ರೇಸ್ ಕುದುರೆಗಳಿಗೆ ಉದ್ದೀಪನಾ ಮದ್ದು ನೀಡಿದ ಆರೋಪ: ಸಿಇಒ ಸೇರಿ ಐವರ ಬಂಧನ

Update: 2017-04-20 17:28 GMT

ಬೆಂಗಳೂರು, ಎ.20: ಕುದುರೆಗಳಿಗೂ ಉದ್ದೀಪನಾ ಮದ್ದು ನೀಡಿದ ಆರೋಪದ ಮೇಲೆ ಬೆಂಗಳೂರು ಟರ್ಫ್ ಕ್ಲಬ್ ಸಿಇಒ ಸೇರಿ ಐವರ ವಿರುದ್ಧ ಇಲ್ಲಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನಗರದ ರೇಸ್‌ಕೋರ್ಸ್ ರಸ್ತೆಯ ಬೆಂಗಳೂರು ಟರ್ಫ್ ಕ್ಲಬ್ ಸಿಇಒ ನಿರ್ಮಲ್ ಪ್ರಸಾದ್, ಸಿಎಸ್‌ಒ ಪ್ರದ್ಯುಮ್ನ ಸಿಂಗ್, ವಿವೇಕ್ ಉಬಯ್‌ಕರ್, ಅರ್ಜುನ ಸಜನಾನಿ ಮತ್ತು ನೀಲ್ ದರ್ಶನ್ ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ ಆರೋಪಿಗಳು ರೇಸ್‌ಕೋರ್ಸ್‌ನಲ್ಲಿ ಭಾಗವಹಿಸುವ ಕುದುರೆಗಳಿಗೆ ಹಾಗೂ ‘ಕ್ವೀನ್ ಲತೀಫಾ’ ಹೆಸರಿನ ಕುದುರೆಗೂ ಉದ್ದೀಪನಾ ಮದ್ದು ನೀಡಿದ್ದರು ಎಂದು ಆರೋಪಿಸಿ ಕುದುರೆ ಮಾಲಕ ಎಚ್.ಎಸ್ ಚಂದ್ರೇಗೌಡ ಎಂಬವರು ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಪ್ರಕರಣದ ತನಿಖೆ ನಡೆಸಿದ ಪೊಲೀಸರು ರೇಸ್‌ಕೋರ್ಸ್‌ನಲ್ಲಿರುವ ಆಯ್ದ ಕುದುರೆಗಳ ಮೂತ್ರವನ್ನು ಪರೀಕ್ಷೆಗಾಗಿ ದೆಹಲಿಯಲ್ಲಿರುವ ಲ್ಯಾಬ್‌ಗೆ ಕಳುಹಿಸಿದಾಗ ಡೋಪಿಂಗ್ ಟೆಸ್ಟ್‌ನಲ್ಲಿ ಪಾಸಿಟಿವ್ ಅಂಶ ಬಂದಿದ್ದು, ಉದ್ದೀಪನಾ ನೀಡಿರುವುದು ಸಾಬೀತು ಆಗಿದೆ.ಈ ವಿಚಾರ ತಿಳಿಯುತ್ತಿದ್ದಂತೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News