ಸಿಂಧೂತಾಯಿ ಸಪ್ಕಾಳ್‌ಗೆ ಬಸವ ಪ್ರಶಸ್ತಿ ಆಯ್ಕೆ
Update: 2017-04-15 20:35 IST
ಬೆಂಗಳೂರು, ಎ.15: 2016ನೆ ಸಾಲಿನ ಬಸವ ರಾಷ್ಟ್ರೀಯ ಪ್ರಶಸ್ತಿಗೆ ಮಹಾರಾಷ್ಟ್ರದ ಸಿಂಧೂತಾಯಿ ಸಪ್ಕಾಳ್ ಹಾಗೂ ರಂಗಭೂಮಿಗೆ ಕೊಡಮಾಡುವ ಗುಬ್ಬಿ ವೀರಣ್ಣ ಪ್ರಶಸ್ತಿಗೆ ಹಿರಿಯ ರಂಗಕರ್ಮಿ ಶ್ರೀನಿವಾಸ್ ಜಿ.ಕಪ್ಪಣ್ಣ, ಬಿ.ವಿ.ಕಾರಂತ ಪ್ರಶಸ್ತಿಗೆ ಚಿಂದೋಡಿ ಶ್ರೀಕಂಠೇಶ್ ಆಯ್ಕೆ ಮಾಡಿ ಸರಕಾರ ಆದೇಶಿಸಿದೆ.
ಬಸವ ರಾಷ್ಟ್ರೀಯ ಪ್ರಶಸ್ತಿಯು 10ಲಕ್ಷ ರೂ.ವೌಲ್ಯವನ್ನು ಹೊಂದಿದ್ದು, ಎ.29ರಂದು ಬಸಬ ಜಯಂತಿಯಂದು ಪ್ರದಾನ ಮಾಡಲಾಗುತ್ತದೆ. ಹಾಗೆಯೇ ರಂಗಭೂಮಿ ಪ್ರಶಸ್ತಿಯು ಮೂರು ಲಕ್ಷ ರೂ.ವೌಲ್ಯ ಹೊಂದಿದ್ದು, ಪ್ರಶಸ್ತಿ ಪ್ರದಾನ ದಿನಾಂಕವನ್ನು ಸಂಬಂಧಿಸಿದ ಸಚಿವ ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ನಿಗದಿ ಪಡಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.