ಆಟೊ ರಿಕ್ಷಾ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳ ಮೋಕ್ಷ; ವಿಡಿಯೊ ವೈರಲ್
Photo : X
ಮುಂಬೈ: ತಪ್ಪು ಪಥದಲ್ಲಿ ಆಟೊ ರಿಕ್ಷಾ ಚಲಾಯಿಸುತ್ತಿದ್ದ ಚಾಲಕನಿಗೆ ಘಟ್ಕೊಪಾರ್ (ಪೂರ್ವ) ಕ್ಷೇತ್ರದ ಬಿಜೆಪಿ ಶಾಸಕ ಪರಾಗ್ ಶಾ ಕಪಾಳಮೋಕ್ಷ ಮಾಡಿರುವ ಘಟನೆ ನಡೆದಿದೆ. ಈ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಬಿಜೆಪಿಯ ಪದಾಧಿಕಾರಿಗಳು, ಆಟೊ ರಿಕ್ಷಾ ಚಾಲಕನು ತಪ್ಪಾದ ಪಥದಲ್ಲಿ ತನ್ನ ವಾಹನವನ್ನು ಚಲಾಯಿಸುತ್ತಿದ್ದ. ಆಟೊ ರಿಕ್ಷಾವನ್ನು ಹೀಗೆ ಚಲಾಯಿಸುವ ತುರ್ತಾದರೂ ಏನಿದೆ ಎಂದು ಪರಾಗ್ ಶಾ ಪ್ರಶ್ನಿಸಿದರು. ಅದಕ್ಕೆ ಚಾಲಕನು ನಾನು ಅವಸರದಲ್ಲಿದ್ದೇನೆ ಎಂದು ಉತ್ತರಿಸಿದ ಎಂದು ಹೇಳಿದ್ದಾರೆ.
ಇದಾದ ಬಳಿಕ, ಶಾಸಕ ಪರಾಗ್ ಶಾ ಆಟೊ ರಿಕ್ಷಾ ಚಾಲಕನಿಗೆ ಕಪಾಳ ಮೋಕ್ಷ ಮಾಡಿದ್ದಾರೆ. ಈ ಘಟನೆ ಶುಕ್ರವಾರ ನಡೆದಿದೆ. ಈ ಘಟನೆಯ ವಿಡಿಯೊವನ್ನು ಮುಂಬೈ ಕಾಂಗ್ರೆಸ್ ಮುಖ್ಯಸ್ಥ ಎಂ.ಪಿ.ವರ್ಷ ಗಾಯಕ್ವಾಡ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, “ಬಿಜೆಪಿ ಶಾಸಕರು ಅದೆಷ್ಟು ದುರಹಂಕಾರಿಗಳಾಗಿದ್ದಾರೆಂದರೆ, ಅವರು ಬಡ ರಿಕ್ಷಾ ಚಾಲಕರನ್ನೂ ಬಿಡುತ್ತಿಲ್ಲ” ಎಂದು ಆರೋಪಿಸಿದ್ದಾರೆ.
ಆದರೆ, ಈ ಆರೋಪವನ್ನು ಅಲ್ಲಗಳೆದಿರುವ ಶಾಸಕ ಪರಾಗ್ ಶಾ, “ಆಟೊ ರಿಕ್ಷಾ ಚಾಲಕರು ಹಾಗೂ ದ್ವಿಚಕ್ರ ವಾಹನ ಸವಾರರು ತಪ್ಪು ಪಥದಲ್ಲಿ ಹಾಗೂ ಪಾದಚಾರಿ ಮಾರ್ಗಗಳಲ್ಲಿ ತಮ್ಮ ವಾಹನ ಚಲಾಯಿಸುವ ಕುರಿತು ಸ್ಥಳೀಯರು ಪದೇ ಪದೇ ದೂರು ನೀಡುತ್ತಿದ್ದರು. ಪೂರ್ವ ಘಟ್ಕೋಪಾರ್ ನಲ್ಲಿ ನಡೆದುಕೊಂಡು ಹೋಗಲೂ ಜಾಗವಿಲ್ಲ. ಹಲವಾರು ಸ್ಥಳೀಯ ನಿವಾಸಿಗಳು ರಿಕ್ಷಾ ಚಾಲಕರ ಹಾವಳಿ ಹಾಗೂ ದ್ವಿಚಕ್ರ ವಾಹನ ಸವಾರರು ಸಂಚಾರಿ ನಿಯಮಗಳನ್ನು ಉಲ್ಲಂಘಿಸುತ್ತಿರುವ ಬಗ್ಗೆ ದೂರು ನೀಡುತ್ತಿದ್ದರು” ಎಂದು ತಮ್ಮ ಕೃತ್ಯವನ್ನು ಸಮರ್ಥಿಸಿಕೊಂಡಿದ್ದಾರೆ.
सत्ता का नशा
— Congress (@INCIndia) December 21, 2025
मुंबई में BJP के विधायक ने ऑटो रिक्शा ड्राइवर को थप्पड़ जड़ दिया.
ये घटना बताती है कि BJP के नेता जनता को कीड़े-मकोड़े सा समझते हैं.
ऐसा इसलिए है क्योंकि इनको पता है- ये जनता के वोट से नहीं, चोरी से सरकार में बैठे हैं. pic.twitter.com/t5VjI5uE8Z