×
Ad

ಫಾ.ಮುಲ್ಲರ್ ಆಸ್ಪತ್ರೆಯ ನಿರ್ದೇಶಕ ರೆ.ಫಾ.ಪ್ಯಾಟ್ರಿಕ್ ರೊಡ್ರಿಗಸ್ ನಿಧನ

Update: 2017-03-23 21:29 IST

ಮಂಗಳೂರು, ಮಾ. 23: ನಗರದ ಫಾದರ್ ಮುಲ್ಲರ್ ಆಸ್ಪತ್ರೆಯ ನಿರ್ದೇಶಕ ರೆ.ಫಾ.ಪ್ಯಾಟ್ರಿಕ್ ರೊಡ್ರಿಗಸ್ ಇಂದು ನಿಧನರಾದರು. ಕಳೆದ ಎರಡೂ ವರ್ಷಗಳಿಂದ ಅನಾರೋಗ್ಯದಿಂದಿದ್ದ ಅವರು ಇಂದು ಸಂಜೆ ಕೊನೆಯುಸಿರೆಳೆದರು.

ರೆ.ಫಾ.ಪ್ಯಾಟ್ರಿಕ್ ರೊಡ್ರಿಗಸ್ ಅವರು 17-8-1951ರಂದು ಜನಿಸಿ, 4-5-1978ರಂದು ಮಂಗಳೂರು ಧರ್ಮಪ್ರಾಂತ್ಯದ ಧರ್ಮಗುರುಗಳಾಗಿ ದೀಕ್ಷೆ ಪಡೆದರು. ತನ್ನ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿ ಕರ್ನಾಟಕ ಯುನಿವರ್ಸಿಟಿಯಲ್ಲಿ ಎಂ. ಎ. ಪದವಿ, ನ್ಯೂಯಾರ್ಕ್ ಯುನಿವರ್ಸಿಟಿಯಲ್ಲಿ ಎಂ.ಪಿ.ಎಚ್ (ಮಾಸ್ಟರ್ ಇನ್ ಪಬ್ಲಿಕ್ ಹೆಲ್ತ್, ಬೊಸ್ಟನಿನ ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್‌ನಿಂದ ಪಿನಾಸ್ಯಿಯಲ್ ಮ್ಯಾನೇಜ್‌ಮೆಂಟ್‌ನಲ್ಲಿ ಪಿ.ಜಿ. ಕೋರ್ಸ್‌ನ್ನು ಮುಗಿಸಿ, ಬಾರ್ಕೂರ್‌ನ ಹಾಗೂ ಕಿನ್ನಿಗೋಳಿ ಚರ್ಚಿನಲ್ಲಿ ಸಹಾಯಕ ಧರ್ಮಗುರುಗಳಾಗಿದ್ದರು. ಸಂಪಾಜೆ ಚರ್ಚಿನಲ್ಲೂ ಪ್ರಧಾನ ಧರ್ಮಗುರುಗಳಾಗಿ ಸೇವೆ ಸಲ್ಲಿಸಿದ್ದರು.

1991ರಲ್ಲಿ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಸಹಾಯಕ ನಿರ್ದೇಶಕರಾಗಿ, 1991ರಿಂದ 1997ರ ವರೆಗೆ ಸಂತ ಜೋನ್ ಮೆಡಿಕಲ್ ಕಾಲೇಜಿನಲ್ಲಿ ಆಡಳಿತಾಧಿಕಾರಿ, 1998 ರಿಂದ 2000ದ ವರೆಗೆ ಅಮೆರಿಕದಲ್ಲಿ ಹೆಚ್ಚಿನ ವಿದ್ಯಾಭ್ಯಾಸ, 2000-2003ರವರೆಗೆ ಬೆಂಗಳೂರಿನ ಸಂತ ಜೋನ್ ನ್ಯಾಷನಲ್ ಅಕಾಡೆಮಿ ಆಫ್ ಹೆಲ್ತ್ ಸಾಯನ್ಸ್‌ನಲ್ಲಿ ಅಸೋಸಿಯೇಟ್ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.
2003-2007ರ ವರೆಗೆ ಕಿನ್ನಿಗೋಳಿ ಚರ್ಚ್‌ನ ಧರ್ಮಗುರುಗಳಾಗಿ ಸೇವೆ ಸಲ್ಲಿಸಿ 2007ರಿಂದ ಇಂದಿನವರೆಗೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News