×
Ad

ನಾಳೆಯಿಂದ ಮಂಗಳೂರು-ಬೆಂಗಳೂರು ಎಕ್ಸ್‌ಪ್ರೆಸ್ ರೈಲು ಸಂಚಾರ ಆರಂಭ

Update: 2017-04-08 20:20 IST

 ಬೆಂಗಳೂರು, ಎ.8: ಮಂಗಳೂರು ಮತ್ತು ಯಶವಂತಪುರ ಮಧ್ಯೆ ವಾರಕ್ಕೆ ಮೂರು ಬಾರಿ ಟ್ರೈ ವೀಕ್ಲಿ ಎಕ್ಸ್ ಪ್ರೆಸ್ ರೈಲು ನಾಳೆಯಿಂದ ಕಾರ್ಯಾಚರಣೆ ಆರಂಭಿಸಲಿದ್ದು, ಮಡಗಾಂವ್‌ನಿಂದ ಕೇಂದ್ರ ರೈಲ್ವೆ ಖಾತೆ ಸಚಿವ ಸುರೇಶ್ ಪ್ರಭು ರವಿವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಲಿದ್ದಾರೆ.

ಉದ್ಘಾಟನಾ ವಿಶೇಷ ರೈಲು ಮಂಗಳೂರು ಜಂಕ್ಷನ್‌ನಿಂದ ನಾಳೆ ಬೆಳಗ್ಗೆ 11.30ಕ್ಕೆ ಹೊರಡಲಿದೆ. ರೈಲು ಸಂಖ್ಯೆ 16575/16576 ಯಶವಂತಪುರದಿಂದ ರವಿವಾರ ಮಂಗಳವಾರ ಮತ್ತು ಗುರುವಾರಗಳಂದು ಬೆಳಗ್ಗೆ 7.50ಕ್ಕೆ ಹೊರಟು ಮಂಗಳೂರಿಗೆ ಸಂಜೆ 5.30್ಕಕೆ ತಲುಪಲಿದೆ. ಮಂಗಳೂರಿನಿಂದ ಸೋಮವಾರ, ಬುಧವಾರ ಮತ್ತು ಶುಕ್ರವಾರಗಳಂದು ಬೆಳಗ್ಗೆ 11.30ಕ್ಕೆ ಹೊರಟು ಯಶವಂತಪುರಕ್ಕೆ ರಾತ್ರಿ 8.30ಕ್ಕೆ ತಲುಪಲಿದೆ.

ರೈಲು ಚಿಕ್ಕಬಾಣಾವರ, ನೆಲಮಂಗಲ, ಕುಣಿಗಲ್, ಯಡಿಯೂರು, ಬಿ.ಜಿ.ನಗರ್, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕ ಪುತ್ತೂರು ಮತ್ತು ಬಂಟ್ವಾಳಗಳಲ್ಲಿ ನಿಲುಗಡೆಯಾಗುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News