×
Ad

ಗಾಝಾದಲ್ಲಿ ತನ್ನ ಪೊಲೀಸರನ್ನು ನಿಯೋಜಿಸಲು ಹಮಾಸ್ ಪ್ರಯತ್ನ: ವರದಿ

Update: 2026-01-28 21:30 IST

Photo Credit : NDTV 

ಗಾಝಾ, ಜ.28: ನಿಶಸ್ತ್ರೀಕರಣ ಮಾತುಕತೆಗೂ ಮುನ್ನ, ಗಾಝಾದಲ್ಲಿನ ಪ್ರಸ್ತಾವಿತ ಅಮೆರಿಕ ಬೆಂಬಲಿತ ಫೆಲೆಸ್ತೀನಿಯನ್ ಆಡಳಿತಕ್ಕೆ ತನ್ನ 10,000 ಪೊಲೀಸರನ್ನು ಸೇರಿಸಿಕೊಳ್ಳಲು ಹಮಾಸ್ ಪ್ರಯತ್ನಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಹಮಾಸ್ ಗುಂಪು ಗಾಝಾದ ಸುಮಾರು 50% ಪ್ರದೇಶದ ಮೇಲೆ ನಿಯಂತ್ರಣ ಹೊಂದಿದೆ. ಅಮೆರಿಕಾ ಅಧ್ಯಕ್ಷ ಟ್ರಂಪ್ ಮಧ್ಯಸ್ಥಿಕೆಯಲ್ಲಿ ಸಹಿ ಹಾಕಲಾದ ಒಪ್ಪಂದದ ಪ್ರಕಾರ, ಹಮಾಸ್ ಶಸ್ತ್ರಾಸ್ತ್ರ ತ್ಯಜಿಸಬೇಕು ಮತ್ತು ಇಸ್ರೇಲ್ ಪಡೆಗಳು ಇನ್ನಷ್ಟು ಹಿಂದೆ ಸರಿಯಬೇಕು. ಎರಡನೇ ಹಂತದಲ್ಲಿರುವ 20 ಅಂಶಗಳ ಶಾಂತಿ ಯೋಜನೆ ಅಮೆರಿಕ ಮೇಲ್ವಿಚಾರಣೆಯಲ್ಲಿರುವ, ಹಮಾಸ್ ಅನ್ನು ಒಳಗೊಂಡಿರದ ಗಾಝಾ ಆಡಳಿತಕ್ಕಾಗಿ ರಾಷ್ಟ್ರೀಯ ಸಮಿತಿ (ಎನ್‌ಸಿಎಜಿ)ಗೆ ಆಡಳಿತ ಹಸ್ತಾಂತರಿಸಲು ಕರೆ ನೀಡುತ್ತದೆ.

ಗಾಝಾದಲ್ಲಿ ಹಮಾಸ್ ನಡೆಸುತ್ತಿರುವ ಆಡಳಿತವು ತನ್ನ 40,000ಕ್ಕೂ ಹೆಚ್ಚು ನಾಗರಿಕ ಸೇವಕರು ಮತ್ತು ಭದ್ರತಾ ಸಿಬ್ಬಂದಿಯನ್ನು ಎನ್‌ಸಿಎಜಿಯೊಂದಿಗೆ ಸಹಕರಿಸುವಂತೆ ಒತ್ತಾಯಿಸಿದ್ದು, ಅವರನ್ನು ಹೊಸ ಸರ್ಕಾರಕ್ಕೆ ಸೇರಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದೆ. ಇದರಲ್ಲಿ ಸುಮಾರು 10,000 ಪೊಲೀಸರು ಸೇರಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ‘ರಾಯಿಟರ್ಸ್’ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News