×
Ad

​ಅಂಗನವಾಡಿ ಕಾರ್ಯಕರ್ತೆ ಆಯ್ಕೆ: ಆತ್ಮಹತ್ಯೆಗೆ ಶರಣಾದ ರೈತನ ಪತ್ನಿಗೆ ಆದ್ಯತೆ; ಸಚಿವೆ ಉಮಾಶ್ರೀ

Update: 2017-04-19 20:37 IST

ಬೆಂಗಳೂರು, ಎ.19:  ಆತ್ಮಹತ್ಯೆ ಮಾಡಿಕೊಂಡ ರೈತನ ಪತ್ನಿಗೆ (ವಿಧವೆ) ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಆಯ್ಕೆ ಸಂದರ್ಭ ಪ್ರಥಮ ಆದ್ಯತೆ ನೀಡಲಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖಾ ಸಚಿವೆ ಉಮಾಶ್ರೀ ತಿಳಿಸಿದ್ದಾರೆ.

ಈ ಹಿಂದೆ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಆಯ್ಕೆ ಸಂದರ್ಭದಲ್ಲಿ ಆ್ಯಸಿಡ್ ದಾಳಿಗೆ ತುತ್ತಾದ ಮಹಿಳೆಯರು, ಬಾಲನ್ಯಾಯ ಕಾಯ್ದೆಯಡಿ ಇಲಾಖೆಯ ಸಂಸ್ಥೆಗಳಲ್ಲಿ ಹಾಗೂ ಮಹಿಳಾ ನಿಲಯಗಳಲ್ಲಿ ಆಶ್ರಯ ಪಡೆದ ಹಾಲಿ/ಮಾಜಿ ನಿವಾಸಿಗಳು, ವಿಧವೆಯರು ಹಾಗೂ ಅಂಗವಿಕಲರು ಅರ್ಜಿ ಸಲ್ಲಿಸಿದ್ದಲ್ಲಿ, ಆ್ಯಸಿಡ್ ದಾಳಿಗೆ ತುತ್ತಾದ ಮಹಿಳೆಯರಿಗೆ ಪ್ರಥಮ ಆದ್ಯತೆ ನೀಡಲಾಗುತ್ತಿತ್ತು.

ಇಲಾಖೆ ಸಂಸ್ಥೆಗಳು, ಮಹಿಳಾ ನಿಲಯಗಳಲ್ಲಿ ಹಾಲಿ-ಮಾಜಿ ನಿವಾಸಿಗಳಿಗೆ 2ನೆ, ವಿಧವೆಯರಿಗೆ 3ನೆ ಆದ್ಯತೆ ಹಾಗೂ ಅಂಗವಿಕಲರಿಗೆ 4ನೆ ಆದ್ಯತೆ ನೀಡಲಾಗಿತ್ತು. ಇತ್ತೀಚಿನ ಸರಕಾರ ಆದೇಶ ಹೊರಡಿಸಿದ್ದು, ಆತ್ಮಹತ್ನೆಗೆ ಶರಣಾದ ರೈತನ ಪತ್ನಿಗೆ (ವಿಧವೆ) ಮೊದಲ ಆದ್ಯತೆ ನೀಡುವುದು. ಅನಂತರದ ಆದ್ಯತೆಗಳನ್ನು ಮೇಲೆ ವಿವರಿಸಿದಂತೆ ಪರಿಗಣಿಸಲಾಗುವುದು ಎಂದು ಅವರು ಪ್ರಕಟನೆಯಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News