×
Ad

ಮಾಧ್ಯಮಗಳ ನಿಯಂತ್ರಣಕ್ಕೆ ಜಂಟಿ ಸದನ ಸಮಿತಿ ರಚನೆ

Update: 2017-03-28 20:43 IST

ಬೆಂಗಳೂರು, ಮಾ.28: ಮಾಧ್ಯಮಗಳ ನಿಯಂತ್ರಣಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ.ಆರ್.ರಮೇಶ್‌ಕುಮಾರ್ ಅಧ್ಯಕ್ಷತೆಯಲ್ಲಿ ಜಂಟಿ ಸದನ ಸಮಿತಿಯನ್ನು ಸ್ಪೀಕರ್ ಕೆ.ಬಿ.ಕೋಳಿವಾಡ ನೇಮಕ ಮಾಡಿದ್ದಾರೆ.

ಸಮಿತಿಯಲ್ಲಿ ಶಾಸಕರಾದ ಅಶೋಕ್‌ಪಟ್ಟಣ್, ಬಿ.ಆರ್.ಯಾವಗಲ್, ಎನ್.ಎ.ಹಾರೀಸ್, ಶಿವರಾಜತಂಗಡಗಿ, ಎಸ್.ಟಿ.ಸೋಮಶೇಖರ್, ಭರಮಗೌಡ ಕಾಗೆ, ಸುರೇಶ್‌ಗೌಡ, ಸಾ.ರಾ.ಮಹೇಶ್, ನಾರಾಯಣಗೌಡರನ್ನು ಸದನ ಸಮಿತಿ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ವಿಧಾನಪರಿಷತ್ತಿನ ಮೂವರು ಸದಸ್ಯರನ್ನು ಆಯ್ಕೆ ಮಾಡುವ ಅಧಿಕಾರವನ್ನು ಸಭಾಪತಿಗೆ ನೀಡಲಾಗಿದೆ.

ಸದನ ಸಮಿತಿ ರಚನೆ ಬೇಡ: ಮಾಧ್ಯಮಗಳ ನಿಯಂತ್ರಣಕ್ಕೆ ಸದನ ಸಮಿತಿ ರಚನೆ ಮಾಡದಂತೆ ಒತ್ತಾಯಿಸಿ ಉನ್ನತ ಶಿಕ್ಷಣ ಸಚಿವ ಬಸಜರಾಜರಾಯರಡ್ಡಿ, ಸ್ಪೀಕರ್ ಕೆ.ಬಿ.ಕೋಳಿವಾಡಗೆ ಪತ್ರ ಬರೆದಿದ್ದಾರೆ.

ಸದನ ಸಮಿತಿ ರಚನೆ ಮಾಡುವುದರಿಂದ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರಕ್ಕೆ ಅಡ್ಡಿಯಾಗುತ್ತದೆ. ಸದನ ಸಮಿತಿ ರಚನೆ ಮಾಡುವ ಬದಲು, ಮಾಧ್ಯಮಗಳಿಗೆ ಸ್ವಯಂ ನಿಯಂತ್ರಣ ವಿಧಿಸುವ ನಿಯಮಾವಳಿಗಳನ್ನು ರಚನೆ ಮಾಡಬೇಕು. ಹಾಗೂ ಪ್ರಮುಖ ಮಾಧ್ಯಮಗಳ ಸಂಪಾದಕರನ್ನು ಒಳಗೊಂಡ ಮಾರ್ಗದರ್ಶಕ ಸಮಿತಿ ರಚನೆ ಮಾಡುವುದು ಸೂಕ್ತ ಎಂದು ಬಸವರಾಜರಾಯರಡ್ಡಿ ತಮ್ಮ ಪತ್ರದಲ್ಲಿ ಸಲಹೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News