​ಉದ್ಯಮಿ, ‘ಸ್ಟೀಲ್ ಸೆಂಟರ್’ ನ ಹಾಜಿ ಹಸನ್ ಬಾವ ನಿಧನ

Update: 2017-04-22 04:29 GMT

ಮಂಗಳೂರು, ಎ.22: ಪಾಂಡೇಶ್ವರ ನಿವಾಸಿ, ಉದ್ಯಮಿ ಹಾಜಿ ಹಸನ್ ಬಾವ ಹಾಜಿ(60) ಇಂದು ಬೆಳಗ್ಗೆ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಕಳೆದ ಕೆಲವು ದಿನಗಳಿಂದ ಕಿಡ್ನಿ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಇವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರಿಂದು ಬೆಳಗ್ಗೆ 6:30ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ.

ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

ಹಸನ್ ಬಾವ ಹಾಜಿ ನಗರದ ಬಂದರ್‌ನಲ್ಲಿರುವ ‘ಸ್ಟೀಲ್ ಸೆಂಟರ್’ ಇದರ ಪಾಲುದಾರರಾಗಿದ್ದರು. ಮೃತರು ಇದರ ಇನ್ನೋರ್ವ ಪಾಲುದಾರ ಸಮಾಜ ಸೇವಕ ಹಾಜಿ ಮೂಸಾ ಮೊಯ್ದಿನ್ ಅವರ ಕಿರಿಯ ಸಹೋದರರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ