ಮಂತ್ರದ ನೀರು!

Update: 2017-04-08 18:36 GMT
Editor : -ಮಗು

ಸಂ ತನ್ನ ಶಿಷ್ಯನ ಜೊತೆಗೆ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳಿಗೆ ಸಂತೈಸುತ್ತಿದ್ದ. ಒಬ್ಬ ರೋಗಿ ಸಂತನ ಕೈ ಹಿಡಿದು ಹೇಳಿದ ‘‘ಗುರುಗಳೇ ನೋವಿನಿಂದ ನಿದ್ರೆ ಬರುತ್ತಿಲ್ಲ. ನಿಮ್ಮ ಮಂತ್ರ ಶಕ್ತಿಯಿಂದ ನನಗೆ ನಿದ್ರೆ ಬರುವಂತೆ ಮಾಡಿ’’

ಸಂತ ಲೋಟದಲ್ಲಿ ನೀರು ತರಿಸಿ ಮಂತ್ರಿಸಿ ಊದಿ ಅವರ ಕೈಗಿಟ್ಟು ಹೇಳಿದ ‘‘ನೋಡು, ಆಗಾಗ ಇದನ್ನು ಸ್ವಲ್ಪ ಕುಡಿಯುತ್ತಿರು. ನಿದ್ರೆ ಬರುತ್ತದೆ’’ ರೋಗಿಗೆ ಸಂತೋಷವಾಯಿತು. ಅವನು ನೀರು ಕುಡಿದ. ತುಸು ಹೊತ್ತಲ್ಲಿ ಆತನಿಗೆ ನಿದ್ದೆಯ ಮಂಪರು.

ಆಸ್ಪತ್ರೆಯ ಹೊರಗೆ ಬಂದದ್ದೇ ಶಿಷ್ಯ ಸಂತನನ್ನು ಟೀಕಿಸಿದ ‘‘ವೌಢ್ಯದ ವಿರುದ್ಧ ಮಾತನಾಡುತ್ತಿದ್ದ ನೀವೇ ಹೀಗೆ ರೋಗಿಗಳಲ್ಲವಂಚಿಸಿದರೆ ಹೇಗೆ?’’

ಸಂತ ನಕ್ಕು ಹೇಳಿದ ‘‘ಅವನು ನನ್ನ ಬಳಿ ಕೇಳಿದ್ದು ಜ್ಞಾನ, ಬುದ್ಧಿಯನ್ನಲ್ಲ. ಬದಲಿಗೆ ನಿದ್ದೆಯನ್ನು. ತಕ್ಷಣಕ್ಕೆ ಅವನಿಗೇನು ಬೇಕಾಗಿದೆಯೋ ಅದನ್ನು ಅವನಿಗೆ ಕೊಟ್ಟೆ’’
 

Writer - -ಮಗು

contributor

Editor - -ಮಗು

contributor

Similar News

ದಾಂಪತ್ಯ
ಶಾಂತಿ
ಬೆಳಕು
ಮಾನ್ಯತೆ!
ವ್ಯಾಪಾರ
ಆಕ್ಸಿಜನ್
ಝಲಕ್
ಸ್ವರ್ಗ
ಗೊಂದಲ!
ಪ್ರಾರ್ಥನೆ
ಆ ಚಿಂತಕ!
ಹರಾಜು !