ಎಚ್‌ಡಿಕೆ-ಧರಂಸಿಂಗ್ ಸೇರಿ 11 ಮಂದಿಗೆ ಅರಣ್ಯ ಕಂಟಕ.!

Update: 2017-03-29 12:13 GMT

ಹೊಸದಿಲ್ಲಿ/ಬೆಂಗಳೂರು, ಮಾ.29: ಮೀಸಲು ಅರಣ್ಯ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಸಿರುವ ಆರೋಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ, ಧರಂಸಿಂಗ್ ಸೇರಿ 11 ಜನರ ವಿರುದ್ಧ ತನಿಖೆಗೆ ಸುಪ್ರೀಂಕೋರ್ಟ್‌ನ ದ್ವಿಸದಸ್ಯ ಪೀಠ ಆದೇಶ ನೀಡಿದೆನ್ನಲಾಗಿದೆ.

ಮೀಸಲು ಅರಣ್ಯ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿಗಳಾದ ಧರಂಸಿಂಗ್ ಹಾಗೂ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ತನಿಖೆಗೆ ಸುಪ್ರೀಂಕೋರ್ಟ್‌ನ ದ್ವಿಸದಸ್ಯ ಪೀಠದಿಂದ ಆದೇಶ ನೀಡಿದ್ದು, ಎಸ್‌ಐಟಿ ಇದರ ತನಿಖೆ ನಡೆಸಲಿದೆ ಎಂದು ತಿಳಿದುಬಂದಿದೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ವಿರುದ್ಧ ತನಿಖೆಗೆಯಿದ್ದ ತಡೆಯಾಜ್ಞೆಯನ್ನು ಸುಪ್ರೀಂ ಕೋರ್ಟ್ ಮುಂದುವರಿಸಿದೆ. ಅದೇ ರೀತಿ, ಹಿರಿಯ ಆಧಿಕಾರಿಗಳಾದ ವಿ.ಉಮೇಶ್ ಹಾಗೂ ಗಂಗಾರಾಮ್ ಬಡೇರಿಯಾ, ಎಂ.ರಾಮಪ್ಪ ಸೇರಿ 11 ಅಧಿಕಾರಿಗಳ ವಿರುದ್ಧವೂ ಕೂಡಾ ತನಿಖೆ ನಡೆಯಲಿದೆ. ಮೂರು ತಿಂಗಳೊಳಗೆ ತನಿಖೆಯ ವರದಿಯನ್ನು ಸಲ್ಲಿಸಲು ಎಸ್‌ಐಟಿಗೆ ಸುಪ್ರೀಂ ಸೂಚಿಸಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News