ಮೊಬೈಲ್ ಖರೀದಿ ಆನ್‌ಲೈನ್-ಆಫ್‌ಲೈನ್!

Update: 2017-03-25 09:35 GMT

ಸುಮಾರು ಐದು ವರ್ಷಗಳ ಹಿಂದೆ ಒಟ್ಟು ಮೊಬೈಲ್ ಮಾರಾಟದಲ್ಲಿ ಆನ್‌ಲೈನ್ ಮಾರಾಟದ ಪಾಲು ಇದ್ದದ್ದು ಶೇ.5ರಷ್ಟು ಮಾತ್ರ. ಆದರೆ, ಇವತ್ತು ಅದರ ಪಾಲು 25ರಿಂದ 30 ಶೇಕಡಾದಷ್ಟಾಗಿದೆ. ಯಾಕೆ ಹೀಗೆ?

ಕೆಲವು ಮೊಬೈಲ್‌ಗಳು ಈಗ ಆನ್‌ಲೈನ್‌ನಲ್ಲಿ ಮಾತ್ರವೇ ಲಭ್ಯವಿದೆ. ಮುಂದೆ ಆನ್‌ಲೈನ್ ಮಾರಾಟದ ಪ್ರಮಾಣ 2020ರ ಹೊತ್ತಿಗೆ ಶೇ.50ರಷ್ಟಾಗುತ್ತದೆ ಎಂದು ಅಂದಾಜು. ಇದಕ್ಕೆ ಮೊಬೈಲ್ ಕಂಪೆನಿಯವರು ಕೊಡುವ ಕಾರಣ ಖರ್ಚಿನ ಉಳಿತಾಯ.

ಆಫ್ ಲೈನ್ ಅಥವಾ ರೀಟೇಲ್ ಔಟ್‌ಲೆಟ್‌ಗಳ ಮೂಲಕ ಮಾರಾಟ ಮಾಡಿದರೆ ಅದರ ಮಾರುಕಟ್ಟೆ ಖರ್ಚು ಅಧಿಕ. ಮಾರುಕಟ್ಟೆ ಪ್ರತಿನಿಧಿ, ಮೂಲಸೌಕರ್ಯಗಳಿಗೆ ಬೇಕಾಗುವ ಖರ್ಚುಗಳು ಅಧಿಕ. ಅಲ್ಲದೆ, ಭಾರತದಂತಹ ದೊಡ್ಡ ಮಾರುಕಟ್ಟೆಯ ದೇಶದಲ್ಲಿ ಗ್ರಾಹಕರನ್ನು ಅಂಗಡಿಗೆ ಬರುವಂತೆ ಆಕರ್ಷಿಸುವುದು ಹಾಗೂ ಅವರನ್ನು ತನ್ನ ಹೊಸ ಬ್ರಾಂಡ್ ಅನ್ನೇ ಕೊಳ್ಳುವಂತೆ ಮಾಡುವುದು ಸುಲಭ ಸಾಧ್ಯವಲ್ಲ. ಆದರೆ, ಆನ್‌ಲೈನ್ ಮಾರಾಟದಲ್ಲಿ, ಗ್ರಾಹಕರಿಗೆ ಇಷ್ಟವಾದರೆ, ಅದಕ್ಕೆ ಕೆಲವೇ ಸಮಯದಲ್ಲಿ ಇನ್ನೂ ಅಧಿಕ ಬೇಡಿಕೆ ಬರುತ್ತದೆ. ಈ ಸಮಯದಲ್ಲಿ ಆನ್‌ಲೈನ್ ಮಾರಾಟಕ್ಕೂ ಸರಕನ್ನು ಧೈರ್ಯದಲ್ಲಿ ಸರಬರಾಜು ಮಾಡಬಹುದು ಎನ್ನುವುದು ಅವರ ಅಭಿಪ್ರಾಯ.

ಅಂದಹಾಗೆ, ಸಲ್ಮಾನ್ ಖಾನ್ ಒಡೆತನದಲ್ಲಿ ‘ಬೀಯಿಂಗ್ ಸ್ಮಾರ್ಟ್’ ಎಂಬ ಮೊಬೈಲ್ ಕಂಪೆನಿ ಆರಂಭವಾಗಿರುವುದು ಈಗಾಗಲೇ ಗೊತ್ತಿರಬಹುದು. ಇದೂ ಕೂಡಾ ಆನ್‌ಲೈನ್ ಮಾರಾಟವನ್ನೇ ನೆಚ್ಚಿಕೊಳ್ಳಲಿದೆಯಂತೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News