ರಾಜ್ಯದಲ್ಲಿ ಬರ, ಆಡಂಬರದ ಯುಗಾದಿ ಬೇಡ: ವಾಟಾಳ್ ನಾಗರಾಜ್‌

Update: 2017-03-29 07:36 GMT

ಬೆಂಗಳೂರು, ಮಾ.29: ರಾಜ್ಯದಲ್ಲಿ ಬರ ಸಮಸ್ಯೆ ಹೆಚ್ಚಾಗಿದ್ದು, ಕುಡಿಯುವ ನೀರು, ಜಾನುವಾರುಗಳ ಮೇವುಗಾಗಿ ತೀವ್ರ ಸಂಕಷ್ಟ ಎದುರಾಗಿದೆ.ಹೀಗಾಗಿ ಯಾರು ಆಡಂಬರದ ಯುಗಾದಿ ಹಬ್ಬ ಆಚರಣೆ ಮಾಡಬೇಡಿ ಎಂದು ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಹೇಳಿದ್ದಾರೆ.

ಬುಧವಾರ ನಗರದ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಬೇವು, ಬೆಲ್ಲ ನೀಡಿ ಯುಗಾದಿ ಹಬ್ಬದ ಶುಭಾಷಯ ತಿಳಿಸುವ ಜೊತೆಗೆ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಅವರು, ಬರ ಪೀಡಿತ ಪ್ರದೇಶಗಳಿಗೆ ನೀರು, ಮೇವು ಒದಗಿಸುವಂತೆ ಒತ್ತಾಯಿಸಿ ಇಂದು ಪ್ರತಿಭಟಿಸಿದ್ದೇವೆ ಎಂದರು.

ಚಾಮರಾಜನಗರ ಗಡಿ ಪ್ರದೇಶದಲ್ಲಿ ಜಾನುವಾರುಗಳು ಸಾಯುತ್ತಿವೆ.ಅದೇ ರೀತಿ, ಮಹದೇಶ್ವರ ಬೆಟ್ಟ, ಬಿಳಿಗಿರಿರಂಗ ಬೆಟ್ಟದಲ್ಲಿ ಕಾಡ್ಗಿಚ್ಚಿನಿಂದ ಅನಾಹುತ ಉಂಟಾಗಿದೆ.ಹೀಗಾಗಿ, ರಾಜ್ಯ ಸರಕಾರ ಕೂಡಲೇ ಈ ಪ್ರದೇಶಕ್ಕೆ ಅಗತ್ಯ ಮೇವು, ನೀರು ಒದಗಿಸಬೇಕೆಂದು ಆಗ್ರಹಿಸಿದರು.ಮಾಧ್ಯಮಗಳ ವಿರುದ್ಧ ಸದನ ಸಮಿತಿ ರಚನೆ ವಿಚಾರದ ಬಗ್ಗೆ ಮಾತನಾಡಿದ ಅವರು, ಮಾಧ್ಯಮಗಳ ಮೇಲೆ ನಿಯಂತ್ರಣ ಹೇರಬಾರದು. ಮಾಧ್ಯಮಗಳ ಮೇಲೆ ನಿಯಂತ್ರಣದಿಂದ ಸದನ ಹಾಳಾಗಿದೆ. ಸದನ ಸಮಿತಿಯಿಂದ ಸರಕಾರ ಹಿಂದೆ ಸರಿಯಬೇಕು. ನಾನು ಕೂಡ ಶಾಸಕಾಂಗ ಸಭೆಯನ್ನ ನೋಡಿದ್ದು, ಸದನದಲ್ಲಿ ಎಲ್ಲರೂ ಪ್ರಾಮಾಣಿಕರಾಗಿರಬೇಕು.ಅಲ್ಲದೆ, ಈ ಕುರಿತು ನಾಳೆ(ಗುರುವಾರ) ವಿಧಾನಸೌಧದ ಎದುರು ಹೋರಾಟ ಮಾಡಲಾಗುವುದೆಂದು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News