ವಿದ್ಯುತ್ ಬಿಲ್

Update: 2017-04-17 18:52 GMT
Editor : -ಮಗು

ನಿನ್ನೆ ಬಂದ ಕರೆಂಟ್ ಬಿಲ್ಲನ್ನು ನೋಡಿ ತಲೆಬಿಸಿಯಾಯಿತು.

ಅಂದು ರಾತ್ರಿ ಬಿಲ್ಲಿನ ಕುರಿತಂತೆಯೇ ಯೋಚಿಸಿ ಮಲಗಿದೆ.

ಬೆಳಗ್ಗೆ ಕಾಲಿಂಗ್ ಬೆಲ್.

ಬಾಗಿಲು ತೆಗೆದೆ. ಯಾರೋ ಗೊತ್ತಿಲ್ಲ ‘‘ಬಿಲ್’’ ಎಂದು ಕೊಟ್ಟು ಹೋದರು.

ಇದೇನಿದು ಮತ್ತೊಂದು ಕರೆಂಟ್ ಬಿಲ್! ಅಚ್ಚರಿಯಿಂದ ಬಿಡಿಸಿ ನೋಡಿದೆ. ಮೈಯೆಲ್ಲ ಕಂಪಿಸಿತು. ಬಿಲ್ ತಂದುಕೊಟ್ಟವನು ಎಲ್ಲೂ ಕಾಣಲಿಲ್ಲ. ಮತ್ತೆ ಬಿಡಿಸಿ ನೋಡಿದೆ. ಶತಶತಮಾನಗಳಿಂದ ಬೆಳಗುತ್ತಿದ್ದ ಸೂರ್ಯನನ್ನು ಉಪಯೋಗಿಸುತ್ತಾ ಬಂದಿರುವುದಕ್ಕಾಗಿ ಬಿಲ್ಲನ್ನು ಕಳುಹಿಸಲಾಗಿತ್ತು. ಯಾರುಕಳುಹಿಸಿದರೋ ಗೊತ್ತಿಲ್ಲ. ಆದರೆ, ಇನ್ನೊಂದು ತಿಂಗಳೊಳಗೆ ಬಿಲ್ ಪಾವತಿ ಮಾಡದೇ ಇದ್ದರೆ ಬೆಳಕಿನ ಸಂಪರ್ಕವನ್ನು ಕಡಿತಗೊಳಿಸುವುದಾಗಿ ಬರೆದಿತ್ತು.

 ನಾನು ಬೆವರಿದೆ. ಒಮ್ಮೆಲೆ ಕಣ್ಣು ಬಿಟ್ಟೆ. ಎಲ್ಲ ಕತ್ತಲು! ಓಹ್ ಕನಸು. ದಿಗ್ಗನೆ ಎದ್ದು ಕುಳಿತೆ. ಅಂದು ನಾನು ನನ್ನ ಬದುಕಿನ ಮೊತ್ತ ಮೊದಲ ಬಾರಿಗೆ ಸೂರ್ಯೋದಯವನ್ನು ವಿನಯದಿಂದ, ಗೌರವದಿಂದ, ಕೃತಜ್ಞತೆಯಿಂದ ನೋಡಿದೆ.

Writer - -ಮಗು

contributor

Editor - -ಮಗು

contributor

Similar News

ದಾಂಪತ್ಯ
ಶಾಂತಿ
ಬೆಳಕು
ಮಾನ್ಯತೆ!
ವ್ಯಾಪಾರ
ಆಕ್ಸಿಜನ್
ಝಲಕ್
ಸ್ವರ್ಗ
ಗೊಂದಲ!
ಪ್ರಾರ್ಥನೆ
ಆ ಚಿಂತಕ!
ಹರಾಜು !