ಆಕರ್ಷಕ ಬಣ್ಣಗಳ ಗಿಳಿಗಳನ್ನು ಖರೀದಿಸುವ ಮುನ್ನ ಇದನ್ನು ಓದಿ

Update: 2017-04-17 08:55 GMT

ಕೋಟ್ಟಯಂ,ಎ. 17: ಕೇರಳದಲ್ಲಿ ಹಕ್ಕಿಗಳ ಮಾರಾಟಕ್ಕೆ ಹೊಸ ತಂತ್ರ ಅನುಸರಿಸಲಾಗುತ್ತಿದೆ. ಬಣ್ಣಹಚ್ಚಿ ಕುಸುರಿ ಕೆಲಸ ಮಾಡಿ ಅವುಗಳ ಸೌಂದರ್ಯ ಹೆಚ್ಚಿಸಲಾಗುತ್ತಿದೆ. ಇಂತಹ ಮೋಸವನ್ನು ಪತ್ತೆಹಚ್ಚಲು ಕೇರಳ ಅರಣ್ಯ ಇಲಾಖೆ ತಪಾಸಣೆ ಆರಂಭಿಸಿದೆ. ಕೋಟ್ಟಯಂನಲ್ಲಿ ಮಾರಲು ಇರಿಸಿದ್ದ 32 ಗಿಳಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಮಾರಲು ತಂದವರು ಓಡಿ ಪರಾರಿಯಾಗಿದ್ದಾರೆ.

ಖರೀದಿಸುವವರನ್ನು ಆಕರ್ಷಿಸಲಿಕ್ಕಾಗಿ ಗಿಳಿಗಳಿಗೆ ಬಣ್ಣಹಚ್ಚುವುದು. ಇದುನೈಜ ಬಣ್ಣವೆಂದು ತಿಳಿದು ಜನರು ಗಿಳಿಗಳನ್ನು ಖರೀದಿಸುತ್ತಾರೆ. ಆದರೆ ಪೈಂಟಿನ ರಾಸಾಯನಿಕಗಳು ಹಕ್ಕಿಗಳ ದೇಹಸೇರಿದೊಡನೆ ಹಕ್ಕಿಗಳು ಹೆಚ್ಚಾಗಿ ಸಾಯುತ್ತವೆ.

ಪಾಲಕ್ಕಾಡ್ ಜಿಲ್ಲೆಯಲ್ಲಿ ತಮಿಳ್ನಾಡಿನ ಗಡಿಭಾಗದಲ್ಲಿ ಇಂತಹಮೋಸಗಾರರು ಇದ್ದಾರೆ. ಅವರು ಹಕ್ಕಿಗಳನ್ನು ಹಿಡಿದು ಪೈಂಟ್ ಬಳಿದು ಆಕರ್ಷಕವಾಗಿಮಾಡಿ ಗಿರಾಕಿಗಳಿಗೆ ಟೋಪಿ ಹಾಕುತ್ತಿದ್ದಾರೆ. ಹಕ್ಕಿಗಳು ಕೂತುಕೊಳ್ಳುವ ಜಾಗದಲ್ಲಿ ಮರಗಳಿಗೆ ಅಂಟು ಹಾಕಿಡುತ್ತಾರೆ. ಹಕ್ಕಿಗಳು ಬಂದು ಅಲ್ಲಿ ಕೂತರೆ ಅವುಗಳಿಗೆ ಹಾರಲು ಸಾಧ್ಯವಾಗುವುದಿಲ್ಲ. ಅವುಗಳನ್ನು ಹಿಡಿದು ಬಣ್ಣ ಬಳಿದು ನಂತರ ಇವರು ಮಾರಲು ತರುತ್ತಾರೆ.

 1972ರ ಅರಣ್ಯ- ವನ್ಯ ಜೀವಿ ಸಂರಕ್ಷಣಾ ಕಾನೂನು ಪ್ರಕಾರ ಕಾಗೆಗಳನ್ನು ಹೊರತುಪಡಿಸಿ ಉಳಿದ ಹಕ್ಕಿಗಳ ಸಾಗಾಟ, ಹಿಡಿಯುವುದು ಮಾರುವುದು ನಾಲ್ಕುತಿಂಗಳು ಜಾಮೀನುರಹಿತ ಜೈಲುಶಿಕ್ಷೆ ವಿಧಿಸಬಹುದಾದ ಅಪರಾಧ ಎಂದು ಕೋಟ್ಟಯಂ ನೇಚರ್ ಸೊಸೈಟಿ ಅಧ್ಯಕ್ಷ ಡಾ. ಬಿ.ಶ್ರೀಕುಮಾರ್‌ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News