ಬಹುಭಾಷಾ ತಾರೆ ಜಯಂತಿಗೆ ಬಿ.ಸರೋಜಾದೇವಿ ಪ್ರಶಸ್ತಿ

Update: 2017-04-08 18:10 GMT

ಬೆಂಗಳೂರು, ಎ.8: 2017ನೆ ಸಾಲಿನ ಬಿ.ಸರೋಜಾದೇವಿ ರಾಷ್ಟ್ರೀಯ ಪ್ರಶಸ್ತಿಗೆ  ಬಹುಭಾಷಾ ಚಿತ್ರನಟಿ ಜಯಂತಿ ಪಾತ್ರರಾಗಿದ್ದಾರೆ. ಭಾರತೀಯ ವಿದ್ಯಾಭವನ ಪ್ರತಿವರ್ಷ ನೀಡುವ ಬಿ.ಸರೋಜಾದೇವಿ ಪ್ರಶಸ್ತಿಗೆ ಜಯಂತಿ ಆಯ್ಕೆಯಾಗಿದ್ದಾರೆ ಎಂದು ಭಾರತೀಯ ವಿದ್ಯಾಭವನದ ತಿಳಿಸಿದೆ.

1963ರಲ್ಲಿ "ಜೇನುಗೂಡು" ಚಿತ್ರದ ಮೂಲಕ ಸಿನಿಮಾ ರಂಗ ಪ್ರವೇಶಿಸಿದ್ದ ಜಯಂತಿ "ಚಂದವಳ್ಳಿ ತೋಟ", "ಮಿಸ್ ಲೀಲಾವತಿ", "ಬೆಟ್ಟದ ಹುಲಿ", "ಪರೋಪಕಾರಿ", "ಎಡಕಲ್ಲು ಗುಡ್ಡದ ಮೇಲೆ" ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಹಾಗೆಯೇ ದಕ್ಷಿಣ ಭಾರತ ನಾಯಕನಟರಾದ ಎಂ.ಜಿ.ರಾಮಚಂದ್ರನ್, ಜೆಮಿನಿ ಗಣೇಶನ್, ಎನ್.ಟಿ.ರಾಮರಾವ್ ನಟಿಸಿದ ಜಯಂತಿ ಡಾ.ರಾಜ್‌ರೊಂದಿಗೆ 45 ಚಿತ್ರಗಳಲ್ಲಿ ನಟಿಸಿದ್ದಾರೆ.

ಎಪ್ರಿಲ್ 16 ರಂದು ಭಾರತೀಯ ವಿದ್ಯಾಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅಂಬರೀಷ್, ಸಾ.ರಾ.ಗೋವಿಂದು ಅವರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ವಿದ್ಯಾಭವನ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News