ಕೇಂದ್ರದಿಂದ ಲೋಕಪಾಲರ ನೇಮಕ ವಿಳಂಬ: ಪ್ರಧಾನಿ, ಬಿಜೆಪಿ ನಾಯಕರು ಕ್ಷಮೆಯಾಚಿಸಲಿ; ವಿ.ಎಸ್.ಉಗ್ರಪ್ಪ

Update: 2017-04-28 16:49 GMT

ಬೆಂಗಳೂರು, ಎ.28: ದೇಶದಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಕೇಂದ್ರದಲ್ಲಿ ಲೋಕಪಾಲರನ್ನು ನೇಮಕ ಮಾಡದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಕೇಂದ್ರ ಸರಕಾರಕ್ಕೆ ಛೀಮಾರಿ ಹಾಕಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ನಾಯಕರು ದೇಶದ ಜನರ ಕ್ಷಮೆಯಾಚಿಸಬೇಕೆಂದು ವಿಧಾನ ಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ಒತ್ತಾಯಿಸಿದ್ದಾರೆ.

ಶುಕ್ರವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ನಾಯಕರು ಕರ್ನಾಟಕ ಲೋಕಾಯುಕ್ತ ನೇಮಕಕ್ಕೆ ಸಂಬಂಧಪಟ್ಟಂತೆ ಪುಂಖಾನುಪುಂಖವಾಗಿ ಮಾತನಾಡಿದ್ದಾರೆ. ಆದರೆ, ಕೇಂದ್ರದಲ್ಲಿ ಲೋಕಪಾಲರನ್ನು ಇಲ್ಲಿಯವರೆಗೂ ನೇಮಕ ಮಾಡಿಲ್ಲ. ಹೀಗಾಗಿ, ಸುಪ್ರೀಂಕೋರ್ಟ್ ಕೇಂದ್ರ ಸರಕಾರಕ್ಕೆ ಛೀಮಾರಿ ಹಾಕಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ನಾಯಕರು ದೇಶದ ಜನರ ಕ್ಷಮೆ ಕೇಳಬೇಕೆಂದು ಒತ್ತಾಯಿಸಿದರು.

ಬಿಜೆಪಿಯವರೆಲ್ಲರೂ ಹಿಟ್ಲರ್ ವಂಶಸ್ಥರಾಗಿದ್ದು, ನ್ಯಾಯಾಲಯಗಳ ಆದೇಶಗಳ ಬಗ್ಗೆ ಸೂಕ್ಷ್ಮತೆ ಹಾಗೂ ಬದ್ಧತೆಯನ್ನು ಹೊಂದಿಲ್ಲ. ಅಲ್ಲದೆ, ಲೋಕಪಾಲರನ್ನು ನೇಮಕ ಮಾಡಲು ಯಾವುದೇ ಕಾನೂನು ತಿದ್ದುಪಡಿ ಮಾಡಬೇಕಿಲ್ಲ. ಹೀಗಾಗಿ, ಆದಷ್ಟೂ ಬೇಗ ಲೋಕಪಾಲರನ್ನು ನೇಮಕ ಮಾಡಬೇಕೆಂದು ಅವರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News