ಅಝಾನನ್ನು ಮೋದಿಯೇ ಗೌರವಿಸಿದ್ದರು: ಡಾ.ಇಮಾಮ್ ಉಮರ್ ಅಹ್ಮದ್ ಇಲ್ಯಾಸಿ
Update: 2017-04-17 23:00 IST
ಬೆಂಗಳೂರು, ಎ.17: ಪ್ರಧಾನಿ ನರೇಂದ್ರ ಮೋದಿ ಅವರು ಪಶ್ಚಿಮಬಂಗಾಳದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಭಾಷಣ ಮಾಡುತ್ತಿದ್ದ ವೇಳೆ ಆಝಾನ್ ಕೇಳಿ ತನ್ನ ಭಾಷಣವನ್ನು ನಿಲ್ಲಿಸಿ ಗೌರವ ನೀಡಿದ್ದರು. ಆದರೆ, ಇದೀಗ ಏಕಾಏಕಿ ಗಾಯಕ ಸೋನುನಿಗಮ್ ಅಝಾನ್ ವಿರುದ್ಧ ಟ್ವೀಟ್ ಮಾಡಿರುವುದರಲ್ಲಿ ಅರ್ಥವಿಲ್ಲ ಎಂದು ಆಲ್ ಇಂಡಿಯಾ ಆರ್ಗನೈಝೇಶನ್‌ನ ಆಫ್ ಇಮಾಮ್ಸ್‌ನ ಆಫ್ ಮಸ್ಜಿದ್ ಅಧ್ಯಕ್ಷ ಡಾ.ಇಮಾಮ್ ಉಮರ್ ಅಹ್ಮದ್ ಇಲ್ಯಾಸಿ ಹೇಳಿದ್ದಾರೆ.
ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅಝಾನ್ ಭಾಷಣವಲ್ಲ. ಅದು ಮುಸ್ಲಿಮರಿಗೆ ಕರೆ ನೀಡುವ ಧ್ವನಿಯಾಗಿದೆ. ಅಲ್ಲದೆ, ಇದರಲ್ಲಿ ತೊಂದರೆ ಆಗುತ್ತಿದೆ ಎನ್ನುವುದರಲ್ಲಿ ಯಾವುದೇ ಅರ್ಥವಿಲ್ಲ. ಅಝಾನ್ ಬಗ್ಗೆ ಮಾಹಿತಿ ಇಲ್ಲದವರು ಈ ರೀತಿ ಮಾತನಾಡಲು ಸಾಧ್ಯ ಎಂದು ಕಿಡಿಕಾರಿದರು.