×
Ad

ಯಾವ ಕಾರಣಕ್ಕೂ ಪಕ್ಷ ಬಿಡಲ್ಲ, ಬೇರೆ ಪಕ್ಷ ಕಟ್ಟಲ್ಲ

Update: 2017-04-27 13:22 IST

ಬೆಂಗಳೂರು, ಎ.27: ನಾವು ತಂದೆ-ತಾಯಿಗೆ ಹುಟ್ಟಿದವರು . ಜೀವ ಹೋದರೂ ಯಾವ ಕಾರಣಕ್ಕೂ ಬೇರೆ ಪಕ್ಷಕ್ಕೆ ಹೋಗಲ್ಲ, ಬೇರೆ ಪಾರ್ಟಿ ಕಟ್ಟಲ್ಲ ಎಂದು ವಿಪಕ್ಷ ನಾಯಕ ಕೆಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.

ನಗರದ ಅರಮನೆ ಮೈದಾನದಲ್ಲಿ ಗುರುವಾರ ಬಿಜೆಪಿಯ ಭಿನ್ನಮತರು ಆಯೋಜಿಸಿದ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಈಶ್ವರಪ್ಪ ಪಕ್ಷದ ರಾಜ್ಯಾಧ್ಯಕ್ಷ ಯಡಿಯೂರಪ್ಪರನ್ನು ಗುರಿಯಾಗಿಸಿ ದಾಳಿ ನಡೆಸಿದ್ದಾರೆ.

‘‘ಪ್ರಾಮಾಣಿಕ ಕಾರ್ಯಕರ್ತರನ್ನು ಅಮಾನತು ಮಾಡುತ್ತೀರಾ?, ನಮ್ಮ ತಂಟೆಗೆ ಬಂದರೆ ಹುಷಾರ್. ನಮಗೆ ಇಂದು ಸಭೆ ನಡೆಸದಂತೆ ನೀವು ಎಚ್ಚರಿಕೆ ನೀಡುತ್ತೀರಾ, ನಾವು ಈ ಸಭೆಯ ಮೂಲಕ ನಿಮಗೆ ಎಚ್ಚರಿಕೆ ನೀಡುತ್ತೇವೆ’’ ಎಂದು ಯಡಿಯೂರಪ್ಪಗೆ ಈಶ್ವರಪ್ಪ ಎಚ್ಚರಿಕೆ ನೀಡಿದರು.
"ನೀವು ಈ ಹಿಂದೆ ಕೆಜಿಪಿ ಪಕ್ಷ ಕಟ್ಟಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕಾರಣರಾಗಿದ್ದೀರಿ. ನಿಮ್ಮಿಂದ ನಾವು ಪಾಠ ಕಲಿಯಬೇಕಾಗಿಲ್ಲ. ನಿಮ್ಮ ಧೋರಣೆ ಸರಿಯಲ್ಲ. ಪಕ್ಷ ಬಿಟ್ಟು ಹೋದವರು ನಮಗೆ ಪಾಠ ಕಲಿಸುವ ಅಗತ್ಯವಿಲ್ಲ'' ಎಂದು ಈಶ್ವರಪ್ಪ ಕಿಡಿಕಾರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News