ಬೆಂಕಿ

Update: 2017-04-06 18:35 GMT
Editor : -ಮಗು

ಮಧ್ಯರಾತ್ರಿ ನೆರೆಮನೆಯಲ್ಲಿ ಬೊಬ್ಬೆ ಚೀರಾಟ. ಆತ ಕಿಟಕಿಯಲ್ಲಿ ಇಣುಕಿ, ಮತ್ತೆ ಬಂದು ಮಲಗಿದ.

‘‘ಏನದು ಗಲಾಟೆ’’ ಪತ್ನಿ ಕೇಳಿದಳು.

‘‘ಏನಿಲ್ಲ, ನೆರೆಮನೆಗೆ ಬೆಂಕಿ ಬಿದ್ದಿದೆ...ಅವರಿಗೆ ಹಾಗೇ ಆಗಬೇಕು. ನೀನು ಮಲಗು’’ ಎಂದ.

ಒಂದರ್ಧಗಂಟೆಯಾಗಿರಬಹುದು, ದಡಬಡ ಬಾಗಿಲು ಬಡಿದ ಸದ್ದು.

ಈತ ಕಣ್ಣುಜ್ಜಿ ಬಾಗಿಲು ತೆರೆದು ‘‘ಏನು?’’ ಎಂದು ಜೋರಾಗಿ ಕೇಳಿದ.

‘‘ನೆರೆ ಮನೆಗೆ ಬೆಂಕಿ ಬಿದ್ದಿದೆ’’ ಎದುರಿದ್ದಾತ ಹೇಳಿದ.

‘‘ಅದಕ್ಕೆ ನಾನೇನು ಮಾಡಬೇಕು...’’ ಈತ ಸಿಟ್ಟಿನಿಂದ ಕೇಳಿದ.

‘‘ನೆರೆಮನೆ ಸಂಪೂರ್ಣ ಹೊತ್ತಿ ಉರಿದಿದೆ. ಇದೀಗ ಬೆಂಕಿ ನಿಮ್ಮ ಮನೆಯ ಹಿತ್ತಲನ್ನು ಸುಡುತ್ತಿದೆ...ಬೇಗ ಬೇಗ ಮಕ್ಕಳನ್ನು ಕರೆದುಕೊಂಡು ಹೊರಗೆ ಬನ್ನಿ ಎಂದು ಹೇಳುವುದಕ್ಕೆ ಬಂದೆ’’

Writer - -ಮಗು

contributor

Editor - -ಮಗು

contributor

Similar News

ದಾಂಪತ್ಯ
ಶಾಂತಿ
ಬೆಳಕು
ಮಾನ್ಯತೆ!
ವ್ಯಾಪಾರ
ಆಕ್ಸಿಜನ್
ಝಲಕ್
ಸ್ವರ್ಗ
ಗೊಂದಲ!
ಪ್ರಾರ್ಥನೆ
ಆ ಚಿಂತಕ!
ಹರಾಜು !