ಸೌದಿಯ ಮಾಲ್ ಒಳಗೂ ನುಗ್ಗಿದ ಸ್ವದೇಶಿ

Update: 2017-04-21 05:42 GMT

ರಿಯಾದ್, ಎ.21: ಸೌದಿಯ ಶಾಪಿಂಗ್ ಮಾಲ್‌ಗಳಲ್ಲಿ ಕೆಲಸಗಳನ್ನು ಸ್ವದೇಶಿ ಯುವಕ ಯುವತಿಯರಿಗೆ ಸೀಮಿತಗೊಳಿಸಿ ಕಾರ್ಮಿಕ, ಸಮಾಜಲ್ಯಾಣ ಸಚಿವ ಡಾ. ಅಲಿ ಅಲ್‌ಗಫೀಸ್ ಆದೇಶ ಹೊರಡಿಸಿದ್ದಾರೆ.ಇದನ್ನು ಸಚಿವಾಲಯದ ಅಧಿಕೃತ ವಕ್ತಾರ ಖಾಲಿದ್ ಅಬಲ್‌ಖೈಲ್ ಗುರುವಾರ ಟ್ವೀಟ್ ಮಾಡಿ ತಿಳಿಸಿದ್ದಾರೆ. ಆದರೆ ಟ್ವೀಟ್‌ಮೂಲಕ ಹೊರಡಿಸಲಾದ ಪ್ರಕಟನೆಯ ವಿವರವಾದ ಅಂಶಗಳು ಬಹಿರಂಗಗೊಂಡಿಲ್ಲ. ಈ ಆದೇಶ ಯಾವಾಗಿನಿಂದ ಜಾರಿಗೆ ಬರುತ್ತದೆ ಎಂದೂ ಸ್ಪಷ್ಟವಾಗಿಲ್ಲ.

ಅಲ್‌ಖಸೀಂ ಪ್ರದೇಶದ ಶಾಪಿಂಗ್ ಮಾಲ್‌ಗಳ ವ್ಯಾಪಾರ ಸಂಸ್ಥೆಗಳು, ವಾಹನ ವಹಿವಾಟು ಇತ್ಯಾದಿಗಳನ್ನು ಮುಂದಿನ ಹಿಜರಿ ಹೊಸವರ್ಷದಿಂದ ಕೇವಲ ಸ್ವದೇಶಿಗಳಿಗೆ ಮೀಸಲಿಡಲಾಗುವುದು ಎಂದು ಇಲ್ಲಿನ ಕಾರ್ಮಿಕ ಸಚಿವಾಲಯದ ಶಾಖೆ ಸ್ಪಷ್ಟಪಡಿಸಿದೆ. ಇದು ಮೊಹರಮ್ ಒಂದು(ಸೆ. 11) ರಿಂದಜಾರಿಗೊಳಿಸಲು ಈಪ್ರದೇಶದ ಶಾಪಿಂಗ್ ಮಾಲ್ ಮಾಲಕರಿಗೆ ಸಚಿವಾಲಯ ಶಾಖೆ ಸೂಚಿಸಿದೆ.

2011ರಿಂದ ಸೌದಿಅರೇಬಿಯದಲ್ಲಿ ನಿತಾಕತ್(ಸ್ವದೇಶೀಕರಣ) ಮುಂದುವರಿದ ಕ್ರಮ ಇದಾಗಿದ್ದು, ಶಾಪಿಂಗ್ ಮಾಲ್‌ನಲ್ಲಿ ದುಡಿಯುತ್ತಿರುವ ಭಾರತೀಯರ ಸಹಿತ ಸಾವಿರಾರು ಮಂದಿಗೆ ಹೊಸ ಕಾನೂನು-ಆದೇಶಗಳಿಂದ ತುಂಬಾ ಸಂಕಷ್ಟ ಎದುರಾಗಿದೆ. ರೆಂಟ್ ಎ ಕಾರ್ ಕ್ಷೇತ್ರವನ್ನು ಕೂಡಾ ಶೀಘ್ರದಲ್ಲಿ ಸ್ವದೇಶಶೀಕರಣ ಗೊಳಿಸಲಾಗುತ್ತಿದ್ದು, ಇದಕ್ಕಾಗಿ ಅಭಿಮತ ಸಂಗ್ರಹದ ಕೆಲಸವನ್ನು ಕಾರ್ಮಿಕ-ಸಮಾಜಕಲ್ಯಾಣ ಸಚಿವಾಲಯ ಆರಂಭಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News