ಗಲ್ಫ್ ಟೂರ್ ಅಂಡ್ ಟ್ರಾವಲ್ಸ್ ಬೆಂಗಳೂರು ಶಾಖೆ ಆರಂಭ ; ಕಡಿಮೆ ದರದಲ್ಲಿ 'ಉಮ್ರಾ' ಯಾತ್ರೆ
ಬೆಂಗಳೂರು, ಎ.6: ಮಂಗಳೂರು ಮುಸ್ಲಿಮ್ ಯೂತ್ ಕೌನ್ಸಿಲ್ನ ಗಲ್ಫ್ ಟೂರ್ ಅಂಡ್ ಟ್ರಾವಲ್ಸ್ ವತಿಯಿಂದ ಕಡಿಮೆ ದರದಲ್ಲಿ ಉಮ್ರಾ ಯಾತ್ರೆ ಆಯೋಜಿಸಲಾಗಿದೆ.
ಗುರುವಾರ ನಗರದ ಕಬ್ಬನ್‌ಪೇಟೆಯ ಹಮೀದ್ ಶಾ ಆವರಣದಲ್ಲಿ ಮಂಗಳೂರು ಮುಸ್ಲಿಮ್ ಯೂತ್ ಕೌನ್ಸಿಲ್(ಎಂಎಂವೈಸಿ) ಕಚೇರಿಯಲ್ಲಿ ಗಲ್ಫ್ ಟೂರ್ ಅಂಡ್ ಟ್ರಾವಲ್ಸ್‌ನ ಬೆಂಗಳೂರು ಶಾಖೆಯನ್ನು ಉದ್ಘಾಟಿಸಲಾಯಿತು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಕೆಎಂಸಿಸಿ ಪ್ರಧಾನ ಕಾರ್ಯದರ್ಶಿ ನೌಶಾದ್, ಎಂಎಂವೈಸಿಯು ಕಡಿಮೆ ದರದಲ್ಲಿ ಉಮ್ರಾ ಯಾತ್ರೆ ಕಾರ್ಯಕ್ರಮ ಹಮ್ಮಿಕೊಂಡಿರುವುದು ಒಳ್ಳೆಯ ಬೆಳವಣಿಗೆ. ಇದರಿಂದ ಬಡ ಮತ್ತು ಸಾಮಾನ್ಯರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಎಂಎಂವೈಸಿ ಬೆಂಗಳೂರು ಅಧ್ಯಕ್ಷ ಎಚ್.ಅಬೂಬಕರ್ ಮಾತನಾಡಿ, ಹತ್ತು ವರ್ಷಗಳಿಂದಲೂ ಕಡಿಮೆ ದರದಲ್ಲಿ ಉಮ್ರಾ ಯಾತ್ರೆ ನಡೆಯುತ್ತಿದೆ. ಗಲ್ಫ್ ಟೂರ್ ಅಂಡ್ ಟ್ರಾವಲ್ಸ್ ಪುತ್ತೂರಿನಲ್ಲಿ ಪ್ರಧಾನ ಕಚೇರಿಯಿದ್ದು, ಮಂಗಳೂರು, ಬಿ.ಸಿ.ರಸ್ತೆ ಸೇರಿ ಐದು ಕಡೆ ಇದರ ಶಾಖೆಗಳಿವೆ ಎಂದು ವಿವರಿಸಿದರು.
ಉದ್ಘಾಟನೆ ಕಾರ್ಯಕ್ರಮದಲ್ಲಿ ಕೆಎಚ್‌ಎಂಜೆ ಖಾತೀಬ್ ಹಸನ್ ರೆಹಮಾನಿ, ಚೀಫ್ ಅಮೀರ್ ಗಲ್ಫ್ ಟೂರ್ ಮತ್ತು ಟ್ರಾವಲ್ಸ್‌ನ ಸಿರಾಜುದ್ದೀನ್ ಫೈಝೀ, ಎಂಎಂವೈಸಿ ಬೆಂಗಳೂರು ಕಾರ್ಯದರ್ಶಿ ಪಿ.ಕೆ.ಜುನೇದ್, ದರ್ಬಾರ್ ಗ್ರೂಪ್ ಕಂಬಳಬೆಟ್ಟು ಮುಖ್ಯ ಸಂಚಾಲಕ ಮೊಯ್ದಿನಿ ಶಫೀ, ಉಮರ್, ಗಲ್ಫ್ ಟೂರ್ ಅಂಡ್ ಟ್ರಾವಲ್ಸ್ ಮ್ಯಾನೇಜರ್ ಸುಲೇಮಾನ್,ಬಶೀರ್ ಸೇರಿ ಪ್ರಮುಖರು ಹಾಜರಿದ್ದರು.
ಪ್ರಸ್ತುತ ಸಾಲಿನಲ್ಲಿ ಕಡಿಮೆ ದರದಲ್ಲಿ ಉಮ್ರಾ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಅರ್ಜಿ ಸಲ್ಲಿಸಲು ಮೇ.3ರಂದು ಕಡೆ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 97414 88282, 94484 40236ನ್ನು ಸಂಪರ್ಕಿಸಬಹುದಾಗಿದೆ.