ಓರ್ವ ಚಿರಸ್ಥಾಯಿ ಪ್ರಾಮಾಣಿಕತೆಯ ಸಂಗೀತಗಾರ್ತಿ
ಸಂಗೀತ ಮನೆತನದ ದೀರ್ಘ ಇತಿಹಾಸದಲ್ಲಿ ಅಮೋನ್ಕರ್‌ರಂತೆ ಕೇಳುಗರಿಗೆ ಪ್ರತಿಬಾರಿಯೂ ಒಂದು ರಾಗದ ವಿಭಿನ್ನ ಸೌಂದರ್ಯಗಳನ್ನು ಉಣಬಡಿಸುವ ಸಾಮರ್ಥ್ಯ ಕೇವಲ ಕೆಲವು ಸಂಗೀತಗಾರರಿಗಷ್ಟೇ ಸಾಧ್ಯವಾಗಿತ್ತು. ಹಿರಿಯ ಸರೋದ್ ವಾದಕ ಅಲಿ ಅಕ್ಬರ್ ಖಾನ್‌ರಂತೆ ಅಮೋನ್ಕರ್ ಕೂಡಾ ಆಶ್ಚರ್ಯಗಳ ಆಗರವಾಗಿದ್ದರು ಮತ್ತು ಒಂದು ರಾಗದ ವ್ಯಾಕರಣ ತನ್ನ ಕ್ರಿಯಾಶೀಲತೆಗೆ ಭಂಗ ತರದಂತೆ ನೋಡಿಕೊಳ್ಳುತ್ತಿದ್ದರು.
ಹಿಂದೂಸ್ಥಾನಿ ಸಂಗೀತದ ಎರಡು ಮುಖ್ಯ ಪ್ರಕಾರಗಳಲ್ಲಿ ಒಂದಾದ ಖಯಾಲ್ ಸಂಗೀತದ (ಇನ್ನೊಂದು ಧ್ರುಪದ್) ತನ್ನದೇ ಅತ್ಯುನ್ನತ ಶೈಲಿಯನ್ನು ಹೊಂದಿರುವ ಜೈಪುರ್- ಅತ್ರ್‌ಲಿ ಸಂಗೀತ ಶಾಲೆಯಲ್ಲಿ ತರಬೇತಿ ಪಡೆದಿರುವ ಕಿಶೋರಿ ಅಮೋನ್ಕರ್, ಆ ಪ್ರಕಾರದಲ್ಲಿ ಪ್ರಣಯ ಪ್ರಧಾನತೆಯ ಶಿಲ್ಪಿಯಾಗಿ ಮೂಡುವ ಸಾಧ್ಯತೆ ಬಹಳ ಕಡಿಮೆಯೆ. ಅಷ್ಟಕ್ಕೂ ಆಕೆಯ ತಾಯಿ ಮತ್ತು ಗುರುಗಳಾಗಿದ್ದ ಮೊಗುಭಾಯಿ ಕುರ್ದಿಕರ್ ತನ್ನ ಸಂಗೀತ ಮನೆತನದಲ್ಲಿ ಬೋಧಿಸಿದ ರಾಗ ವ್ಯಾಕರಣ ಮತ್ತು ಸಂಯೋಜನೆಗಳ ಬಾಹ್ಯರೇಖೆಗಳ ಬಗ್ಗೆ ಕಟ್ಟಾ ನಿಷ್ಠೆಯನ್ನು ಹೊಂದಿದ್ದ ಕಾರಣಕ್ಕಾಗಿ ಪ್ರಖ್ಯಾತರಾಗಿದ್ದರು.
ಕಳೆದ ಎಪ್ರಿಲ್ 3ರಂದು ಕಿಶೋರಿ ಅಮೋನ್ಕರ್ ತಮ್ಮ ಮುಂಬೈಯ ಫ್ಲ್ಯಾಟ್‌ನಲ್ಲಿ ಕೊನೆಯುಸಿರೆಳೆದರು. ಆಕೆಗೆ 84 ವರ್ಷ ವಯಸ್ಸಾಗಿತ್ತು. ಜೈಪುರ್-ಅತ್ರ್‌ಲಿ ಘರಾನಾ (ಮನೆತನದ)ದ ಸಂಸ್ಥಾಪಕ ಅಲ್ಲಾದಿಯಾ ಖಾನ್ ಅವರು ಕಲಿಸಿದ ಸಂಗೀತದ ನೀತಿನಿಯಮಗಳ ಬಗ್ಗೆ ಕಟ್ಟಾ ನಿಷ್ಠೆಯನ್ನು ಹೊಂದಿದ್ದರೂ ಆಕೆ ಸಂಗೀತದ ಭಾವವನ್ನು ಹೊರಗೆಡಹುವ ಶೈಲಿಯಲ್ಲಿ ಒಂದು ರೀತಿಯ ಸೌಂದರ್ಯ ಎದ್ದು ಕಾಣುತ್ತಿತ್ತು. ಆಕೆಯ ಸಂಗೀತದಲ್ಲಿ ಸುಪ್ತವಾಗಿದ್ದ ಭಾವನೆಗಳ ಲಹರಿ ಯು ಕಿಶೋರಿ ಅಮೋನ್ಕರ್‌ನಲ್ಲಿ ತನ್ನ ಪೋಷಕಿಯನ್ನು ಕಂಡಿತು.
ಈ ಸಂಗೀತ ಮನೆತನದ ದೀರ್ಘ ಇತಿಹಾಸದಲ್ಲಿ ಅಮೋನ್ಕರ್‌ರಂತೆ ಕೇಳುಗರಿಗೆ ಪ್ರತಿಬಾರಿಯೂ ಒಂದು ರಾಗದ ವಿಭಿನ್ನ ಸೌಂದರ್ಯಗಳನ್ನು ಉಣಬಡಿಸುವ ಸಾಮರ್ಥ್ಯ ಕೇವಲ ಕೆಲವು ಸಂಗೀತಗಾರರಿಗಷ್ಟೇ ಸಾಧ್ಯವಾಗಿತ್ತು. ಹಿರಿಯ ಸರೋದ್ ವಾದಕ ಅಲಿ ಅಕ್ಬರ್ ಖಾನ್‌ರಂತೆ ಅಮೋನ್ಕರ್ ಕೂಡಾ ಆಶ್ಚರ್ಯಗಳ ಆಗರ ವಾಗಿದ್ದರು ಮತ್ತು ಒಂದು ರಾಗದ ವ್ಯಾಕರಣ ತನ್ನ ಕ್ರಿಯಾ ಶೀಲತೆಗೆ ಭಂಗ ತರದಂತೆ ನೋಡಿಕೊಳ್ಳುತ್ತಿದ್ದರು. ವಾಸ್ತವದಲ್ಲಿ ಅಮೋನ್ಕರ್‌ರಂತಹ ಅತ್ಯುನ್ನತ ಸಂಗೀತಕಾರರು ಕೆಲವು ನೂರು ರಾಗಗಳನ್ನು ಬಹಳ ಎಳೆವಯಸ್ಸಿನಲ್ಲೇ ಕರಗತ ಮಾಡಿಕೊಳ್ಳುವ ಕಾರಣ ಅನಿರೀಕ್ಷಿತವಾದ ಮತ್ತು ಸುಂದರವಾದ ವಾಕ್ಯಗಳನ್ನು ರಚಿಸುವುದು ಅವರಿಗಂತೂ ಸಂಭಾಷಣೆ ನಡೆಸುವಷ್ಟೇ ಸುಲಭವಾಗಿರುತ್ತದೆ. ಆಕೆಯ ‘ಗೆಳೆಯರ’ ಜೊತೆ ಮಾತುಕತೆ
ಅಭ್ಯಾಸದ ಸಮಯದಲ್ಲಿ ಅಮೋನ್ಕರ್ ತಾನು ವೇದಿಕೆಯ ಮೇಲೆ ಯಾವ ರೀತಿ ಹಾಡಲಿದ್ದಾರೆಯೋ ಅದೇ ರೀತಿಯಲ್ಲಿ ಒಂದು ರಾಗವನ್ನು ಸಂಪೂರ್ಣವಾಗಿ ಅಭ್ಯಸಿಸುತ್ತಾರೆ. ಕೆಲವೊಮ್ಮೆ ಆಕೆ ಹೇಳುವಂತೆ, ‘ರಾಗ ದೇವತೆಗಳು’ ಅವರಾಗಿಯೇ ಒಲಿಯು ತ್ತಾರೆ ಕೆಲವೊಮ್ಮೆ ಹಾಗಾಗುವುದಿಲ್ಲ. ಅದಾಗಿಯೇ ಒಲಿಯಬೇ ಕೆಂದರೆ ಅದರೊಂದಿಗೆ ವಾದಿಸು, ಒತ್ತಾಯಿಸು, ಬೇಡು ಎಂದಾಕೆ ಹೇಳುತ್ತಿದ್ದರು. ರಾಗಗಳು ಕೂಡಾ ಉಸಿರಾಡುವ ಜೀವಿಗಳು ಎಂದಾಕೆ ತಿಳಿದಿದ್ದರು ಮತ್ತು ಅವುಗಳ ಜೊತೆ ಆಕೆ ಮಾತನಾಡು ತ್ತಿದ್ದರು, ವಾದಿಸುತ್ತಿದ್ದರು, ಓಲೈಸುತ್ತಿದ್ದರು ಮತ್ತು ಕೆಲವೊಮ್ಮೆ ತಾನು ಬಯಸಿದ ಕ್ರಮದಲ್ಲಿ ಹೊಂದಿಸಲು ಬಿಡದ ಕಾರಣಕ್ಕೆ ಅವುಳೊಂದಿಗೆ ಕೋಪಗೊಳ್ಳುತ್ತಿದ್ದರು.
ಕೆಲವರಿಗೆ ಸಾಂಕೇತಿಕ ನಟನೆಯೆಂದು ತೋರುವ ಆಕೆಯ ನಡೆಯ ಹಿಂದೆ ಅಗಾಧವಾದ ಸಂಗೀತಜ್ಞಾನದಿಂದ ಗಳಿಸಿರುವಂತಹ ಪ್ರೌಢಿಮೆಯ ಮೂಲಕ ಬಂದಿರುವ ಬಹಳ ಜಾಣತನದ, ವಿವೇಚನಾಶೀಲ ಯೋಚನೆಯಿದೆ. ಈ ಅಂಕಿಅಂಶಗಳ ಜೇನು ಗೂಡನ್ನು ಸಂಸ್ಕರಿಸುವುದು ಮತ್ತು ತಾಜಾ ಕಲ್ಪನೆಗಳನ್ನು ಪಡೆಯು ವುದನ್ನೇ ಅಮೋನ್ಕರ್ ‘ತನ್ನ ಗೆಳೆಯರಾದ ರಾಗಗಳ ಜೊತೆ ಮಾತುಕತೆ’ ಎಂದು ಬಣ್ಣಿಸಿರಬಹುದು.
ಜೈಪುರ್ ಘರಾನಾವು ಸಂಯೋಜನೆ ಕೇಂದ್ರಿತವಾಗಿ ರಾಗವನ್ನು ಅಭಿವೃದ್ಧಿಪಡಿಸುವ ತನ್ನ ನಿಲುವಿಗೆ ಖ್ಯಾತವಾಗಿದೆ. ಸಂಪೂರ್ಣ ಸಂಯೋಜನೆಯನ್ನು ಪ್ರದರ್ಶನದ ಆರಂಭಿಕ ಗಳಿಗೆಯಲ್ಲೇ ಪ್ರಸ್ತುತ ಪಡಿಸಲಾಗುತ್ತದೆ ಮತ್ತು ಗಾಯಕಿಯು ತನ್ನ ಗಾಯನದಲ್ಲಿ ಆಲಾಪ ಗಳನ್ನು ತೆಗೆಯುತ್ತಾ ರಾಗಕ್ಕೆ ಪ್ರಾಮುಖ್ಯತೆ ನೀಡುತ್ತಾ ಸಾಗುತ್ತಾರೆ. ನಿಧಾನಗತಿಯಲ್ಲಿ ಮತ್ತಷ್ಟು ಸುಧಾರಿಸುತ್ತಾ ಬಂದಿಶ್‌ನಲ್ಲಿ ಅದಾಗಲೇ ಕಂಡುಕೊಂಡಿರುವ ಮಾಧುರ್ಯವನ್ನು ವುತ್ತಷ್ಟು ವಿಸ್ತರಿಸುತ್ತಾ ಸಾಗುತ್ತಾರೆ.
ಖಯಾಲ್‌ನ ಗಾಯನಶೈಲಿ ಅಥವಾ ಅದರ ವಿನ್ಯಾಸಕ್ಕೆ ಕಿಶೋರಿ ಅಮೋನ್ಕರ್, ಮಂದ್ರ ಸಪ್ತಕದಿಂದ ಆರಂಭವಾಗುವ ರಾಗದ ಪ್ರಮುಖ ಸ್ವರಚಿಹ್ನೆಗಳನ್ನು ಅಭಿವೃದ್ಧಿಪಡಿಸಲು ಪ್ರಶಾಂತವಾದ ದೃಷ್ಟಿಕೋನವನ್ನು ನೀಡಿ ಆ ಮೂಲಕ ಆ ಪ್ರಮುಖ ಸ್ವರಚಿಹ್ನೆಯ ಸುತ್ತ ಕೇಂದ್ರಿತವಾದ ಸಂಯೋಜನೆಗಳ ಸಮಗ್ರ ಶ್ರೇಣಿಯನ್ನು ರಚಿಸುವ ಕ್ರಿಯಾತ್ಮಕ ಸವಾಲನ್ನು ಪೂರ್ಣಗೊಳಿಸಿದ್ದೇನೆ ಎಂಬ ಸಂತೃಪ್ತಿ ಮೂಡುವವರೆಗೆ ಪಗುಚ್ಛಗಳನ್ನು ರಚಿಸುತ್ತಿದ್ದರು.
ನಂತರ ಆಕೆ ಮುಂದಿನ ಗುಚ್ಛಕ್ಕೆ ಚಲಿಸಿ ನಿಧಾನವಾಗಿ ರಾಗದ ಮಟ್ಟ ವನ್ನು ಏರಿಸುತ್ತಾ ಮೆಲ್ಲನೆ ಆ ರಾಗದ ಚಿತ್ರಣವನ್ನು ಬಿಚ್ಚುತ್ತಿದ್ದರು. ಈ ಪ್ರಕಾರವು ಆಮಿರ್ ಖಾನ್ (1912-1974) ಅವರ ಗಾಯನದ ಮಾದರಿಯಂತಿದ್ದು 1970ರ ದಶಕದಲ್ಲಿ ಅಮೋನ್ಕರ್ ಅವರ ಗಾಯನದಲ್ಲಿ ಮೂಡಲು ಆರಂಭಿಸಿತು.
ಇದಕ್ಕೆ ತದ್ವಿರುದ್ಧವಾಗಿ ಆಕೆಯ ಹಿಂದಿನ ಹಾಡುಗಾರಿಕೆಯು ಸಾಂಪ್ರದಾಯಿಕ ಜೈಪುರ್ ಶೈಲಿಯಲ್ಲಿದ್ದು ರಾಗ ರಚನೆಯ ವಿನ್ಯಾಸವನ್ನು ಬಹಿ ರಂಗಪಡಿಸುವುದಕ್ಕೂ ಮೊದ ಲು ಬಾಹ್ಯರೇಖೆಗಳ ಮೇಲೆ ಹೆಚ್ಚು ಒತ್ತು ನೀಡುತ್ತಿದ್ದವು. ಕಿಶೋರಿ ಅಮೋನ್ಕರ್ ಯಾವುದೇ ರಾಗವನ್ನು ಹಾಡಿ ದರೂ ಅದು ಖಂಡಿತವಾ ಗಿಯೂ ಬಹಳವಾಗಿ ಯೋಚಿಸಿ ರಚಿಸಲ್ಪಟ್ಟ ವಿಭಾಗಗಳಿಂದ ಕೂಡಿರುತ್ತದೆ.
ಇದು ಅವರು ವಿನ್ಯಾಸಕ್ಕೆ ಒತ್ತು ನೀಡುವ ಜೈಪುರ್ ಘರಾನಾ ಶೈಲಿಯಲ್ಲಿ ತರಬೇತಿ ಪಡೆದಿರುವುದರ ಕುರುಹಾಗಿದೆ. ಇಲ್ಲಿ ನಾನು ‘ಕುರುಹು’ ಎಂಬ ಪದವನ್ನು ಯಾಕೆ ಬಳಸಿದ್ದೇನೆ ಎಂದರೆ ಕಿಶೋರಿ ಅಮೋನ್ಕರ್ ಯಾವುದೇ ಘರಾನಾ ಅಥವಾ ವಿನ್ಯಾಸವನ್ನು ಮೀರಿದವರಾಗಿದ್ದಾರೆ. ಇದು ಆಕೆಯ ಸಂಗೀತ ವ್ಯಕ್ತಿತ್ವದಲ್ಲಿರುವ ವೈರುಧ್ಯಗಳನ್ನು ಪ್ರಮುಖವಾಗಿ ಆಕೆ ಪ್ರಸಿದ್ಧವಾಗಿರುವ ಅಭಿವೃದ್ಧ್ದಿಪೂರ್ವಕ ಶಿಸ್ತು ಮತ್ತು ಭಾವನಾತ್ಮಕ ಸಹಜತೆಯ ಮಧ್ಯೆಯಿರು ವ್ಯತ್ಯಾಸವನ್ನು ತೆರೆದಿಡುತ್ತದೆ.
ನಾನು ಇದನ್ನು ಒಂದು ವೈರುಧ್ಯ ಎಂದು ಪರಿಗಣಿಸುವುದಿಲ್ಲ ಆದರೆ ಆಕೆ ಒಂದು ಶೈಲಿಯಲ್ಲಿ ಗಳಿಸಿರುವ ಪ್ರಾವಿಣ್ಯತೆ, ತಂತ್ರ ಮತ್ತು ವ್ಯಾಕರಣದ ಮೇಲಿನ ಹಿಡಿತದ ಪರಿಣಾಮ ಎಂದು ಪರಿಗಣಿಸುತ್ತೇನೆ. ಈ ಪ್ರಾವಿಣ್ಯತೆಯು ಆಕೆ ರೂಢಿಯಲ್ಲಿರುವುದನ್ನು ಕೈಬಿಟ್ಟು, ಖೇಮ್ ಕಲ್ಯಾಣ್‌ರವರ ಪ್ರದರ್ಶನಗಳಲ್ಲಿ ಹೆಚ್ಚಾಗಿ ಕಂಡುಬರುವಂತೆ, ತನ್ನ ಆಯ್ಕೆಯ ಇನ್ನಷ್ಟು ಪ್ರಯೋಗಗಳನ್ನು ಮಾಡಲು ಅವಕಾಶ ನೀಡುತ್ತದೆ. ಈ ಪ್ರಕಾರ ನೋಡುವುದಾದರೆ ಆಕೆ ಅಲಿ ಅಕ್ಬರ್ ಖಾನ್‌ಗಿಂತ ಸುಪ್ರಸಿದ್ಧ ಸಿತಾರ್ ವಾದಕ ವಿಲಾಯತ್ ಖಾನ್‌ಗೆ (1924-2004) ಸಾಮಿಪ್ಯ ಹೊಂದಿದ್ದಾರೆ.
ನನ್ನ ಪ್ರಕಾರ ವಿವಿಧ ಕ್ಷೇತ್ರಗಳಲ್ಲಿ ಹಲವರು ಮಾಡಿರುವ ಸಾಧನೆಗಳನ್ನು ಮತ್ತು ಅವರ ಸಾಮರ್ಥ್ಯವನ್ನು ವಿವರಿಸುವ ವೇಳೆ ‘ಅಸಾಧಾರಣ’ ಎಂಬ ಶಬ್ದವನ್ನು ಬಹಳವಾಗಿ ಬಳಸಲಾಗಿದೆ. ಕಿಶೋರಿ ಅಮೋನ್ಕರ್ ಹೊಂದಿರುವ ಪ್ರಾವಿಣ್ಯತೆಯು ಎಳವೆಯಲ್ಲೇ ಪಡೆದಂತಹ ಅವಕಾಶ, ಅದರಲ್ಲಿ ತೊಡಗುವಿಕೆ, ತನ್ನ ಕೆಲಸದ ಮೇಲೆ ಅತೀವವಾದ ಪ್ರೀತಿ ಮತ್ತು ಅಂತಿಮವಾಗಿ ತಾನು ಕಲಿತ ಕಲೆಗೆ ಒಂದು ರೂಪ ನೀಡಲು ಪಟ್ಟ ಪರಿಶ್ರಮದ ಫಲವಾಗಿದೆ.
ಅಮೋನ್ಕರ್‌ರ ಅತೀಂದ್ರಿಯ ಪ್ರತಿಭೆಗೆ, ಆಕೆಗೆ ತನ್ನ ಕೆಲಸದ ಮೇಲೆ ಇದ್ದಂತಹ ಪ್ರಾಮಾಣಿಕ ಅಂಧಾಭಿಮಾನ ಮತ್ತು ಅತೀವವಾದ ಆಂತರಿಕ ವೈಚಾರಿಕತೆಯೇ ಪ್ರಮುಖ ಅಂಶಗಳು ಎಂಬುದು ನನ್ನ ಅನಿಸಿಕೆ.
ಈ ಅಂಶಗಳಿಂದಲೇ ಆಕೆ ಅಹಂಕಾರಿ ಎಂದು ಹೆಸರುಗಳಿಸಿದ್ದರೂ ಆಕೆಯನ್ನು ನೆಲೆದ ಮೇಲೆಯೇ ನಿಲ್ಲುವಂತೆ ಮತ್ತು ಸ್ಪಟಿಕಾಕಾರಳಾಗಿ ಮಾಡಿತ್ತು. ಬಹುತೇಕ ವೃತ್ತಿಪರರು ತಮ್ಮ 40-50ರ ಹರೆಯದಲ್ಲಿ ಸಂತೃಪ್ತಭಾವದಿಂದ ವೃತ್ತಿಜೀವನ ಕೊನೆಗೊಳಿಸುವ ಕ್ಷೇತ್ರದಲ್ಲಿ ಅಮೋನ್ಕರ್ ಸಂಗೀತದ ಬೆಳವಣಿಗೆ ಆಕೆಯ ಕೊನೆದಿನಗಳವರೆಗೂ ಮುಂದುವರಿದಿತ್ತು.