ಆದಂ ನೀರಾಜೆ
Update: 2017-04-29 00:04 IST
ಉಪ್ಪಿನಂಗಡಿ, ಎ.28: ರಾಮಕುಂಜ ಗ್ರಾಮದ ನೀರಾಜೆ ನಿವಾಸಿ ಎನ್.ಎ. ಆದಂ (64 ವ.) ಕೆಲ ದಿನಗಳ ಅನಾರೋಗ್ಯದಿಂದ ಎ.28ರಂದು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಮದುವೆ ಮೊದಲಾದ ಕಾರ್ಯಕ್ರಮಗಳಲ್ಲಿ ಪಕ್ವಾನ್ ಆಗಿ ಸೇವೆ ಸಲ್ಲಿಸುತ್ತಿದ್ದ ಇವರು ವಿಶೇಷ ಬಿರಿಯಾನಿ ಮಾಡುವ ಮೂಲಕ "ಅಡುಗೆ ಆದಂಕಾಕ" ಎಂದೇ ಚಿರಪರಿಚಿತರಾಗಿದ್ದರು. ಮೃತರು ಪತ್ನಿ, ಮೂವರು ಪುತ್ರಿಯರು, ಐವರು ಪುತ್ರರನ್ನು ಅಗಲಿದ್ದಾರೆ.