ಮುಂಬೈಗೆ ಸೂಪರ್ ಜಯ

Update: 2017-04-29 18:42 GMT

ಮುಂಬೈ-ಗುಜರಾತ್ ಪಂದ್ಯ ರೋಚಕ ಟೈ

  ರಾಜ್‌ಕೋಟ್, ಎ.29: ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಲಯನ್ಸ್ ತಂಡಗಳ ನಡುವೆ ಇಲ್ಲಿ ನಡೆದ ಐಪಿಎಲ್‌ನ 35ನೆ ಪಂದ್ಯ ಟೈ ಆಗಿದೆ.

ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 154 ರನ್‌ಗಳ ಸವಾಲನ್ನು ಪಡೆದ ಮುಂಬೈ ಇಂಡಿಯನ್ಸ್ ತಂಡ 20 ಓವರ್‌ಗಳಲ್ಲಿ 153 ರನ್‌ಗಳಿಗೆ ಆಲೌಟಾಗುವುದರೊಂದಿಗೆ ಪಂದ್ಯ ಟೈನಲ್ಲಿ ಕೊನೆಗೊಂಡಿತು.

 ಕೊನೆಯ ಓವರ್‌ನಲ್ಲಿ ಮುಂಬೈ ಗೆಲುವಿಗೆ 11 ರನ್ ಬೇಕಾಗಿತ್ತು. ಆದರೆ 10 ರನ್ ಗಳಿಸಿತು.

ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಪಾರ್ಥಿವ್ ಪಟೇಲ್ 70 ರನ್(44ಎ, 9ಬೌ, 1ಸಿ) ಗಳಿಸಿ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು.

 ಜೋ ಬಟ್ಲರ್ 9ರನ್, ನಿತೀಶ್ ರಾಣಾ 19ರನ್, ಪೊಲಾರ್ಡ್ 15ರನ್, ರೋಹಿತ್ ಶರ್ಮ 5 ರನ್, ಕೃನಾಲ್ ಪಾಂಡ್ಯ 4 ರನ್ , ಮೆಕ್ಲೀನಗನ್ 1ರನ್ ಗಳಿಸಿದರು. ಹರ್ಭಜನ್ ಸಿಂಗ್ ಖಾತೆ ತೆರೆಯಲಿಲ್ಲ.

ಗುಜರಾತ್ 153/9: ಇದಕ್ಕೂ ಮೊದಲು ಟಾಸ್ ಜಯಿಸಿದ ಗುಜರಾತ್ ಲಯನ್ಸ್ ತಂಡದ ನಾಯಕ ಸುರೇಶ್ ರೈನಾ ಅವರು ಬ್ಯಾಟಿಂಗ್ ಆಯ್ದುಕೊಂಡಿದ್ದರು.

ರೈನಾ ಯೋಜನೆ ಫಲ ನೀಡಲಿಲ್ಲ. ಗುಜರಾತ್ ಲಯನ್ಸ್ ತಂಡದ ಆರಂಭಿಕ ದಾಂಡಿಗ ಇಶಾನ್ ಕಿಶನ್ (48) ಅವರು ಅರ್ಧಶತಕ ವಂಚಿತಗೊಂಡರು. ಕಿಶನ್ ಅವರನ್ನು ಹೊರತುಪಡಿಸಿದರೆ ತಂಡದ ಸಹ ಆಟಗಾರರಾದ ರವೀಂದ್ರ ಜಡೇಜ (28), ಫಾಕ್ನರ್(21), ಟೈ (25) ಎರಡಂಕೆಯ ಸ್ಕೋರ್ ದಾಖಲಿಸಿದರು.

  ಐಪಿಎಲ್‌ನಲ್ಲಿ ಆರನೆ ತಂಡದಲ್ಲಿ ಮೊದಲ ಬಾರಿ ಆಡಿದ ಆಲ್‌ರೌಂಡರ್ ಇರ್ಫಾನ್ ಪಠಾಣ್ (2) , ನಾಯಕ ಸುರೇಶ್ ರೈನಾ(1), ಬ್ರೆಂಡನ್ ಮೆಕಲಮ್(6), ಆ್ಯರೊನ್ ಫಿಂಚ್(0), ದಿನೇಶ್ ಕಾರ್ತಿಕ್(2), ಬಾಸಿಲ್ ಥಾಂಪಿ(ಔಟಾಗದೆ 2) ಮತ್ತು ಅಂಕಿತ್ ಸೋನಿ(7) ಒಂದಂಕೆಯ ಸ್ಕೋರ್ ದಾಖಲಿಸಿದರು.

ಸಂಕ್ಷಿಪ್ತ ಸ್ಕೋರ್ ವಿವರ

ಗುಜರಾತ್ ಲಯನ್ಸ್ 20 ಓವರ್‌ಗಳಲ್ಲಿ 153/9( ಕಿಶನ್ 48, ಜಡೇಜ 28; ಕೃನಾಲ್ ಪಾಂಡ್ಯ 14ಕ್ಕೆ 3, ಬುಮ್ರಾ 32ಕ್ಕೆ 2, ಮಾಲಿಂಗ 33ಕ್ಕೆ 2).

 ಮುಂಬೈ ಇಂಡಿಯನ್ಸ್ 20 ಓವರ್‌ಗಳಲ್ಲಿ ಆಲೌಟ್ 153( ಪಿ.ಪಟೇಲ್ 70, ಕೃನಾಲ್ ಪಾಂಡ್ಯ 29; ಥಾಂಪಿ 29ಕ್ಕೆ 3, ಫಾಕ್ನರ್ 34ಕ್ಕೆ 2)

ಪಂದ್ಯ ಟೈ ಆಗಿರುವ ಹಿನ್ನೆಲೆಯಲ್ಲಿ ಒನ್ ಓವರ್ ಎಲಿಮಿನೇಟರ್‌ನಲ್ಲಿ ಗೆಲುವಿಗೆ 12 ರನ್‌ಗಳ ಸವಾಲನ್ನು ಪಡೆದ ಗುಜರಾತ್ ಲಯನ್ಸ್ ತಂಡ 6 ರನ್ ಗಳಿಸಿತು. ಇದರೊಂದಿಗೆ ಮುಂಬೈ 5ರನ್‌ಗಳ ಜಯ ದಾಖಲಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News