×
Ad

ಎ.8ರಂದು ಬೆಂಗಳೂರಿನಲ್ಲಿ ‘ಸಾಲ್ವೇಷನ್ ರನ್'ಗೆ ಆರ್ಚ್‌ಬಿಷಪ್ ಮೋರಸ್‌ರಿಂದ ಚಾಲನೆ

Update: 2017-04-06 21:22 IST

ಬೆಂಗಳೂರು,ಎ.6: ಎ.8ರಂದು ಬೆಂಗಳೂರಿನಲ್ಲಿ ನಡೆಯಲಿರುವ ‘ಸಾಲ್ವೇಷನ್ ರನ್ (ಮುಕ್ತಿ ಓಟ)’ನಲ್ಲಿ ಭಾಗವಹಿಸಲು ಒಂದು ಸಾವಿರಕ್ಕೂ ಅಧಿಕ ಜನರು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡಿದ್ದಾರೆ.

ಫ್ರೆಝರ್  ಟೌನ್‌ನ ಸೈಂಟ್ ಫ್ರಾನ್ಸಿಸ್ ಝೇವಿಯರ್ಸ್‌ ಕೆಥೆಡ್ರಲ್‌ನಿಂದ ಆರಂಭಗೊಳ್ಳಲಿರುವ ಮುಕ್ತಿ ಓಟಕ್ಕೆ ಬೆಂಗಳೂರಿನ ಆರ್ಚ್ ಬಿಷಪ್ ಬರ್ನಾರ್ಡ್ ಮೋರಸ್‌ ಅವರು ಹಸಿರು ನಿಶಾನೆ ತೋರಿಸಲಿದ್ದಾರೆ. ಇತರ ಕ್ರಿಶ್ಚಿಯನ್ ನಾಯಕರು ಮತ್ತು ಕ್ರೀಡಾ ಕ್ಷೇತ್ರದ ಗಣ್ಯರು ಓಟದಲ್ಲಿ ಭಾಗವಹಿಸಲಿದ್ದಾರೆ.

 ಮುಕ್ತಿ ಓಟವನ್ನು ಬೆಂಗಳೂರಿನ ಎಲ್ಲ ಕ್ರೈಸ್ತ ಪಂಗಡಗಳಿಗಾಗಿ ಸಂಘಟಿಸಲಾಗಿದೆ. ಐದು ಕಿ.ಮೀ.ಓಟ ಮತ್ತು ಮೂರು ಕಿ.ಮೀ.ನಡಿಗೆಯನ್ನು ಒಳಗೊಂಡಿರುವ ಅದು ಆರೋಗ್ಯಕರ ಜೀವನಶೈಲಿ ಮತ್ತು ಅರ್ಥಪೂರ್ಣ ಬದುಕಿನ ಶಿಸ್ತಿಗೆ ತಮ್ಮನ್ನು ಒಳಪಡಿಸಿಕೊಳ್ಳಲು ಜನರಿಗೆ ನೆರವಾಗಲಿದೆ. ಮುಕ್ತಿ ಓಟವು ಮಾಜಿ ರಾಜ್ಯ ಅಥ್ಲೀಟ್ ಹಾಗೂ ಕ್ರೀಡಾ ನಿರ್ವಾಹಕರಾಗಿರುವ ಎಲ್ವಿಸ್ ಜೋಸೆಫ್ ಅವರ ಕಲ್ಪನೆಯ ಕೂಸಾಗಿದೆ.

ಓಟದಲ್ಲಿ ಪಾಲ್ಗೊಳ್ಳುವವರು ‘ಐ ಬಿಲಾಂಗ್ ಟು ಕ್ರೈಸ್ಟ್  (ನಾನು ಕ್ರಿಸ್ತನಿಗೆ ಸೇರಿದ್ದೇನೆ) ಎಂಬ ಬರಹವುಳ್ಳ ಟಿ-ಶರ್ಟ್ ಧರಿಸಲಿದ್ದಾರೆ. ಪದಕ ಮತ್ತು ಪ್ರಮಾಣಪತ್ರವನ್ನು ಅವರು ಪಡೆಯಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News