ನಾರಾಯಣ ಬಲ್ಲಾಳ್
Update: 2017-04-29 20:17 IST
ಉಡುಪಿ, ಎ.29: ಶ್ರೀಕಾಣಿಯೂರು ಮಠದ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸಿದ್ದ ಎಂ.ನಾರಾಯಣ ಬಲ್ಲಾಳ್ ಅಂಬಲಪಾಡಿ ಅವರು ಇಂದು ನಿಧನರಾಗಿದ್ದಾರೆ. ಅವರಿಗೆ 91 ವರ್ಷ ಪ್ರಾಯವಾಗಿತ್ತು. ಅವರು ಪತ್ನಿ 6 ಮಂದಿ ಗಂಡು ಹಾಗೂ 2 ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.
ಉಡುಪಿ ಮೋಡರ್ನ್ ಶಾಲೆ ಹಾಗೂ ಕಟಪಾಡಿ ಎಸ್‌ವಿಎಸ್ ಶಾಲೆಯಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ನಾರಾಯಣ ಬಲ್ಲಾಳ್, ಬಳಿಕ ಅನೇಕ ವರ್ಷ ಕಾಣಿಯೂರು ಮಠದ ಮ್ಯಾನೇಜರ್ ಆಗಿ, ಶ್ರೀವಿದ್ಯಾಸಮುದ್ರ ಟ್ರಸ್ಟ್‌ನ ಓರ್ವ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು.
ನಾರಾಯಣ ಬಲ್ಲಾಳ್‌ರ ನಿಧನಕ್ಕೆ ಕಾಣಿಯೂರು ಮಠಾಧೀಶರಾದ ಶ್ರೀವಿದ್ಯಾವಲ್ಲಭ ತೀರ್ಥ ಶ್ರೀಪಾದರು ಸಂತಾಪ ಸೂಚಿಸಿದ್ದಾರೆ.