ಟ್ರಂಪ್ ಆಡಳಿತದ ಅಮೆರಿಕದಲ್ಲಿ ನಾನು ಅನಪೇಕ್ಷಿತ ವ್ಯಕ್ತಿ : ಭೌತ ವಿಜ್ಞಾನಿ ಸ್ಟೀಫನ್ ಹಾಕಿಂಗ್

Update: 2017-03-21 15:06 GMT

ಲಂಡನ್, ಮಾ. 21: ಡೊನಾಲ್ಡ್ ಟ್ರಂಪ್ ಆಳ್ವಿಕೆಯ ಅಮೆರಿಕಕ್ಕೆ ತನಗೆ ಪ್ರವೇಶ ಇರಲಾರದು ಎಂಬುದಾಗಿ ಖ್ಯಾತ ಬ್ರಿಟಿಶ್ ಭೌತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ವಿಷಾದಿಸಿದ್ದಾರೆ. ಅಮೆರಿಕದ ಅಧ್ಯಕ್ಷರ ಆದ್ಯತೆ ತನ್ನ ಮತದಾರರನ್ನು ತೃಪ್ತಿಪಡಿಸುವುದಾಗಿದೆ ಹಾಗೂ ಅವರ ಮತದಾರರು ‘ಉದಾರವಾದಿಗಳೂ (ಲಿಬರಲ್) ಅಲ್ಲ, ಜ್ಞಾನಿಗಳೂ ಅಲ್ಲ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘‘ನಾನು ಇನ್ನೊಮ್ಮೆ ಅಮೆರಿಕಕ್ಕೆ ಹೋಗಿ ಇತರ ವಿಜ್ಞಾನಿಗಳ ಜೊತೆ ಮಾತನಾಡಲು ಬಯಸಿದ್ದೇನೆ. ಆದರೆ, ನಾನು ಅಲ್ಲಿಗೆ ಸ್ವೀಕಾರಾರ್ಹವಾಗಿಲ್ಲ ಎಂಬ ಭಯ ಕಾಡುತ್ತಿದೆ’’ ಎಂದು ಜಗತ್ತಿನ ಶ್ರೇಷ್ಠ ವಿಜ್ಞಾನಿಗಳ ಪೈಕಿ ಒಬ್ಬರಾಗಿರುವ ಡಾ. ಹಾಕಿಂಗ್ ‘ಐಟಿವಿ ನ್ಯೂಸ್’ಗೆ ಹೇಳಿದರು.

‘‘ಜಾಗತೀಕರಣದಿಂದ ಬೇಸತ್ತು ಅದರ ವಿರುದ್ಧ ಬಂಡಾಯ ಸಾರಿದ ಜನರಿಂದ ಟ್ರಂಪ್ ಆಯ್ಕೆಯಾಗಿದ್ದಾರೆ. ಅವರ ಆದ್ಯತೆ ತನ್ನ ಮತದಾರರನ್ನು ತೃಪ್ತಿಪಡಿಸುವುದು. ಅವರು ಉದಾರವಾದಿಗಳೂ ಅಲ್ಲ, ಅಷ್ಟೊಂದು ತಿಳುವಳಿಕೆ ಉಳ್ಳವರೂ ಅಲ್ಲ’’ ಎಂದು 75 ವರ್ಷದ ವಿಜ್ಞಾನಿ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News