ಗರಿಷ್ಠ ಸಿನಿಮಾ ಟಿಕೆಟ್ ದರ 200 ರೂ. ನಿಗದಿ: ಇಂದಿನಿಂದ ಜಾರಿ
Update: 2017-05-02 21:03 IST
ಬೆಂಗಳೂರು, ಮೇ.2: ರಾಜ್ಯದಲ್ಲಿನ ಮಲ್ಟಿಪ್ಲೆಕ್ಸ್‌ಗಳು ಸೇರಿದಂತೆ ಎಲ್ಲ ಚಿತ್ರಮಂದಿರಗಳಲ್ಲಿ ಏಕರೀತಿಯ ಪ್ರವೇಶ ದರ ನೀತಿ ಜಾರಿಯನ್ವಯ ಸಿನಿಮಾ ಮಂದಿರಗಳ ಪ್ರವೇಶ ದರದ ಗರಿಷ್ಠ ಮಿತಿಯನ್ನು 200 ರೂ.ಗಳಿಗೆ ನಿಗದಿಪಡಿಸಿ ಸರಕಾರ ಆದೇಶ ಹೊರಡಿಸಿದೆ.
ರಾಜ್ಯದಲ್ಲಿ ಪ್ರದರ್ಶನಗೊಳ್ಳುವ ಎಲ್ಲ ಭಾಷೆಯ ಚಲನಚಿತ್ರಗಳಿಗೆ ಈ ದರ ಅನ್ವಯಿಸುತ್ತದೆ. 200ರೂ. ಗಳ ಗರಿಷ್ಠ ಮಿತಿಯನ್ನು ಮಲ್ಟಿಪ್ಲೆಕ್ಸ್‌ಗಳಲ್ಲಿರುವ ಗೋಲ್ಡ್ ಕ್ಲಾಸ್ ಸ್ಕ್ರೀನ್ ನ ಒಟ್ಟು ಸೀಟುಗಳ ಶೇ.10 ರಷ್ಟು ಮೀರದಂತೆ ಹೊರತುಪಡಿಸಲಾಗಿದೆ. ಐ-ಮಾಕ್ಸ್ ಮತ್ತು 4ಡಿ ಎಕ್ಸ್ ಚಿತ್ರಮಂದಿರಗಳನ್ನು ಗರಿಷ್ಠ ಪ್ರವೇಶ ದರ ಮಿತಿಯಿಂದ ಹೊರತುಪಡಿಸಿ ಸರಕಾರಿ ಆದೇಶ ಹೊರಡಿಸಲಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.