‘ಐಯಾಮ್ ಚೇಂಜಿಂಗ್ ಮೈ ಲೈಫ್’ ಕೃತಿ ಲೋಕಾರ್ಪಣೆ

Update: 2017-04-30 13:25 GMT

ಬೆಂಗಳೂರು, ಎ. 29: ‘ಓದುಗ ತನ್ನ ಜೀವನದ ಬಗ್ಗೆ ಮೂಡುವ ಹಲವಾರು ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳಲು ‘ಐಯಾಮ್ ಚೇಂಜಿಂಗ್ ಮೈ ಲೈಫ್’ ಈ ಕೃತಿ ನೆರವಾಗಲಿದೆ ಎಂದು ಲೇಖಕ ಯು.ಧರ್ಮೇಂದ್ರ ಇಂದಿಲ್ಲಿ ಭರವಸೆ ವ್ಯಕ್ತಪಡಿಸಿದ್ದಾರೆ.

ರವಿವಾರ ಇಲ್ಲಿನ ಸಪ್ನ ಬುಕ್ ಹೌಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೋಕಾರ್ಪಣೆ ಮಾಡಿದರು. ಓದುಗ ತನ್ನ ಜೀವನವನ್ನು ಸುಮಧುರ ಮಾಡಿಕೊಳ್ಳಬಹುದಲ್ಲದೆ, ವೈಯಕ್ತಿಕ ಸಮಸ್ಯೆಗಳಿಗೆ ಪರಿಹಾರ ಮಾಡಲು ಇದು ನೆರವಾಗುತ್ತದೆ. ಸಮೃದ್ಧಿಯಾದ ಮತ್ತು ನೆಮ್ಮದಿಯಾದ ಜೀವನ ಸಾಗಿಸುವುದು ಪ್ರತಿಯೊಬ್ಬರಿಗೂ ಜನ್ಮದತ್ತ ಹಕ್ಕು. ಇದನ್ನು ಸಾಧಿಸುವ ನಿಟ್ಟಿನಲ್ಲಿ ತಾನು ನನ್ನ್ನ ಈ ಕೃತಿಯ ಮೂಲಕ ಮಾಡಿದ್ದೇನೆ’ ಎಂದರು.

ಇದೊಂದು ನೂತನವಾದ ತಂತ್ರಗಾರಿಕೆ. ಇದನ್ನು ನಾನು ಹಲವಾರು ಸಂಶೋಧನೆ ಮತ್ತು ಅವಲೋಕನಗಳನ್ನು ಓದಿದ ನಂತರ ಅಭಿವೃದ್ಧಿಪಡಿಸಿದ್ದೇನೆ. ಓದುಗರು ತಮಗಿಷ್ಟವಾದ ರೀತಿಯಲ್ಲಿ ಜೀವನ ಸಾಗಿಸಲು ಇದೊಂದು ಅತ್ಯಂತ ಶಕ್ತಿಶಾಲಿ, ಸಮರ್ಪಕ ಮತ್ತು ಸರಳ ವಿಧಾನವಾಗಿದೆ. ಇದು ಸ್ನೇಹ ತಂತ್ರಗಾರಿಕೆಯಾಗಿದೆ. ಬಹುತೇಕ 60 ದಿನಗಳಲ್ಲಿ ಈ ತಂತ್ರಗಾರಿಕೆ ಗುಣಾತ್ಮಕವಾದ ಫಲಿತಾಂಶತರಲಿದೆ. ಹೀಗಾಗಿ ಇದು ಫಲಿತಾಂಶ ಪೂರಕವಾದ ತಂತ್ರಗಾರಿಕೆ ಎನಿಸಲಿದೆ ಎಂದು ಅವರು ಹೇಳಿದರು.

ವೈಯಕ್ತಿಕ ಜೀವನದಲ್ಲಿ ಎದುರಾಗುವ ಬಿಕ್ಕಟ್ಟುಗಳಿಂದ ಹೇಗೆ ಹೊರಬರಬೇಕು. ಜೀವನ ಕಲೆಯನ್ನು ಹೇಗೆ ಕಲಿಯಬೇಕು ಎಂಬುದು ಸೇರಿದಂತೆ ವೈಯಕ್ತಿಕ ಬದುಕಿನ ಸಂಕಷ್ಟಗಳು ಮತ್ತು ಪರಿಹಾರಗಳ ಕುರಿತ ಲೇಖನಗಳನ್ನುಒಳಗೊಂಡ ಕೃತಿ ಇದಾಗಿದೆ ಎಂದರು.

ಒಟ್ಟಾರೆ ಈ ಕೃತಿಯ ಪ್ರಮುಖ ಉದ್ದೇಶವೇನೆಂದರೆ ಓದುಗ ತನ್ನ ಜೀವನದಲ್ಲಿ ಎದುರಾಗುವ ಯಾವುದೇ ವೈಯಕ್ತಿಕ ಸಮಸ್ಯೆಗಳನ್ನು ಹೇಗೆ ನಿಭಾಯಿಸಬೇಕೆಂಬುದರ ಬಗ್ಗೆ ಅರಿವು ಮೂಡಿಸುವುದಾಗಿದೆ. ಮಂತ್ರಗಳು, ಧ್ಯಾನ, ಧನಾತ್ಮಕ ಅಂಶಗಳು ಸೇರಿದಂತೆ ಮನಸ್ಸು ಉಲ್ಲಸಿತವಾಗಲು ಅಗತ್ಯರುವ ಮಾಹಿತಿಗಳು ಕೃತಿಯಲ್ಲಿವೆ.

‘ಐಯಾಮ್ ಚೇಂಜಿಂಗ್ ಮೈ ಲೈಫ್’ ಕೃತಿ ಚಿಂತಕರನ್ನು ಮತ್ತು ಆಧ್ಯಾತ್ಮಿಕ ವ್ಯಕ್ತಿಗಳನ್ನು ಓದುವಿಕೆ, ಕಲಿಕೆ, ಬರವಣಿಗೆ, ಧ್ಯಾನ ಮತ್ತು ಚರ್ಚೆಗೆ ವೇದಿಕೆಯನ್ನು ಒದಗಿಸಿಕೊಟ್ಟಿದೆ. ನಮ್ಮತಾತ್ವಿಕ ಸತ್ಯವು ಹಲವು ಶತಮಾನಗಳಿಂದ ಉಳಿದುಕೊಂಡು ಬಂದಿದೆ. ಆದರೆ, ಈ ಕೃತಿ ಸರಳ ಭಾಷೆಯಲ್ಲಿ ಪ್ರಸ್ತುತ ಸನ್ನಿವೇಶಗಳಿಗೆ ತಕ್ಕಂತಹ ವಿಚಾರಗಳನ್ನು ಪ್ರಸ್ತಾಪ ಮಾಡುತ್ತಿದೆ ಎಂದು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News