×
Ad

ವಿರೋಧದ ನಡುವೆಯೇ ಬಿಜೆಪಿ ಭಿನ್ನಮತೀಯ ಮುಖಂಡರ ಸಭೆ ಆರಂಭ

Update: 2017-04-27 12:03 IST

ಬೆಂಗಳೂರು, ಎ.27: ವಿಧಾನಪರಿಷತ್ ಪ್ರತಿಪಕ್ಷನಾಯಕ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ಬಿಜೆಪಿ ಭಿನ್ನಮತೀಯ ಮುಖಂಡರ ಸಭೆ ಆರಂಭವಾಗಿದೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಬಿಜೆಪಿ ಪ್ರಮುಖ ಕಾರ್ಯಕರ್ತರ ಸಂಘಟನಾ ಸಭೆ ಎನ್ನುವ ಹೆಸರಿನಲ್ಲಿ ಸಭೆ ನಡೆಯುತ್ತಿದ್ದು, ಮಾಜಿ ಸಚಿವ ಸೊಗಡು ಶಿವಣ್ಣ, ಎಂ.ಎಲ್.ಸಿ. ಭಾನುಪ್ರಕಾಶ್, ಸೋಮಣ್ಣ ಬೇವಿನಮರದ ಮಾಜಿ ಸಚಿವ ರವೀಂದ್ರ ನಾಥ್, ಸೇರಿದಂತೆ ಪ್ರಮುಖ ಭಿನ್ನಮತೀಯ ಮುಖಂಡರು ಭಾಗಿಯಾಗಿದ್ದಾರೆ.

ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಸುಮಾರು 700 ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News