×
Ad

ಭಾರತದ ಮೊದಲ ವಿಮಾನಯಾನದ ರೋಚಕ ಕಥೆ

Update: 2017-03-17 22:55 IST

ವಿಂಧಮ್ ಬಹುಮುಖ ಪ್ರತಿಭೆ. ರಾಜರ ರಾಯಭಾರಿಯಾಗಿ ಕೆಲಸ ನಿರ್ವಹಿಸಿದ್ದ ಅಪೂರ್ವ ರಾಜತಾಂತ್ರಿಕ. ಸಂವಹನ ವ್ಯವಸ್ಥೆ ಸೀಮಿತವಾಗಿದ್ದ ಆ ಅವಧಿಯಲ್ಲಿ, ಕೇವಲ ಅಪಾರ ವಿಶ್ವಾಸ ಹೊಂದಿದ್ದ ವ್ಯಕ್ತಿಗಳಿಗಷ್ಟೇ ಅಂಥ ವಿಶೇಷ ಜವಾಬ್ದಾರಿಗಳನ್ನು ವಹಿಸಲಾಗುತ್ತಿತ್ತು. ಅಪಾರ ಉತ್ಸಾಹಿಯಾಗಿದ್ದ ಅವರು ಹಲವು ಪೇಟೆಂಟ್‌ಗಳನ್ನೂ ಹೊಂದಿದ್ದರು. ಅವರು ವಿಮಾನಯಾನ ಕ್ಷೇತ್ರದ ಪಿತಾಮಹ ಎನಿಸಿಕೊಂಡವರು.

ಭಾರತದಲ್ಲಿ ಮನುಷ್ಯರು ಮೊಟ್ಟಮೊದಲ ಬಾರಿಗೆ ನೆಲದಿಂದ ಮೇಲಕ್ಕೆ ಹಾರಿದ್ದು, 1910ರ ಮಾರ್ಚ್ ಹಾಗೂ 1911ರ ಫೆಬ್ರವರಿಯ ನಡುವೆ. ಕೆಲವೇ ತಿಂಗಳುಗಳ ಅಂತರದಲ್ಲಿ ವಿಮಾನಯಾನ ಭರ್ಜರಿ ಆರಂಭ ಪಡೆಯಿತು. ಇದರಲ್ಲಿ ವಿಶ್ವದ ಮೊಟ್ಟಮೊದಲ ಅಂಚೆ ವಿಮಾನ 1911ರ ಫೆಬ್ರವರಿ 18ರಂದು ಆರಂಭವಾದದ್ದೂ ಸೇರುತ್ತದೆ.

ಗಂಗಾ-ಯಮುನಾ ನದಿ ಸಂಗಮವಾದ ಅಲಹಾಬಾದ್‌ನ ವಿಶಾಲ ಭೂಪ್ರದೇಶವನ್ನು ಕೈಗಾರಿಕಾ ಹಾಗೂ ಕೃಷಿ ವಸ್ತುಪ್ರದರ್ಶನಕ್ಕೆ ಸಿದ್ಧಪಡಿಸಲಾಗಿತ್ತು. ಆ ವಸ್ತುಪ್ರದರ್ಶನದ ಸಮಯ ವಿಶೇಷ ಮಹತ್ವದ್ದು. ಇದಾದ ಬಳಿಕ ಉತ್ತಮ ಮಳೆಗಾಲ. ಇದು ಮೆಗಾ ಮೇಳ ಉತ್ಸವದ ಜತೆಜತೆಗೇ ಇದು ಬಂದಿತ್ತು. 1911ರ ಮೊದಲ ತಿಂಗಳ ಮೊದಲ ಎಂದು ಪರಿಗಣಿಸಲಾಯಿತು. 1911ರ ಹೊಸ ವರ್ಷದ ಮೊದಲ ತಿಂಗಳಲ್ಲಿ, ಸಂಘಟಕರು ದೊಡ್ಡ ಪ್ರೇಕ್ಷಕ ವರ್ಗವನ್ನು ನಿರೀಕ್ಷಿಸಿದ್ದರು.

ಈ ಪ್ರದರ್ಶನವನ್ನು ಸರಕಾರ ಆಯೋಜಿಸಿದ್ದರೂ, ಬನಾರಸ್ ಹಾಗೂ ಕಿಶನ್‌ಘರ್ ರಾಜರು, ನ್ಯಾಯಮೂರ್ತಿ ಗಳು, ಸ್ಥಳೀಯ ಗಣ್ಯರು ಸೇರಿದಂತೆ ಹಲವು ಮಂದಿ ಇದಕ್ಕೆ ಹಣಕಾಸು ಸಹಾಯಹಸ್ತ ಚಾಚಿದರು. ಉದಾರ ದೇಣಿಗೆ ಹಾಗೂ ಚಂದಾ ಮೂಲಕ ಇದಕ್ಕೆ ಸಂಪನ್ಮೂಲ ಕ್ರೋಡೀಕರಿಸಲಾಯಿತು.

ಈ ವಸ್ತುಪ್ರದರ್ಶನ ಕೃಷಿ ಹಾಗೂ ಕೈಗಾರಿಕಾ ಕ್ಷೇತ್ರದ ಅನುಶೋಧನೆಗಳನ್ನು ಪ್ರದರ್ಶಿಸಿತು. ಇದರ ಜತೆಗೆ ವೀಕ್ಷಕ ಸಮೂಹಕ್ಕೆ ಮನೋರಂಜನೆಗಳು, ಬಯೋಸ್ಕೋಪ್ ಮತ್ತು ನೈಟ್ರಸ್ ಆಕ್ಸೈಡ್‌ನಿಂದ ನಗು ತರಿಸುವಂಥ ನಗೆ ಗ್ಯಾಲರಿ ಮತ್ತಿತರ ಆಕರ್ಷಣೆಗಳು ಸೇರಿದ್ದವು. ಆದರೆ ಈ ವಸ್ತುಪ್ರದರ್ಶನದ ಪ್ರಮುಖ ಆಕರ್ಷಣೆ ಎನಿಸಿದ್ದ ಭರವಸೆ ಎಂದರೆ ವಿಮಾನಯಾನ. ವಿಮಾನಗಳು ಹಾಗೂ ಪ್ರತಿದಿನ ವಸ್ತುಪ್ರದರ್ಶನ ಪ್ರದೇಶದಲ್ಲಿ ಹಾರಾಟಕ್ಕೆ ಲಘು ವಿಮಾನಗಳು ಇದ್ದವು, ಇದರ ಹಿಂದೆ ಕ್ಯಾಪ್ಟನ್ ವಾಲ್ಟರ್ ಜಾರ್ಜ್ ವಿಂಧಮ್ ಅವರ ಅಪಾರ ಶ್ರಮ ಅಡಗಿತ್ತು.

ವಿಂಧಮ್ ಬಹುಮುಖ ಪ್ರತಿಭೆೆ. ರಾಜರ ರಾಯಭಾರಿಯಾಗಿ ಕೆಲಸ ನಿರ್ವಹಿಸಿದ್ದ ಅಪೂರ್ವ ರಾಜತಾಂತ್ರಿಕ. ಸಂವಹನ ವ್ಯವಸ್ಥೆ ಸೀಮಿತವಾಗಿದ್ದ ಆ ಅವಧಿಯಲ್ಲಿ, ಕೇವಲ ಅಪಾರ ವಿಶ್ವಾಸ ಹೊಂದಿದ್ದ ವ್ಯಕ್ತಿಗಳಿಗಷ್ಟೇ ಅಂಥ ವಿಶೇಷ ಜವಾಬ್ದಾರಿಗಳನ್ನು ವಹಿಸಲಾಗುತ್ತಿತ್ತು. ಅಪಾರ ಉತ್ಸಾಹಿಯಾಗಿದ್ದ ಅವರು ಹಲವು ಪೇಟೆಂಟ್‌ಗಳನ್ನೂ ಹೊಂದಿದ್ದರು. ಅವರು ವಿಮಾನಯಾನ ಕ್ಷೇತ್ರದ ಪಿತಾಮಹ ಎನಿಸಿಕೊಂಡವರು.

 ವಿಂಧಮ್ ಮಹತ್ವಾಕಾಂಕ್ಷೆ

ವಿಂಧಮ್ ಆರಂಭಿಕ ಹಂತದಲ್ಲಿ ವಿನ್ಯಾಸಗೊಳಿಸಿದ ಮೋಟರ್‌ಕಾರುಗಳು ಸ್ವಲ್ಪಮಟ್ಟಿಗೆ ಯಶಸ್ವಿಯಾಗಿದ್ದವು. 1896ರಲ್ಲಿ ಲಂಡನ್‌ನಿಂದ ಬ್ರಿಂಗ್‌ಟನ್‌ವರೆಗಿನ ಕಾರು ರೇಸ್‌ನಲ್ಲಿ ಅವರು ಭಾಗವಹಿಸಿದ್ದರು. ಚಾಲನಾ ಉತ್ಸಾಹಿಗಳು ಇದನ್ನು ವಿಮೋಚನೆಯ ಓಟ ಎಂದು ಬಣ್ಣಿಸಿದರು. ಏಕೆಂದರೆ ಬ್ರಿಟಿಷ್ ಸರಕಾರ ಅಂತಿಮವಾಗಿ ಲೋಕೊಮೋಟಿವ್ ನಿರ್ಬಂಧ ಕಾಯ್ದೆಯ ಹಲವು ಅಂಶಗಳನ್ನು ಸಡಿಲಿಸಿತು. ಈ ಕಾಯ್ದೆ ಮೋಟಾರು ವಾಹನಗಳ ವೇಗಕ್ಕೆ ಕಡಿವಾಣ ಹಾಕಿದ್ದು ಮಾತ್ರವಲ್ಲದೇ, ಪಾದಚಾರಿಗಳನ್ನು ವಾಹನ ಬರುತ್ತಿರುವ ಬಗ್ಗೆ ಎಚ್ಚರಿಸಲು ವಾಹನಗಳ ಮುಂದೆ ವ್ಯಕ್ತಿಯೊಬ್ಬ ಕೆಂಪು ಬಾವುಟ ಹಿಡಿದುಕೊಂಡು ಓಡುವುದು ಕಡ್ಡಾಯವಾಗಿತ್ತು.

ವಿಂಧಮ್ ಅವರು ಡಿಟ್ಯಾಚೇಬಲ್ ಪಾರ್ಟ್ ಕಂಪೆನಿ ಹೊಂದಿದ್ದರು. ಅಂದರೆ ವಾಹನದ ಚಾಲಕನ ಸೀಟಿನ ಹಿಂಭಾಗವನ್ನು ಅಗತ್ಯಬಿದ್ದಾಗ ಬೇರ್ಪಡಿಸಿ, ಬದಲಾಯಿಸಬಹುದಾದ ಅನುಶೋಧನೆ ಅದು. ಆದರೆ ಸ್ವತಃ ವಿಮಾನವನ್ನು ತಯಾರಿಸುವ ಅವರ ಕನಸು ವಿಫಲವಾಗಿತ್ತು. ಫ್ರಾನ್ಸ್‌ನ ವಾಯ್ಸಿನ್‌ನಂಥ ಕಂಪೆನಿಗಳು ಸಿದ್ಧಪಡಿಸಿದ್ದ ಈ ಆರಂಭಿಕ ಹಂತದ ವಿಮಾನಗಳು ಬಿದಿರು ಅಥವಾ ಲಘುವಾದ ಮರ ಹಾಗೂ ಬಟ್ಟೆಯಿಂದ ಮಾಡಲ್ಪಟ್ಟಿದ್ದವು. ಕಡಿಮೆ ಅಶ್ವಶಕ್ತಿಯ ಇಂಜಿನ್‌ಗಳಿದ್ದವು ಹಾಗೂ ವಿಮಾನದ ಹಿಂಭಾಗ ಗಾಳಿಪಟವನ್ನು ಹೋಲುತ್ತಿತ್ತು.

ವಿಂಧಮ್ ಇತರ ಹಲವು ವಿಧದ ವಿಮಾನಗಳ ಅಭಿವೃದ್ಧಿಯನ್ನು ಉತ್ತೇಜಿಸಿದರು. ವಿಮಾನಯಾನ ಕ್ಲಬ್ (ಏರೋ ಕ್ಲಬ್) ರಚಿಸಿದ ಅವರು, ಡೈಲಿ ಮೇಲ್ ಪತ್ರಿಕೆಯ ಜತೆಗೂಡಿ ಮೊಟ್ಟಮೊದಲ ವಿಮಾನ ಸೌಲಭ್ಯವನ್ನು ದೋವೆರ್‌ನಿಂದ ಕಲಾಯಿಸ್‌ವರೆಗೆ 1909ರ ಜುಲೈ 25ರಂದು ಆರಂಭಿಸಿದರು. 1965ರ ಚಿತ್ರಗಳಲ್ಲಿ ಇಂಗ್ಲೆಂಡ್ ಹಾಗೂ ಫ್ರಾನ್ಸ್ ನಡುವಿನ ಪೈಪೋಟಿಯನ್ನು ಬಿಂಬಿಸಲಾಗಿದ್ದರೂ, ಈ ಅದ್ಭುತ ವ್ಯಕ್ತಿಗಳು ಹಾರುವ ಯಂತ್ರ ಕ್ಷೇತ್ರದಲ್ಲಿ ಬ್ರಿಟನ್ ಹಾಗೂ ಫ್ರಾನ್ಸ್ ನಡುವೆ ಹಲವು ಸಹಭಾಗಿತ್ವದ ಯೋಜನೆಗಳನ್ನು ಕೈಗೆತ್ತಿಕೊಂಡರು. ಅಂದರೆ ವಿಮಾನದ ಬಗೆಗಿನ ಹಲವು ಪ್ರಯೋಗಗಳಲ್ಲಿ ಪರಸ್ಪರ ಕೈಜೋಡಿಸಿದರು.

1910ರಲ್ಲಿ ಅಲಹಾಬಾದ್ ವಸ್ತುಪ್ರದರ್ಶನದ ಸಂಘಟಕರು ವಿಂಧಮ್ ಅವರನ್ನು ಆಹ್ವಾನಿಸಿದರು. ಮರುಯೋಚನೆ ಮಾಡದೇ ವಿಂಧಮ್ ಆಹ್ವಾನ ಸ್ವೀಕರಿಸಿದರು. ಭಾರತೀಯ ಉಪಖಂಡ ಬ್ರಿಟಿಷರ ಆಯಕಟ್ಟಿನ ಸಾಮ್ರಾಜ್ಯಶಾಹಿ ಪ್ರದೇಶವಾಗಿತ್ತು. ಏಕೆಂದರೆ ಉತ್ತರದಿಂದ ರಷ್ಯಾ ತನ್ನ ಪ್ರಭಾವ ವಿಸ್ತರಿಸಲು ಯೋಜನೆ ಹಾಕಿಕೊಂಡದ್ದು, ಬ್ರಿಟನ್‌ಗೆ ತಲೆನೋವಾಗಿತ್ತು. ಕಡಿಮೆ ಗಾಳಿ ಇರುವ ಪರಿಸ್ಥಿತಿಯಲ್ಲಿ ವಿಭಿನ್ನ ಸ್ವರೂಪದ ವಿಮಾನಗಳನ್ನು ದೀರ್ಘದೂರಕ್ಕೆ ಹಾಗೂ ತಡೆ ಇಲ್ಲದ ರೀತಿಯಲ್ಲಿ ಹಾರಿಸುವ ಪ್ರಯೋಗಗಳಿಗೆ ವಿಂಧಮ್ ಅವರಿಗೆ ವೇದಿಕೆ ಸಿಕ್ಕಿದಂತಾಯಿತು. ಇವೆಲ್ಲದರ ಜತೆಗೆ ವಿಮಾನಯಾನದ ಶಕ್ತಿಯ ಹಿನ್ನೆಲೆಯಲ್ಲಿ ರಕ್ಷಣಾ ಸೇವೆಗಳಿಗೆ ಇದನ್ನು ಬಳಕೆ ಮಾಡಿಕೊಳ್ಳುವ ಸಾಧ್ಯತೆಯನ್ನು ಪ್ರದರ್ಶಿಸುವ ಅವಕಾಶವನ್ನೂ ವಿಂಧಮ್ ಈ ಮೂಲಕ ಕಂಡುಕೊಂಡರು.

ಬ್ರಿಟನ್‌ನ ಹಂಬರ್ ಕಂಪೆನಿ ಸಿದ್ಧಪಡಿಸಿದ್ದ ಆರು ವಿಮಾನಗಳು ಎಸ್‌ಎಸ್ ಪರ್ಶಿಯಾ ಹಡಗಿನ ಮೂಲಕ ಮುಂಬೈ ತಲುಪಿದವು. ಮುಂದೆ ಸುಲಭವಾಗಿ ವಿಮಾನಗಳನ್ನು ಜೋಡಿಸಲು ಸಾಧ್ಯವಾಗುವಂತೆ ಅವುಗಳ ಭಾಗಗಳನ್ನು ಪ್ರತ್ಯೇಕಿಸಲಾಗಿತ್ತು. ಇದರಲ್ಲಿ ಎರಡು ಬೈಪ್ಲೇನ್ ಹಾಗೂ ನಾಲ್ಕು ಮೋನೊವಿಮಾನಗಳು ಸೇರಿದ್ದವು. ಮುಂಬೈಗೆ ಆಗಮಿಸಿದ ಈ ಭಾಗಗಳನ್ನು ರೈಲು ಬೋಗಿಗಳಲ್ಲಿ ತುಂಬಿಕೊಂಡು ಅಲಹಾಬಾದ್‌ಗೆ ಸಾಗಿಸಲಾಯಿತು. ಈ ವಿಮಾನಗಳ ಪ್ರದರ್ಶನಕ್ಕೆ ವಿಶೇಷ ಹ್ಯಾಂಗರ್‌ಗಳನ್ನು ಹಾಗೂ ಪ್ರದರ್ಶಕಗಳನ್ನು ರೂಪುಗೊಳಿಸಲಾಗಿತ್ತು. ಇಂಡೋ- ಸೆರಾಸನಿಕ್ ಶೈಲಿಯ ವಿನ್ಯಾಸದಲ್ಲಿ ವಿಮಾನ ಪ್ರದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು.

 ವಿಮಾನಯಾನದ ಆ ಕ್ಷಣ

ಐದು ದಿನಗಳಲ್ಲಿ ಈ ಎಲ್ಲ ವಿಮಾನಗಳನ್ನು ಜೋಡಿಸಿ, ಹಾರಾಟಕ್ಕೆ ಸಿದ್ಧಪಡಿಸಿದ ಆ ಅದ್ಭುತ ಸಾಧನೆ ಅಂದಿನ ಕಾಲದ ಎಲ್ಲ ಪತ್ರಿಕೆಗಳಲ್ಲಿ ದೊಡ್ಡ ಸುದ್ದಿಯಾಯಿತು. ಉತ್ಸಾಹದಿಂದ ವೀಕ್ಷಣೆಗೆ ಆಗಮಿಸುವವರಿಗೆ ವಸ್ತುಪ್ರದರ್ಶನ ಮೈದಾನದ ಸುತ್ತ ದಿನ ದಿನ ವರ್ಣರಂಜಿತ ಸುದ್ದಿಗಳು ಹರಿದಾಡುತ್ತಿದ್ದವು. 1910ರ ಡಿಸೆಂಬರ್ 10ರಂದು ಬ್ರಿಟಿಷ್ ಪೈಲಟ್ ಎಡ್ವರ್ಡ್ ಕೀತ್ ಮೊಟ್ಟಮೊದಲ ಬಾರಿಗೆ ಮೋನೊವಿಮಾನವನ್ನು ಚಲಾಯಿಸಿದರು. ಈ ಸಂದರ್ಭದಲ್ಲಿ ಅವರು ವಾಲ್ಟರ್ ವಿಂಧಮ್ ಅವರನ್ನು ಪ್ರಯಾಣಿಕರಾಗಿ ವಿಮಾನದಲ್ಲಿ ಕರೆದೊಯ್ದರು. ಎರಡನೆ ಪೈಲಟ್ ಹೆವ್ರಿ ಪೆಕ್ವೆಟ್ ಮರುದಿನ ಅಂದರೆ ಡಿಸೆಂಬರ್ 11ರಂದು ತಮ್ಮ ಬೈಪ್ಲೇನ್ ಹಾರಾಟ ಮಾಡಿದರು. ಇಂಥ ಇನ್ನೊಂದು ವಿಮಾನದಲ್ಲಿ ಬನಾರಸ್‌ನ ಮಹಾರಾಜ ಯಾನ ಮಾಡಿದರು ಎಂದು ಹೇಳಲಾಗಿದೆ.

ಇದಾದ ಸ್ವಲ್ಪಸಮಯದಲ್ಲಿ ಅಲಹಾಬಾದ್ ಹೋಲಿ ಟ್ರಿನಿಟಿ ಚರ್ಚ್‌ನ ಚಾಪ್ಲಿನ್ ರೆವರೆಂಡ್ ಡಬ್ಲ್ಯು.ಇ.ಹೊಲ್ಲಾಂಡ್ ಅವರು ವಿಂಧಮ್ ಅವರನ್ನು ಸಂಪರ್ಕಿಸಿ, ಭಾರತೀಯ ವಿದ್ಯಾರ್ಥಿಗಳಿಗೆ ಯೂತ್ ಹಾಸ್ಟೆಲ್ ನಿರ್ಮಾಣಕ್ಕಾಗಿ ನಿಧಿಸಂಗ್ರಹಕ್ಕೆ ನೆರವಾಗು ವಂತೆ ಮನವಿ ಮಾಡಿದರು. ಇದಕ್ಕೆ ಅಂಚೆ ವಿಮಾನ ಸೂಕ್ತ ಎಂಬ ನಿರ್ಧಾರಕ್ಕೆ ಬರಲಾಯಿತು.

 ಯುದ್ಧ ಸಂದರ್ಭದಲ್ಲಿ ವಿಮಾನಯಾನದ ವಿಶ್ವಾಸಾರ್ಹತೆಯ ಸಾಧ್ಯತೆಗಳನ್ನು ಬಿಂಬಿಸಲು ವಿಂಧಮ್ ನಿರ್ಧರಿಸಿದರು. ಆ ಹಂತದಲ್ಲಿ ಕೇವಲ ಮೂರು ವರ್ಷಗಳಲ್ಲಿ ಮಹಾಯುದ್ಧ ಎದುರಾಗುತ್ತದೆ ಎಂಬ ಕಲ್ಪನೆ ಯಾರಿಗೂ ಇರಲಿಲ್ಲ. ಆದರೆ 1905ರಲ್ಲಿ ಜಪಾನ್- ರಶ್ಯಾ ಯುದ್ಧದ ಮೂಲಕ ಮತ್ತು ಇತರ ಕಡೆಗಳಲ್ಲಿ ಸಂಘರ್ಷಗಳ ಮೂಲಕ ಯುದ್ಧದ ಕಾರ್ಮೋಡ ಮಾತ್ರ ಕವಿದಿತ್ತು. 1910ರಲ್ಲಿ ಚೀನಾ, ಟಿಬೆಟ್‌ಗೆ ದಂಡಯಾತ್ರೆ ಕೈಗೊಂಡಿತು. 1911ರಲ್ಲಿ ರಶ್ಯಾ ಉತ್ತರ ಪರ್ಶಿಯಾದ ಟಬ್ರಿಝ್‌ಗೆ ರಷ್ಯಾ ಲಗ್ಗೆ ಹಾಕಿತು.

ವಿಂಧಮ್ ಹಾಗೂ ಹೊಲ್ಲಾಂಡ್ ಅವರು ಅಧಿಕಾರಿಗಳ ಜತೆ ಸೇರಿ ಸಾರ್ವಜನಿಕರಿಗೆ ಜಾಹೀರಾತುಗಳನ್ನು ಪ್ರಚುರಪಡಿಸಿದರು. ಒಂದು ಔನ್ಸ್ ತೂಕದ ಮಿತಿಯ ಪ್ಯಾಕೆಟ್ ಹಾಗೂ ಕವರ್‌ಗಳನ್ನು ರವಾನಿಸಲು ಅವಕಾಶ ಇರುವ ಬಗೆಗೆ ವ್ಯಾಪಕ ಪ್ರಚಾರ ಮಾಡಿದರು. ಇಂತಹ ಅಂಚೆ ವಿಮಾನಗಳಿಗೆ ವಿಶೇಷ ಮುದ್ರೆಯನ್ನು ಅಲಿಗಡದ ಅಂಚೆ ಕಾರ್ಯಾಗಾರದಲ್ಲಿ ಸಿದ್ಧಪಡಿಸಿ ಬಿಡುಗಡೆ ಮಾಡಲಾಯಿತು. ಪರ್ವತಗಳ ಮೇಲೆ ಬೈಪ್ಲೇನ್ ಹಾರಾಡುವ ದೃಶ್ಯವನ್ನು ಒಳಗೊಂಡ ಈ ಅಂಚೆಮುದ್ರೆಯನ್ನು ವಿಂಧಮ್ ವಿನ್ಯಾಸಗೊಳಿಸಿದ್ದರು.

ಫ್ರಾನ್ಸ್‌ನ ವಿಮಾನ ತಯಾರಿಕಾ ಕಂಪೆನಿಯಾದ ಜಾರ್ಜ್ ವೈಸಿನ್‌ನಲ್ಲಿ ಯುವಕ ಪೆಕ್ವೆಟ್‌ಗೆ ವಿಶೇಷ ತರಬೇತಿ ನೀಡಲಾಗಿತ್ತು. ಈತ ಇದಕ್ಕೂ ಮೊದಲು ಬಲೂನ್‌ಗಳಲ್ಲಿ ಹಾರಾಟ ಮಾಡಿದ ಮತ್ತು ದೂರದ ಅರ್ಜೆಂಟೀನಾವರೆಗೆ ವಾಯುನೌಕೆ ಯಾನ ಕೈಗೊಂಡ ಪೆಕ್ವೆಟ್, ಚಿರಸ್ಮರಣೀಯ ಹಂಬರ್- ಸೊಮ್ಮೆರ್ ಬೈಪ್ಲೇನ್ ಚಾಲನೆ ಮಾಡಿದರು. 1911ರ ಫೆಬ್ರವರಿ 18ರಂದು ಸಂಜೆ 5.30ಕ್ಕೆ ಅವರು ಈ ಐತಿಹಾಸಿಕ ಯಾನ ಆರಂಭಿಸಿದಾಗ ಎರಡೂ ಕೈಗಳಲ್ಲಿ ವಾಚು ಹಾಗೂ ಅಲ್ಟಿಮೀಟರ್ ಧರಿಸಿದ್ದರು. ಪೆಕ್ವೆಟ್ ಅವರು, ಯಮುನಾ ನದಿಯ ಮೇಲ್ಭಾಗದಲ್ಲಿ ಐದು ಮೈಲು ದೂರದ ನೈನಿ ಜಂಕ್ಷನ್‌ನತ್ತ ವಿಮಾನಯಾನ ಮಾಡಬೇಕಿತ್ತು. ಇದು ಅಲಹಾಬಾದ್- ಮುಂಬೈ ಮಾರ್ಗದ ಅತಿಹತ್ತಿರದ ಕೇಂದ್ರವಾಗಿತ್ತು. ನಿರ್ದಿಷ್ಟ ಕೇಂದ್ರದಲ್ಲಿ ವಿಮಾನ ಇಳಿಯುವುದಕ್ಕೆ ನೈನಿ ಕೇಂದ್ರೀಯ ಕಾರಾಗೃಹದ ಕೈದಿಗಳು ಸಂಕೇತ ನೀಡಬೇಕಿತ್ತು. ನೈನಿಗೆ ಹೋಗಿ ವಾಪಸು ಅಲಹಾಬಾದ್‌ಗೆ ಬರುವ ಈ ಯಾನಕ್ಕೆ 27 ನಿಮಿಷ ಬೇಕಾಯಿತು.

ಈ ಪ್ರದರ್ಶನ ಫೆಬ್ರವರಿ 28ರಂದು ಮುಕ್ತಾಯವಾಗಿ, ಮುಂಬೈಗೆ ವಿಮಾನವನ್ನು ವಾಪಸು ಒಯ್ಯಲಾಯಿತು. ಈ ಹಂತದಲ್ಲಿ, ಕೀತ್ ಡೇವಿಸ್ ಅವರು ಓವೆಲ್‌ನಲ್ಲಿ ರಕ್ಷಣಾ ಪಡೆಗಳಿಗಾಗಿ ಪ್ರಯೋಗಾತ್ಮಕ ಹಾರಾಟಗಳನ್ನು ನಡೆಸಿದರು. ರಾತ್ರಿಯ ವೇಳೆ ವಿಮಾನ ಇಳಿಯಲು ಇಡೀ ಮೈದಾನವನ್ನು ಅನಿಲ ದೀಪಗಳಿಂದ ಬೆಳಗಬೇಕಾಗುತ್ತಿತ್ತು. ಇಂಗ್ಲೆಂಡಿಗೆ ವಾಪಸಾದ ವಿಂಧಮ್, ಕಿಂಗ್ ಜಾರ್ಜ್-5 ಅವರ ಪಟ್ಟಾಭಿಷೇಕ ಸಂಭ್ರಮಕ್ಕೆ ವಿಮಾನ ಸೌಲಭ್ಯವನ್ನು ಕಲ್ಪಿಸುವ ಯೋಜನೆ ರೂಪಿಸಿದರು. ಹೀಗೆ ಬ್ರಿಟನ್‌ನ ಹೆಂಡನ್‌ನಿಂದ ವಿಂಡ್ಸರ್‌ವರೆಗೆ 1911ರಲ್ಲಿ ವಿಮಾನ ಹಾರಾಡಿತು.

ಅಪೂರ್ವ ಹೊಟೇಲ್ ಉದ್ಯಮಿ

ಪೆಕ್ವೆಟ್ ಅವರು ಮೊದಲ ಅಂಚೆ ವಿಮಾನದ ಹಾರಾಟ ನಡೆಸಿದರೂ, ದಾಖಲೆಗಳ ಪ್ರಕಾರ ಭಾರತದಲ್ಲಿ ಅದು ಮೊದಲ ಹಾರಾಟವಾಗಿರಲಿಲ್ಲ. 1910ರ ಮಾರ್ಚ್‌ನಲ್ಲಿ ಅಂದರೆ ವಿಂಧಮ್ ತಂಡದ ಈ ಪ್ರಯತ್ನಕ್ಕೆ 10 ತಿಂಗಳು ಮೊದಲು, ಇಟೆಲಿಯ ಮೆಸ್ಸಿನಾ ಪಟ್ಟಣ ಮೂಲದವರಾದ ಮದ್ರಾಸ್‌ನ ತಿನಸು ಹಾಗೂ ಹೊಟೇಲ್ ಉದ್ಯಮಿ ಜಿಯಾಕೊಮೊ ಡಿ ಏಂಜೆಲಿಸ್ ವಿಮಾನಹಾರಾಟ ಕಲಿತಿದ್ದರು. ಡಿ ಏಂಜೆಲೀಸ್ ಅವರ ಈ ಕಥೆಯನ್ನು ಮುಂದೆ ಚಿಲಿಯಲ್ಲಿ ನೆಲೆಸಿದ ಅವರ ವಂಶಸ್ಥರು ನೆನಪಿಸಿಕೊಂಡಿದ್ದಾರೆ.

ಸಿಂಪೋನ್ಸ್ ಎಂಬ ಸ್ಥಳೀಯ ಕಂಪೆನಿ ಅಭಿವೃದ್ಧಿಪಡಿಸಿದ ಬೈಪ್ಲೇನ್ ವಿಮಾನವನ್ನು ಖರೀದಿಸಲು ಅವರು ಯೋಚಿಸಿದ್ದರು. ಮದ್ರಾಸ್‌ನ ಪಲ್ಲಾವರಂ ದ್ವೀಪದ ಮೈದಾನದ ಮೇಲೆ ಡಿ ಏಜೆಂಲಿಸ್ ಅವರು ಇದರ ಹಾರಾಟ ನಡೆಸಿದ್ದರು. ಈ ಮೊದಲ ಹಾರಾಟ ಅತ್ಯಂತ ಯಶಸ್ವಿಯಾಗಿತ್ತು ಹಾಗೂ ಡಿ ಏಂಜಲಿಸ್ ಅವರು ಅಲ್ಲಿ ನೆರೆದಿದ್ದ ಪ್ರೇಕ್ಷಕರನ್ನು ಪ್ರಯಾಣಿಕರಾಗಿ ಬರುವಂತೆ ಆಹ್ವಾನಿಸಿದ್ದರು.

ವಾಸನ್ ಎಂಬ ಯುವಕ ವಿಮಾನಯಾನಕ್ಕೆ ಸ್ವಯಂ ಪ್ರೇರಿತವಾಗಿ ಮುಂದೆಬಂದ. ಈತ ಮುಂದೆ ಕೋಲಾರ ಚಿನ್ನದ ಗಣಿಯಲ್ಲಿ ಕೆಲಸ ಮಾಡಿದ್ದ. ಈತ ಕವಿ ಸುಬ್ರಹ್ಮಣ್ಯ ಭಾರತಿ ಅವರಿಗೂ ಪರಿಚಿತ. ಸುಬ್ರಹ್ಮಣ್ಯ ಭಾರತಿ ಮುಂದೆ ತಮ್ಮ ಪತ್ರಿಕೆಯಲ್ಲಿ ಈ ಯಾನದ ಬಗ್ಗೆ ಬರೆದಿದ್ದರು. ತಮಿಳು ಕಾರ್ಮಿಕರನ್ನು ಬಳಸಿಕೊಂಡು ಬ್ರಿಟಿಷ್ ಕಂಪೆನಿ ಇದನ್ನು ಸೃಷ್ಟಿಸಿದೆ ಎಂದು ವಿವರಿಸಿದ್ದರು. ಡಿಏಂಜಲಿಸ್ ಅವರ ಪ್ರಯತ್ನ ಅಷ್ಟೊಂದು ಬೆಳಕಿಗೆ ಬರಲಿಲ್ಲ. ಸೇನೆ ಇದರ ಸಾಧ್ಯತೆಗಳ ಪ್ರಯೋಜನ ಪಡೆಯಲು ಮುಂದಾದ ಬಳಿಕ ವಿಮಾನ ಸಂಶೋಧನೆ ದುಬಾರಿಯಾಗುತ್ತಾ ಹೋಯಿತು.

ಬೆಲ್ಜಿಯಂನ ಪೀರ್ ಡೆ ಕೇಟರ್ಸ್‌ ವಿಮಾನಯಾನ ಜೋಡಿ ಹಾಗೂ ಜಾನ್ ಹಾಗೂ ಜೂಲ್ಸ್ ಟೈಕ್ ಸಹೋದರರು ಭಾರತಕ್ಕೆ ಪ್ರತ್ಯೇಕವಾಗಿ 1910ರ ವೇಳೆಗೆ ಆಗಮಿಸಿದ್ದರು. ಕೋಲ್ಕತ್ತಾದ ಟಾಲಿಗಂಜ್ ಕ್ಲಬ್‌ನಲ್ಲಿ ವಿಮಾನಯಾನ ಪ್ರದರ್ಶನ ಏರ್ಪಡಿಸಿದ್ದರು. ಮುಂದೆ ಮುಂಬೈನ ಹಿರಿಯ ಅಧಿಕಾರಿಗಳು ಅವಕಾಶ ನಿರಾಕರಿಸಿದರು.

ಟೈಕ್ ಅವರು ತಮ್ಮ ಹೆನ್ರಿ ಪಾರ್ಮನ್ ವಿಮಾನವನ್ನು ನಗರದ ಮೇಲೆ ಸುಮಾರು 45 ನಿಮಿಷ ಹಾರಾಟ ನಡೆಸುವ ಮೂಲಕ ಕೆಳಗಿನಿಂದ ವೀಕ್ಷಿಸುತ್ತಿದ್ದ ಜನಸ್ತೋಮ ನಿಬ್ಬೆರಗಾಗುವಂತೆ ಮಾಡಿದ್ದರು. ಬರೋನ್ ಡೆ ಕೇಟರ್ಸ್‌ ಅಲ್ಪ ಅವಧಿಯ 20 ಕ್ಷಿಪ್ರ ಟ್ರಿಪ್ ಕೈಗೊಂಡು ಗಮನ ಸೆಳೆದಿದ್ದರು. ಪ್ರೇಕ್ಷಕರಲ್ಲೇ ಆಯ್ದ ಮಂದಿಗೆ ವಿಮಾನಯಾನ ಸೌಲಭ್ಯವನ್ನೂ ಅವರು ಕಲ್ಪಿಸಿದ್ದರು. ಈ ವಿಮಾನಯಾನದಲ್ಲಿ ಯಾನ ಕೈಗೊಂಡವರಲ್ಲಿ ಕೂಚ್‌ಬಿಹಾರ್ ಮಹಾರಾಜನ ಸಹೋದರಿಯೂ ಸೇರಿದ್ದರು. ಇವರ ಬಗ್ಗೆ ಇತಿಹಾಸ ಕೃತಿಗಳಲ್ಲಿ ಎನ್.ಸಿ.ಸೆನ್ ಎಂದಷ್ಟೇ ಉಲ್ಲೇಖ ಇದೆ. ಬಹುಶಃ ಇವರು ಪ್ರಯಾಣಿಕರಾಗಿ ವಿಮಾನಯಾನ ಕೈಗೊಂಡ ವಿಶ್ವದ ಮಹಿಳೆ ಇರಬಹುದು.

ವಿಂಧಮ್ ಅವರು ವಿಮಾನಯಾನವನ್ನು ವೃತ್ತಿಪರವಾಗಿ ಬೆಳೆಸಿದರು. ಪೆಕ್ವೆಟ್ ಹಾಗೂ ಡೇವಿಸ್ ಅವರು ಪ್ರದರ್ಶಕ ವಿಮಾನದಲ್ಲಿ ಹೆಸರು ಗಳಿಸಿದರು. ಆದರೆ ಈ ಆರಂಭಿಕ ಯಾನದ ಬಳಿಕ ಒಂದನೆ ಮಹಾಯುದ್ಧದ ಹಿನ್ನೆಲೆಯಲ್ಲಿ ಬಹುತೇಕ ವಿಮಾನಯಾನ ಕ್ಷೇತ್ರ ಮಿಲಿಟರಿಯ ಅಗತ್ಯತೆಗಳ ಮೇಲೆಯೇ ಕೇಂದ್ರೀಕೃತವಾಯಿತು. 1930ರ ದಶಕದವರೆಗೆ ಯೂರೋಪ್ ವೈಮಾನಿಕ ಯುದ್ಧನೌಕೆಗಳ ಮೇಲೆ ಗಮನ ಕೇಂದ್ರೀಕರಿಸಿತ್ತು. ಆದರೆ ಸರಣಿಯೋಪಾದಿಯಲ್ಲಿ ಅಪಘಾತಗಳು ಸಂಭವಿಸಿದ ಹಿನ್ನೆಲೆಯಲ್ಲಿ ಮುಂದಿನ ಹಂತದಲ್ಲಿ ಇದನ್ನು ಕೈಬಿಟ್ಟಿತು.

ಮೊದಲ ಮಹಾಯುದ್ಧದ ಅವಧಿಯಲ್ಲಿ ಅಲ್ಯುಮಿನಿಯಂನಿಂದ ಮಾಡಲ್ಪಟ್ಟ ವಿಮಾನ ವಿನ್ಯಾಸಗಳು ಬಳಕೆಗೆ ಬಂದವು. ಆದರೆ ಇದಕ್ಕೂ ಮುನ್ನ 1920ರ ದಶಕದಲ್ಲೇ ಅಮೆರಿಕದ ಇಂಜಿನಿಯರ್ ವಿಲಿಯಂ ಬುಷ್ನೆಲ್ ಸ್ಟಾಟ್ ಹಾಗೂ ಸೋವಿಯತ್‌ನ ಆಂಡ್ರಾಯ್ ಟೊಪೊಲೋವ್ ಈ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನಗಳನ್ನು ನಡೆಸಿದ್ದರು.

Writer - ಅನು ಕುಮಾರ್

contributor

Editor - ಅನು ಕುಮಾರ್

contributor

Similar News