷ್ಠಿಗಳನ್ನು ಏರ್ಪಡಿಸಲಾಗಿತ್ತು.
 

2015ರಲ್ಲಿ ಅಸ್ತಿತ್ವಕ್ಕೆ ಬಂದ ಬೆಂಗಳೂರು ಫ್ರೊಫೆಷನಲ್ಸ್ ಮೀಟ್ ವೃತ್ತಿಪರರೊಂದಿಗೆ ಸಂವಾದ ಕಾರ್ಯಕ್ರಮಗಳನ್ನು ಏರ್ಪಡಿಸಿ ಅವರು ತಮ್ಮ ವಿಚಾರಗಳನ್ನು ಹಂಚಿಕೊಳ್ಳಲು ಅವಕಾಶ ಕಲ್ಪಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News