ಏಡ್ಸ್ ಸೋಂಕು ನಿವಾರಣೆಗೆ ಔಷಧಿ: ಮಹದೇಶ್ವರನ್

Update: 2017-04-17 18:00 GMT

ಬೆಂಗಳೂರು, ಎ. 17: ಕೇವಲ ಮೂರು ತಿಂಗಳಲ್ಲಿ ಮಾರಕ ಕಾಯಿಲೆಗಳಾದ ಎಚ್‌ಐವಿ ಪಾಸಿಟಿವ್ ಮತ್ತು ಹೆಪಟೈಟಿಸ್-ಬಿ ಸೋಂಕು ನಿವಾರಿಸಬಹುದಾದ ಔಷಧಿಗಳನ್ನು ಸಂಶೋಧನೆ ಮಾಡಲಾಗಿದೆ ಎಂದು ಗಿಡಮೂಲಿಕೆಗಳ ಸಂಶೋಧಕ ಮಹದೇಶ್ವರನ್ ತಿಳಿಸಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 30 ವರ್ಷಗಳಿಂದ ಮಾರಕ ಕಾಯಿಲೆಗಳಿಗೆ ಔಷಧಿಗಳನ್ನು ಕಂಡುಹಿಡಿಯಲು ಪ್ರಯತ್ನ ಮಾಡಲಾಗುತ್ತಿತ್ತು. ಆದರೆ, 2008-11 ರವರೆಗೆ ತಮಿಳುನಾಡು ಸರಕಾರದಿಂದ ಅನುಮತಿ ಪಡೆದುಕೊಂಡು ಪ್ರಯೋಗಾಲಯದಲ್ಲಿ ನಿರಂತರ ಸಂಶೋಧನೆ ನಡೆಸಲಾಗಿದೆ ಎಂದು ಹೇಳಿದರು.

ಈಗಾಗಲೇ ಸರಕಾರದ ಅನುಮತಿ ಮೇರೆಗೆ 3 ತಿಂಗಳಲ್ಲಿ ಎಚ್‌ಐವಿ ಪಾಸಿಟಿವ್ ಹಾಗೂ ಹೆಪಟೈಟಿಸ್-ಬಿ ಸೋಂಕು ನಿವಾರಿಸಲು ಚಿಕಿತ್ಸೆ ಆರಂಭವಾಗಿದೆ. ಇದರಿಂದ ಸಾಕಷ್ಟು ಸೋಂಕಿತರು ಗುಣಮುಖರಾಗಿದ್ದಾರೆ. ಗಿಡಮೂಲಿಕೆಗಳಿಂದ ತಯಾರಿಸಿದ ಈ ಔಷಧಿಯನ್ನು ಕೈಗೆಟುಕುವ ದರದಲ್ಲಿ ಮಾರಾಟ ಮಾಡಲಾಗುವುದು. ಔಷಧಿ ಸೇವಿಸುವುದರಿಂದ ಸಂಪೂರ್ಣವಾಗಿ ಸೋಂಕಿನಿಂದ ಗುಣಮುಖರಾಗಬಹುದು ಎಂದು ವಿವರಿಸಿದರು.

ಮುಂದಿನ ಜನಾಂಗಕ್ಕೂ ಈ ಔಷಧ ಅನುಕೂಲವಾಗುವಂತೆ ಅಭಿವೃದ್ಧಿಪಡಿಸಲಾಗಿದೆ. ಈ ಔಷಧ ಸೇವಿಸುವುದರಿಂದ ಮುಂದಿನ ಪೀಳಿಗೆಗೆ ಸೋಂಕು ತಗುಲದಂತೆ ನಿಯಂತ್ರಿಸಬಹುದು. ಇವು ಸಂಪೂರ್ಣವಾಗಿ ನೈಸರ್ಗಿಕವಾಗಿ ತಯಾರಿಸಲಾಗಿದ್ದು, ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ ಎಂದು ಅವರು ತಿಳಿಸಿದರು.

ಯಾವುದೇ ಹಂತದ ಎಚ್‌ಐವಿ ಸೋಂಕಿತ ರೋಗಿಗಳು ಇದನ್ನು ಉಪಯೋಗಿಸಬಹುದು. ಔಷಧಿಯನ್ನು ಪೌಡರ್ ರೂಪದಲ್ಲಿ ನೀಡಲಾಗುತ್ತದೆ. ತಮಿಳುನಾಡು ಡಾ.ಎಂ.ಜಿ.ಆರ್. ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಇದರ ಬಗ್ಗೆ ಸಂಶೋಧನೆ ನಡೆಸಲಾಗಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News