ಯುಎಇನಲ್ಲಿ ಬುಧವಾರ ಈದ್ ಉಲ್ ಫಿತರ್ ಆಚರಣೆ

Update: 2024-04-08 17:07 GMT

ಸಾಂದರ್ಭಿಕ ಚಿತ್ರ

ದುಬೈ : ಶವ್ವಾಲ್ ಚಂದ್ರದರ್ಶನವಾಗದ ಕಾರಣ ಯುಎಇಯಲ್ಲಿ ಬುಧವಾರ ಎ.10 ರಂದು ಈದ್ ಉಲ್ ಫಿತರ್ ಆಚರಣೆ ನಡೆಯಲಿದೆ ಎಂದು khaleejtimes ವರದಿ ಮಾಡಿದೆ.

ಯುಎಇ ನಿವಾಸಿಗಳಿಗೆ ಪವಿತ್ರ ರಮಝಾನ್ ತಿಂಗಳು ಪೂರ್ಣ 30 ದಿನಗಳವರೆಗೆ ಇರಲಿದೆ. ಮಂಗಳವಾರ ರಮಝಾನ್ ನ ಕೊನೆಯ ದಿನವಾಗಿದೆ. ಯುಎಇಯ ಚಂದ್ರದರ್ಶನ ಸಮಿತಿಯು ಚಂದ್ರ ದರ್ಶನವಾದರೆ ಮಾಹಿತಿ ನೀಡುವಂತೆ ಜನರಲ್ಲಿ ಕೇಳಿಕೊಂಡಿತ್ತು. ಆದರೆ ಎಲ್ಲೂ ಚಂದ್ರ ದರ್ಶನವಾದ ಮಾಹಿತಿ ಬಂದಿಲ್ಲ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News