ನಗರಗಳ ಪಾರ್ಕಿಂಗ್ ವ್ಯವಸ್ಥೆ ಸುಗಮಗೊಳಿಸಿ

Update: 2017-04-17 18:44 GMT

ಮಾನ್ಯರೆ,

ಬೆಂಗಳೂರು, ಹುಬ್ಬಳ್ಳಿ, ದಾವಣಗೆರೆ ಸೇರಿದಂತೆ ಕೆಲವು ನಗರಗಳಲ್ಲಿ ಇಂದು ದಿನೇ ದಿನೇ ವಾಹನಗಳ ದಟ್ಟಣೆ ಹೆಚ್ಚಾಗುತ್ತಿದೆ. ಜೊತೆಗೆ ಟ್ರಾಫಿಕ್ ತೊಂದರೆಯಿಂದಾಗಿ ಗಂಟೆಗಟ್ಟಲೇ ಸುಡು ಬಿಸಿಲಿನಲ್ಲಿ ಕಾಯುವ ಕಿರಿಕಿರಿಯನ್ನು ಚಾಲಕರು ಅನುಭವಿಸುತ್ತಿದ್ದಾರೆ.

ಇದರ ಬೆನ್ನಲ್ಲೇ ವಾಹನ ನಿಲುಗಡೆಗೆ ವ್ಯವಸ್ಥಿತ ಜಾಗ ಇಲ್ಲದಿರುವುದು ನಗರಗಳಲ್ಲಿನ ಈಗಿನ ದೊಡ್ಡ ಸಮಸ್ಯೆಯಾಗಿದೆ. ಚತುಷ್ಚಕ್ರ, ದ್ವಿಚಕ್ರ ವಾಹನಗಳು ಎಲ್ಲೆಂದರಲ್ಲಿ ಪಾರ್ಕಿಂಗ್ ಮಾಡುವ ಮೂಲಕ ಪಾದಚಾರಿಗಳ ಸಂಚಾರಕ್ಕೆ ತಡೆಯನ್ನುಂಟು ಮಾಡುತ್ತಿವೆ. ಫುಟ್‌ಪಾತ್‌ಗಳು ವ್ಯಾಪಾರಿ ತಾಣಗಳಾಗುತ್ತಿದ್ದು, ರಸ್ತೆಗಳೇ ಪಾರ್ಕಿಂಗ್ ಆಗುವುದರಿಂದ ಸಾರ್ವಜನಿಕರಿಗೆ ಆಗುವ ತೊಂದರೆ ಅಷ್ಟಿಷ್ಟಲ್ಲ.

ಸರಕಾರ ಜನನಿಬಿಡ ನಗರಗಳಲ್ಲಿ ಪಾರ್ಕಿಂಗ್‌ಗೆ ಉತ್ತಮ ವ್ಯವಸ್ಥೆ, ಫುಟ್‌ಪಾತ್ ಸುವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ಇನ್ನಾದರೂ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸಬೇಕು. ಜೊತೆಗೆ ವಾಹನ ಚಾಲಕರು ಸಂಚಾರಿ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸಂಬಂಧ ಪಟ್ಟ ಅಧಿಕಾರಿಗಳು ಹಾಗೂ ಇಲಾಖೆ ಕ್ರಮ ಕೈಗೊಳ್ಳಬೇಕಾಗಿದೆ.

Writer - -ವಿರೇಶ್ ಬಿ.ಡಿ., ದಾವಣಗೆರೆ

contributor

Editor - -ವಿರೇಶ್ ಬಿ.ಡಿ., ದಾವಣಗೆರೆ

contributor

Similar News