ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆಗಾಗಿ ಬಡ್ಡಿ ರಹಿತ ಸಾಲ

Update: 2017-04-21 17:06 GMT

ಬೆಂಗಳೂರು, ಎ. 21: ಕ್ಯಾನ್ಸರ್ ಪೀಡಿತರಿಗೆ ಚಿಕಿತ್ಸೆಗೆ ನೆರವು ನೀಡುವ ಉದ್ದೇಶದಿಂದ ಹೆಲ್ತ್ ಕೇರ್ ಗ್ಲೋಬಲ್ ಎಂಟರ್ ಪ್ರೈಸಸ್ ಸಂಸ್ಥೆಯು ಬಡ್ಡಿ ರಹಿತ ಸಾಲ ಸೌಲಭ್ಯವನ್ನು ಕಲ್ಪಿಸಲು ಮುಂದಾಗಿದೆ.

ಸಂಸ್ಥೆಯು ಈಗಾಗಲೇ ಆರೋಗ್ಯ ಫೈನಾನ್ಸ್‌ದೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಈ ಮೂಲಕ ತನ್ನಲ್ಲಿಗೆ ಚಿಕಿತ್ಸೆ ಪಡೆಯಲು ಬರುವ ರೋಗಿಗಳಿಗೆ ಬಡ್ಡಿಯಿಲ್ಲದ ಸಾಲವನ್ನು ದೊರಕಿಸಿಕೊಟ್ಟು, ಹೆಚ್ಚು ಗುಣಮಟ್ಟದ ಕ್ಯಾನ್ಸರ್ ಚಿಕಿತ್ಸೆ ಅವರಿಗೆ ದೊರಕುವಂತೆ ಮಾಡುವುದು ಸಂಸ್ಥೆಯ ಗುರಿಯಾಗಿದೆ. ಈ ಸೇವೆಯ ಅವಕಾಶ ಬೆಂಗಳೂರು, ಗುಲ್ಬರ್ಗ ಹಾಗೂ ಮೈಸೂರಿನಲ್ಲಿ ಲಭ್ಯವಾಗಲಿದೆ.

  ಭಾರತದಲ್ಲಿ ಕ್ಯಾನ್ಸರ್ ಚಿಕಿತ್ಸೆ ದುಬಾರಿಯಾಗಿರುವ ಕಾರಣ ಬಹುತೇಕ ಮಂದಿಗೆ ಗುಣಮಟ್ಟದ ಚಿಕಿತ್ಸೆ ಲಭ್ಯವಾಗುವುದಿಲ್ಲ. ಹೀಗಾಗಿ ಕ್ಯಾನ್ಸರ್ ಚಿಕಿತ್ಸೆಯನ್ನು ಸುಲಭದಲ್ಲಿ ಹಾಗೂ ಅಗ್ಗದ ದರದಲ್ಲಿ ದೊರೆಯುವಂತೆ ಮಾಡುವುದು ನಮ್ಮ ಗುರಿಯಾಗಿದೆ. ನಮ್ಮ ನಂಬಿಕೆ ಪ್ರಕಾರ, ಬಡವ- ಶ್ರೀಮಂತ ಯಾರೇ ಆಗಿರಲಿ ಎಲ್ಲರಿಗೂ ಸಮಾನವಾಗಿ ಚಿಕಿತ್ಸೆ ಲಭ್ಯವಾಗಬೇಕು ಎಂದು ಆಸ್ಪತ್ರೆಯ ವೈದ್ಯ ಾ.ಬಿ.ಎಸ್.ಅಜಯ್‌ಕುಮಾರ್ ತಿಳಿಸಿದ್ದಾರೆ.

ಕ್ಯಾನ್ಸರ್ ಚಿಕಿತ್ಸೆಗೆ ಹೊಸ ಮಾದರಿಯಲ್ಲಿ ಹೊಸ ಚಿಂತನೆಯಾಗಿದ್ದು, ಆರೋಗ್ಯ ಫೈನಾನ್ಸ್‌ದೊಂದಿಗೆ ಒಂದು ನಂಬಿಕೆಯ ಮೇಲೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಕ್ಯಾನ್ಸರ್ ಪೀಡಿತರಿಗೆ ಆರ್ಥಿಕ ಸಹಕಾರ ಸಿಗುವಂತೆ ಮಾಡುವುದು ನಮ್ಮ ಮೂಲ ಉದ್ದೇಶವಾಗಿದೆ. ತುರ್ತು ಹಣಕಾಸು ಅಗತ್ಯವಿರುವವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

  ಆರೋಗ್ಯ ಫೈನಾನ್ಸ್ ಅಗತ್ಯ ಇರುವಂಥ ರೋಗಿಗಳಿಗೆ ಮೊದಲ 12 ತಿಂಗಳಿಗೆ ಬಡ್ಡಿ ರಹಿತ ಆರೋಗ್ಯ ಸೇವಾ ಹಣಕಾಸಿನ ನೆರವನ್ನು ನೀಡುತ್ತದೆ. ಒಂದು ವೇಳೆ ಲೋನ್ ಅವಧಿ ಒಂದು ವರ್ಷ ಅವಧಿಗಿಂತ ಮೀರಿದ್ದರೆ, ಕನಿಷ್ಠ ಬಡ್ಡಿದರವನ್ನು ಹಾಕಲಾಗುತ್ತದೆ. 6ತಿಂಗಳಿಂದ ಆರಂಭಗೊಂಡು 48 ತಿಂಗಳವರೆಗೆ ಲೋನ್ ನೀಡಲಾಗುತ್ತದೆ. ಮೊದಲ ಒಂದು ವರ್ಷಕ್ಕೆ ಶೂನ್ಯ ಬಡ್ಡಿ, ಎರಡನೇ ವರ್ಷಕ್ಕೆ ಶೇ.6, ಮೂರನೇ ವರ್ಷಕ್ಕೆ ಶೇ.8, ನಾಲ್ಕನೇ ವರ್ಷಕ್ಕೆ ಶೆೀ.9 ಶುಲ್ಕವನ್ನು ವಿಧಿಸಲಾಗುತ್ತದೆ.

   ಐದು ಮಂದಿಯಿರುವ ಕುಟುಂಬಕ್ಕೆ 3 ಲಕ್ಷವರೆಗೆ ಸಾಲ ಪಡೆಯಬಹುದಾದ ಲೋನ್ ಕಾರ್ಡ್ ದೊರೆಯಲಿದ್ದು, ಒಂದು ವರ್ಷ ಕಾಲ ಅದರ ವ್ಯಾಲಿಡಿಟಿಯಿರುತ್ತದೆ ಮತ್ತು ಎರಡನೇ ವರ್ಷಕ್ಕೆ ಕನಿಷ್ಠ ಶುಲ್ಕದೊಂದಿಗೆ ರಿನೀವಲ್ ಮಾಡಿಕೊಳ್ಳಬಹುದು. ಸಂಬಂಧಿತ ಅಧಿಕಾರಿಗಳು ಲೋನ್ ಪಡೆಯುವ ವ್ಯಕ್ತಿಯ ವಿಶ್ವಾಸಾರ್ಹತೆ ಹಾಗೂ ಲೋನ್ ಪಾವತಿಸಲು ಅವರು ಹೊಂದಿರುವ ಸಾಮರ್ಥ್ಯವನ್ನು ಪರಿಶೀಲನೆ ಮಾಡಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News