ಜ್ಞಾನ ಮತ್ತು ತಖ್ವಾ ಇರುವವರೇ ನಿಜವಾದ ಆಲಿಂ: ಉಸ್ತಾದ್ ಹಾರೂನ್ ಅಹ್ಸನಿ

Update: 2017-04-23 11:27 GMT

ಅಬುಧಾಬಿ, ಎ.23: ಜ್ಞಾನ ಮತ್ತು ತಖ್ವಾ ಇರುವವರು ಮಾತ್ರ ನಿಜವಾದ ಆಲಿಂ. ಆಲಿಂಗಳು ಉತ್ತಮ ಸ್ವಭಾವ, ಗುಣ, ಇಖ್ಲಾಸ್ ಮತ್ತು ಸೂಕ್ಷ್ಮತೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅಲ್ಹಾಜ್ ಹಾರೂನ್ ಅಹ್ಸನಿ ಹೇಳಿದರು.

ಕರ್ನಾಟಕ ಎಸ್ಕೆಎಸ್ಸೆಸ್ಸೆಫ್ ಅಬುಧಾಬಿ ಸಮಿತಿಯ ಮಹಾಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

ಸಮಿತಿಯ ಅಧ್ಯಕ್ಷ ಹನೀಫ್ ಅರಿಯಮೂಲೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸೈಯದ್ ಅಬ್ದುರ್ರಹ್ಮಾನ್ ತಂಙಳ್ ಸಭೆಯನ್ನು ಉದ್ಘಾಟಿಸಿದರು.

ಇದೇ ಸಂದರ್ಭ ಮುಖ್ಯ ಅತಿಥಿಯಾಗಿ ಆಗಮಿಸಿದ ಉಸ್ತಾದ್ ಅಲ್ಹಾಜ್ ಹಾರೂನ್ ಅಹ್ಸನಿಯವರನ್ನು ಸನ್ಮಾನಿಸಲಾಯಿತು. ಪ್ರಧಾನ ಕಾರ್ಯದರ್ಶಿ ಶಾಫಿ ಪೆರುವಾಯಿ ವರದಿ ಮತ್ತು ಲೆಕ್ಕ ಪತ್ರವನ್ನು ಮಂಡಿಸಿದರು. ಅಬುಧಾಬಿ ಸುನ್ನಿ ಸೆಂಟರ್ ಉಪಾಧ್ಯಕ್ಷ ಸೈಯದ್ ಅಬ್ದುಲ್ ರಹ್ಮಾನ್ ತಂಙಳ್ ದುಆ ನೆರವೇರಿಸಿದರು. ಅಲಿ ಕಟ್ಟತ್ತಾರ್ ಕಿರಾಅತ್ ಪಠಿಸಿದರು. ಕಾರ್ಯಕ್ರಮದಲ್ಲಿ 2017-18ನೆ ಸಾಲಿನ ನೂತನ ಸಮಿತಿಯನ್ನು ರಚಿಸಲಾಯಿತು.

ಅಧ್ಯಕ್ಷರಾಗಿ ಹನೀಫ್ ಅರಿಯಮೂಲೆ, ಉಪಾಧ್ಯಕ್ಷರಾಗಿ ಅಬ್ದುಲ್ ಖಾದರ್ ಕಾರ್ಕಳ, ಎ.ಬಿ.ಮೊಯ್ದಿನ್ ಬೆಳ್ಳಾರೆ, ಮುಹಮ್ಮದ್ ಮಡಿಕೇರಿ, ಅಬ್ದುರ್ರಹ್ಮಾನ್ ಬಾಯಾರ್, ಪ್ರಧಾನ ಕಾರ್ಯದರ್ಶಿಯಾಗಿ ಶಾಫಿ ಪೆರುವಾಯಿ, ವರ್ಕಿಂಗ್ ಕಾರ್ಯದರ್ಶಿಯಾಗಿ ಹಕೀಂ ನಾಳ, ಕಾರ್ಯದರ್ಶಿಗಳಾಗಿ ಬಶೀರ್ ಕಾವು, ಯಹ್ಯಾ ಕೊಡ್ಲಿಪೇಟೆ, ಹುಸೈನ್ ರೆಂಜಲಾಡಿ, ಅಶ್ರಫ್ ಮಾಕುಡೆ, ಕೋಶಾಧಿಕಾರಿಯಾಗಿ ಮಜೀದ್ ಅರಿಯಮೂಲೆ,  ಸದಸ್ಯರಾಗಿ ಝಾಯಿದ್ ನಾಳ, ಬಶೀರ್ ಅರಿಯಮೂಲೆ, ಸುಲ್ತಾನ್ ಹಮೀದ್ ಅಡ್ಕಸ್ಥಳ, ಅಬ್ದುಲ್ ಖಾದರ್ ಕೊಪ್ಪಳ, ಸಿದ್ದೀಕ್ ಪಾಣೆಮಂಗಳೂರು ಆಯ್ಕೆಯಾದರು.

ಎಸ್ಕೆಎಸ್ಸೆಸ್ಸೆಫ್ ಅಬುಧಾಬಿ ರಾಜ್ಯ ಸಮಿತಿ ಅಧ್ಯಕ್ಷರಾದ ಅಬ್ದುಲ್ ಅಝೀಝ್ ಮುಸ್ಲಿಯಾರ್, ಎ.ಬಿ.ಮೊಯ್ದಿನ್, ಸ್ವಾಬಿರ್ ಮಾಟೂರು ನೂತನ ಸಮಿತಿಗೆ ಶುಭ ಹಾರೈಸಿದರು.  ಸಿದ್ದೀಕ್ ಉಚ್ಚಿಲ, ಶಾಫಿ ವೆಟಿಕ್ಕಾಟ್ರಿ, ಮಜೀದ್ ಅರಿಯಮೂಲೆ ಮತ್ತು ಶಮೀರ್ ಮಾಸ್ಟರ್ ವೇದಿಕೆಯಲ್ಕಿ ಉಪಸ್ಥಿರಿದ್ದರು.

ಕರ್ನಾಟಕ SKSSF ಅಬುಧಾಬಿ ಸಮಿತಿಯ ಖಜಾಂಚಿ ಟಿ.ಎಂ.ಹನೀಫ್ ಮುಸ್ಲಿಯಾರ್ ಸ್ವಾಗತಿಸಿದರು. ಸರಗ ಜಿಲ್ಲಾ SKSSF ಅಧ್ಯಕ್ಷ ಕಮಾಲ್ ಮಲ್ಲಂ ಕಾರ್ಯಕ್ರಮ ನಿರೂಪಿಸಿದರು.

Writer - ಇಬ್ನ್ ಝೈತೂನ್

contributor

Editor - ಇಬ್ನ್ ಝೈತೂನ್

contributor

Similar News