×
Ad

ಎ.21: ಕಳಲೆ ಕೇಶಮೂರ್ತಿ, ಗೀತಾ ಮಹದೇವ ಪ್ರಸಾದ್ ಪ್ರಮಾಣ ವಚನ ಸ್ವೀಕಾರ

Update: 2017-04-20 22:26 IST

ಬೆಂಗಳೂರು, ಎ. 20: ನಂಜನಗೂಡು ಮತ್ತು ಗುಂಡ್ಲುಪೇಟೆ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಚುನಾಯಿತರಾದ ಕಳಲೆ ಕೇಶವಮೂರ್ತಿ ಮತ್ತು ಎಂ.ಸಿ. ಮೋಹನ್ ಕುಮಾರ್ ಯಾನೆ ಗೀತಾ ಮಹದೇವ್ರಸಾದ್ ಅವರು ಎ.21ರಂದು ನೂತನ ಶಾಸಕರಾಗಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಹದಿನಾಲ್ಕನೆ ವಿಧಾನಸಭೆಗೆ ಉಪ ಚುನಾವಣೆಯಲ್ಲಿ ಚುನಾಯಿತರಾದ ಉಭಯ ಶಾಸಕರಿಗೆ ನಾಳೆ ಬೆಳಗ್ಗೆ 9:30ಕ್ಕೆ ಸ್ವೀಕರ್ ಕೆ.ಬಿ.ಕೋಳಿವಾಡ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಲಿದ್ದಾರೆ ಎಂದು ವಿಧಾನಸಭೆ ಕಾರ್ಯದರ್ಶಿ ಎಸ್.ಮೂರ್ತಿ ತಿಳಿಸಿದ್ದಾರೆ.

ವಿ.ಶ್ರೀನಿವಾಸ ಪ್ರಸಾದ್ ಶಾಸಕ ಸ್ಥಾನಕ್ಕೆ ರಾಜೀನಾಮೆ ಮತ್ತು ಮಹದೇವ ಪ್ರಸಾದ್ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ ಎರಡೂ ಕ್ಷೇತ್ರಗಳಿಗೆ ಎ.9ರಂದು ಚುನಾವಣೆ ನಡೆದಿತ್ತು. ಕಾಂಗ್ರೆಸ್ ಪಕ್ಷ ಕಳಲೆ ಕೇಶವಮೂರ್ತಿ ಮತ್ತು ಗೀತಾ ಮಹದೇವ ಪ್ರಸಾದ್ ಚುನಾಯಿತರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News