ದೇಶಾದ್ಯಂತ ತೆಲಂಗಾಣ ಮಾದರಿಯ ಮುಸ್ಲಿಂ ಮೀಸಲಾತಿಗೆ ಎಸ್ ಡಿಪಿಐ ಆಗ್ರಹ

Update: 2017-05-03 14:57 GMT

ಬೆಂಗಳೂರು. ಮೇ3: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ.) ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸಭೆಯು ಇತ್ತೀಚಿಗೆ ದಿಲ್ಲಿಯಲ್ಲಿ ನಡೆಯಿತು. ಈ ಸಭೆಯಲ್ಲಿ ದೇಶದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಚರ್ಚಿಸಿ ಹತ್ತು ಠರಾವುಗಳನ್ನು ಮಂಡಿಸಲಾಯಿತು.

ಮುಸ್ಲಿಂ ಮೀಸಲಾತಿ ದೇಶದ ಮುಸ್ಲಿಮರು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ದಲಿತರಿಗಿಂದ ತುಂಬಾ ಹಿಂದಿದ್ದಾರೆ ಎಂಬ ವಾಸ್ತವ ಸಂಗತಿಯಲ್ಲಿ ಸಾಚಾರ್ ಸಮಿತಿ ವರದಿ ನೀಡಿ 11 ವರ್ಷ ಕಳೆದಿದೆ. ಆದರೆ ಕೇಂದ್ರ ಸರಕಾರ ಈ ಸಮಸ್ಯೆಯ ಪರಿಹಾರ ಹುಡುಕಲು ಪ್ರಯತ್ನಿಸಿಲ್ಲ. ಆದರೆ ತೆಲಂಗಾಣ ಸರಕಾರ ಮುಸ್ಲಿಮರನ್ನು ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಹಿಂದುಳಿಕೆಯ ಆಧಾರದ ಮೇಲೆ ಮೀಸಲಾತಿ ನೀಡುವ ಮಸೂದೆ ತಂದು ಕೇಂದ್ರ ಮತ್ತು ಇತರ ರಾಜ್ಯಗಳಿಗೆ ಮಾದರಿ ತೋರಿಸಿದೆ.

ಅಲ್ಲದೆ ಮುಸ್ಲಿಂ ಮೀಸಲಾತಿಗೆ ಕಾನೂನು ತಡೆ ಅಡ್ಡಿಯಾಗದಂತೆ ನೋಡಿಕೊಂಡಿದೆ. ನಿರಂತರ ಮಾನವ ಹಕ್ಕುಗಳ ಉಲ್ಲಂಘನೆ, ಭದ್ರತಾ ಪಡೆಗಳ ಅತಿರೇಕದಿಂದಾಗಿ ಕಾಶ್ಮೀರದ ಜನ ಸಾಮಾನ್ಯರ ಬದುಕು ಸಂಕಷ್ಟದಲ್ಲಿದೆ. ನಿರಂತರವಾಗಿ ದಶಕಗಳಿಂದ ಇದು ನಡೆಯುತ್ತಿದೆ. ಕಾಶ್ಮೀರದ ಜನತೆಯೊಂದಿಗೆ ಮಾತುಕತೆಯನ್ನು ನಡೆಸುವುದನ್ನು ಬಿಟ್ಟು ಭದ್ರತಾ ಪಡೆಗಳಿಗೆ ಮುಕ್ತ ಸ್ವಾತಂತ್ರ್ಯ ನೀಡಿ ಬಲವಂತವಾಗಿ ಶಾಂತಿ ಕಾಪಾಡುವ ಸಾಹಸ ಕೈಬಿಟ್ಟು ಕೇಂದ್ರ ಸರಕಾರ ಕೂಡಲೇ ಕಾಶ್ಮೀರಿಗಳೊಂದಿಗೆ ಮಾತುಕತೆಯನ್ನು ಪುನರಾರಂಭಿಸಿ ಅಲ್ಲಿ ಶಾಂತಿ ಶಾಶ್ವತವಾಗಿ ನೆಲೆಗೊಳ್ಳಲು ಪ್ರಯತ್ನಿಸಬೇಕೆಂದು ಎಸ್.ಡಿ.ಪಿ.ಐ. ಪ್ರಕಟನೆಯಲ್ಲಿ ಒತ್ತಾಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News