ಬೀಫಾತಿಮಾ
Update: 2017-04-27 18:31 IST
ಉಳ್ಳಾಲ, ಎ.27: ಕೇಂದ್ರ ಜುಮಾ ಮಸೀದಿ ಖತೀಬರಾಗಿದ್ದ ಪ್ರಸಿದ್ಧ ವಿದ್ವಾಂಸ ಮರ್ಹೂಂ ಯೂಸುಫ್ ಜಝೂಲಿಯವರ ಪತ್ನಿ ಬೀಫಾತಿಮಾ (97) ಉಳ್ಳಾಲ ಹಳೆಕೋಟೆಯ ತಮ್ಮ ಸ್ವಗೃಹ ನಿಧನರಾದರು.
ಮೃತರು ನಾಲ್ಕು ಗಂಡು, ಎರಡು ಹೆಣ್ಣು ಮಕ್ಕಳು, ಮೊಮ್ಮಕ್ಕಳು ಹಾಗೂ ಮರಿ ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಬೀಫಾತಿಮ ಉಳ್ಳಾಲ ಸೈಯದ್ ಮದನಿ ದರ್ಗಾ ಶರೀಫ್ ಇದರ ಮಾಜಿ ಉಪಾಧ್ಯಕ್ಷ ಅಶ್ರಫ್ ಅಹ್ಮದ್ ರೈಟ್ ವೇಯವರ ಅಜ್ಜಿ.