ಗುಜರಾತ್ ಲಯನ್ಸ್‌ಗೆ ಇರ್ಫಾನ್ ಪಠಾಣ್

Update: 2017-04-25 18:35 GMT

ಹೊಸದಿಲ್ಲಿ, ಎ.25: ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಐಪಿಎಲ್‌ನಲ್ಲಿ ಕೊನೆಗೂ ಅವಕಾಶ ಗಿಟ್ಟಿಕೊಂಡಿದ್ದಾರೆ. ಗುಜರಾತ್ ಲಯನ್ಸ್‌ನಲ್ಲಿ ಡ್ವೇಯ್ನ್ ಬ್ರಾವೊ ಸ್ಥಾನದಲ್ಲಿ ಆಡುವ ಅವಕಾಶ ಪಡೆದಿದ್ದಾರೆ.

ಆಟಗಾರರ ಹರಾಜು ವೇಳೆ 50 ಲಕ್ಷ ರೂ. ಮೂಲಬೆಲೆ ಹೊಂದಿದ್ದ ಇರ್ಫಾನ್ ಪಠಾಣ್ ಅವರನ್ನು ಯಾವುದೇ ತಂಡ ಖರೀದಿಸದೆ ಕಡೆಗಣಿಸಿತ್ತು.

ಬ್ರಾವೊ ಗಾಯದ ಕಾರಣದಿಂದಾಗಿ ತಂಡದಿಂದ ಹೊರಗುಳಿಯುವಂತಾಗಿದೆ. ಇದು ಲಯನ್ಸ್ ತಂಡಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಐಪಿಎಲ್‌ನ ಎಂಟು ತಂಡಗಳ ಪೈಕಿ ಅಂಕಪಟ್ಟಿಯಲ್ಲಿ ಲಯನ್ಸ್ 7ನೆ ಸ್ಥಾನದಲ್ಲಿದೆ. ಗುಜರಾತ್ ಲಯನ್ಸ್ ಬೌಲಿಂಗ್ ಆಲ್‌ರೌಂಡರ್‌ನ ಹುಡುಕಾಟದಲ್ಲಿತ್ತು. ಇರ್ಫಾನ್ ಪಠಾಣ್‌ರನ್ನು ಕೊನೆಗೂ ಸೇರಿಸಿಕೊಂಡಿದೆ.

102 ಐಪಿಎಲ್ ಪಂದ್ಯಗಳನ್ನು ಆಡಿರುವ ಇರ್ಫಾನ್ ಪಠಾಣ್ ದೇಶದ ಅತ್ಯುತ್ತಮ ಆಲ್‌ರೌಂಡರ್‌ಗಳ ಪೈಕಿ ಒಬ್ಬರಾಗಿದ್ದಾರೆ. 32ರ ಹರೆಯದ ಇರ್ಫಾನ್ ಕಳೆದ ನಾಲ್ಕು ವರ್ಷಗಳಿಂದ ರಾಷ್ಟ್ರೀಯ ತಂಡದಿಂದ ದೂರವಾಗಿದ್ದಾರೆ. ಐಪಿಎಲ್‌ನಲ್ಲಿ 80 ವಿಕೆಟ್ ಮತ್ತು 1,137 ರನ್ ಸಂಪಾದಿಸಿದ್ದಾರೆ.

ಐಪಿಎಲ್‌ನಲ್ಲಿ ಕಳೆದ 9 ವರ್ಷಗಳಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್, ಡೆಲ್ಲಿ ಡೇರ್‌ಡೆವಿಲ್ಸ್, ಚೆನ್ನೈ ಸೂಪರ್ ಕಿಂಗ್ಸ್, ಸನ್‌ರೈಸರ್ಸ್‌ ಹೈದರಾಬಾದ್ ಮತ್ತು ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ತಂಡದ ಪರ ಆಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News