ಮಹಿಳಾ ಅಧಿಕಾರಿಗಳಿರುವ ವಾಟ್ಸ್ಯಾಪ್ ಗ್ರೂಪ್‌ಗೆ ಅಶ್ಲೀಲ ಫೋಟೋ ರವಾನಿಸಿದ ಬಿಜೆಪಿ ಶಾಸಕ

Update: 2017-05-02 15:20 GMT

ಬೆಳಗಾವಿ, ಮೇ 2: ಜಿಲ್ಲಾಧಿಕಾರಿ ಸೇರಿದಂತೆ ಜಿಲ್ಲಾ ಮಹಿಳಾ ಅಧಿಕಾರಿಗಳಿರುವ ವಾಟ್ಸ್ಯಾಪ್ ಗ್ರೂಪ್‌ಗೆ 50ಕ್ಕೂ ಹೆಚ್ಚು ಅಶ್ಲೀಲ ಫೋಟೋಗಳು ರವಾನಿಸುವ ಮೂಲಕ ವಿಧಾನ ಪರಿಷತ್ ಬಿಜೆಪಿ ಸದಸ್ಯ ಮಹಾಂತೇಶ್ ಕವಟಗಿ ಮಠ ಪೇಚಿಗೆ ಸಿಲುಕಿದ್ದಾರೆ.

ಜಿಲ್ಲೆಯ ಕುಂದು-ಕೊರತೆಗಳ ನಿವಾರಣೆಗೆ ಸಂಬಂಧಿಸಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳನ್ನು ಒಳಗೊಂಡ ‘ಬೆಳಗಾವಿ ಮಿಡಿಯಾ ಫೋರ್ಸ್’ ವಾಟ್ಸ್ಯಾಪ್ ಗ್ರೂಪ್‌ಗೆ ಮಹಾಂತೇಶ್ ಕವಟಗಿಮಠ ಸಂಜೆ 4:30ರ ಸುಮಾರಿಗೆ 50ಕ್ಕೂ ಹೆಚ್ಚು ಅಶ್ಲೀಲ ಫೋಟೋಗಳನ್ನು ರವಾನಿಸುವ ಮೂಲಕ ತಲೆತಗ್ಗಿಸುವ ಕೃತ್ಯವೆಸಗಿದ್ದಾರೆ.

ಅತ್ಯಂತ ಅಸಹ್ಯ ಮತ್ತು ಅಸಭ್ಯ ಫೋಟೋಗಳನ್ನು ಗ್ರೂಪ್‌ನಲ್ಲಿ ನೋಡಿದ ಕೂಡಲೇ ಜಿಲ್ಲೆಯ ಇಬ್ಬರು ಮಹಿಳಾ ಅಧಿಕಾರಿಗಳು ಸೇರಿದಂತೆ ಹಲವು ಮಂದಿ ವಾಟ್ಸ್ಯಾಪ್ ಗ್ರೂಪ್‌ನಿಂದ ಹೊರಬಂದಿದ್ದಾರೆ. ಅಶ್ಲೀಲ ಫೋಟೋಗಳನ್ನು ರವಾನಿಸಿರುವ ಬಗ್ಗೆ ಪ್ರತಿಕ್ರಿಯೆ ಕೇಳಲು ಕವಟಗಿ ಮಠ ಅವರಿಗೆ ಫೋನ್ ಮಾಡಿದರೆ, ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದು, ಎಲ್ಲರ ವಿರೋಧ ಹೆಚ್ಚಾದ ಮೇಲೆ, ಅಚಾತುರ್ಯದಿಂದಾದದ್ದು ಎಂದು ಕ್ಷಮೆ ಕೇಳಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News