ನೂರುಲ್ ಹುದಾ ದುಬೈ ಅಬೂಹೈಲ್ ಕ್ಲಸ್ಟರ್ ಅಸ್ತಿತ್ವಕ್ಕೆ

Update: 2017-04-18 05:00 GMT

ದುಬೈ, ಎ.18: ಚೆಮ್ಮಾಡ್ ದಾರುಲ್ ಹುದಾ ಇಸ್ಲಾಮಿಕ್ ವಿಶ್ವವಿದ್ಯಾಲಯದ ಅಂಗ ಸಂಸ್ಥೆ, ಕರ್ನಾಟಕದ ನೂರುಲ್ ಹುದಾ ಇಸ್ಲಾಮಿಕ್ ಅಕಾಡಮಿ ಮಾಡನ್ನೂರು ಇದರ ದುಬೈ ಸಮಿತಿ ಅಧೀನದಲ್ಲಿ ಅಬೂ ಹೈಲ್ ಕ್ಲಸ್ಟರ್ ರಚನೆ ಸಭೆ ಹಾಗೂ ವೌಲೀದ್ ಮಜ್ಲಿಸ್ ಕಾರ್ಯಕ್ರಮ ಇತ್ತೀಚೆಗೆ ಇಲ್ಲಿನ ಇಸ್ಮಾಯೀಲ್ ತಿಂಗಳಾಡಿಯವರ ನಿವಾಸದಲ್ಲಿ ಜರಗಿತು.

ಅಶ್ರಫ್ ಅಮ್ಜದಿ ಉಸ್ತಾದ್ ನೇತೃತ್ವ ವಹಿಸಿದ್ದರು. ನೂರುಲ್ ಹುದಾ ಯುಎಇ ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಕೌಡಿಚ್ಚಾರ್ ಸಭೆಯನ್ನು ಉದ್ಘಾಟಿಸಿದರು. ನೂರುಲ್ ಹುದಾ ದುಬೈ ಸಮಿತಿಯ ಕಾರ್ಯಾಧ್ಯಕ್ಷ ಅನ್ವರ್ ಮಣಿಲ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ನೂತನ ನೂತನ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ನೂರುಲ್ ಹುದಾ ಅಬೂಹೈಲ್ ಕ್ಲಸ್ಟರ್ ಪದಾಧಿಕಾರಿಗಳ ವಿವರ:
ಗೌರವಾಧ್ಯಕ್ಷ: ಅಶ್ರಫ್ ಅಮ್ಜದಿ ಮಾಡಾವು
ಅದ್ಯಕ್ಷ: ಇಸ್ಮಾಯೀಲ್ ತಿಂಗಳಾಡಿ
ಪ್ರಧಾನ ಕಾರ್ಯದರ್ಶಿ: ಸಿನಾನ್ ಪೆರ್ಲಂಪಾಡಿ
ಕೋಶಾಧಿಕಾರಿ: ಮುಹಮ್ಮದ್ ಪಳ್ಳತ್ತೂರು

ಉಪಾಧ್ಯಕ್ಷರು: ಹಾರಿಸ್ ಪಾಪೆತಡ್ಕ, ಸಮೀರ್ ತಿಂಗಳಾಡಿ ಕಾರ್ಯದರ್ಶಿಗಳು: ನಾಸಿರ್ ಪಾಪೆತಡ್ಕ, ಹಾರಿಸ್ ಕೊಡಿನೀರು ಸಂಘಟನಾ ಕಾರ್ಯದರ್ಶಿಗಳು: ಹಸೈನಾರ್ ಕರ್ನೂರು, ಶಾನ್ ಕೊಲ್ಲಂ.

ಸಂಚಾಲಕರು: ಶಾಫಿ ಪೆರ್ಲಂಪಾಡಿ, ರಝಾಕ್ ಅಜೆಲಾಡಿ, ಅಬ್ದುಲ್ ಬಾರಿ, ಅಲಿ ಮುಡಿಪು, ಸಮೀರ್ ಪಟ್ಟೆ ತಿಂಗಳಾಡಿ, ರಫೀಕ್ ತಿಂಗಳಾಡಿ, ಬದ್ರುದ್ದೀನ್ ಪೆರ್ಲಂಪಾಡಿ.

ಕಾರ್ಯಕಾರಿ ಸಮಿತಿ ಸದಸ್ಯರು: ಹನೀಫ್ ಈಶ್ವರಮಂಗಲ, ಇಸ್ಮಾಯಿಲ್ ಅಜೆಲಾಡಿ, ಅಬ್ದುಲ್ ಕುಂಞಿ, ಮುಹಮ್ಮದ್ ಇಸ್ಮಾಯೀಲ್, ಅಬ್ದುಲ್ ರಝಾಕ್ ಕೆಮ್ಮಿಂಜೆ, ಆಸಿಫ್ ಪಟ್ಟೆ ತಿಂಗಳಾಡಿ, ಇಬ್ರಾಹೀಂ ಕುಂಬ್ರ, ಅಝರ್ ಸುಳ್ಯ, ಮಿರಾಝ್ ಸುಳ್ಯ ಮೊದಲಾದವರನ್ನು ಆಯ್ಕೆ ಮಾಡಲಾಯಿತು.

ಪ್ರಧಾನ ಕಾರ್ಯದರ್ಶಿ ಸಿನಾನ್ ಪೆರ್ಲಂಪಾಡಿ, ನೂತನ ಕೋಶಾಧಿಕಾರಿ ಮುಹಮ್ಮದ್ ಪಳ್ಳತ್ತೂರು, ಮಾತನಾಡಿ ಸಮಿತಿಯ ಅಭಿವೃದ್ಧಿಗೆ ಶ್ರವಿಸುವ ಭರವಸೆ ನೀಡಿದರು.

ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಶರೀಫ್ ಕಾವು, ನೂತನ ಸಮಿತಿ ಉಪಾಧ್ಯಕ್ಷ ಹಾರಿಸ್ ಪಾಪೆತಡ್ಕ, ಬರ್ ದುಬೈ ಕ್ಲಸ್ಟರ್ ಪ್ರಧಾನ ಕಾರ್ಯದರ್ಶಿ ಮೂಸ ಕುಂಞಿ ಕಾವು ಮತ್ತಿತರರು ಸಂದರ್ಭೊಚಿತವಾಗಿ ಮಾತನಾಡಿ ನೂತನ ಸಮಿತಿಗೆ ಶುಭ ಹಾರೈಸಿದರು.

ನೂರುಲ್ ಹುದಾ ದುಬೈ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಝೀಝ್ ಸೋಂಪಾಡಿ ಸ್ವಾಗತಿಸಿದರು. ನೂರುಲ್ ಹುದಾ ದುಬೈ ಸಮಿತಿಯ ಮಾಧ್ಯಮ ಪ್ರತಿನಿಧಿ ಅಬ್ದುಲ್ಲಾ ನಈಮಿ ನೂತನ ಸಮಿತಿಗೆ ಶುಭ ಹಾರೈಸಿ ವಂದಿಸಿದರು.

Writer - ವರದಿ: ಅಝೀಝ್ ಸೋಂಪಾಡಿ

contributor

Editor - ವರದಿ: ಅಝೀಝ್ ಸೋಂಪಾಡಿ

contributor

Similar News