ದುಬೈಯಲ್ಲಿ ಕಾನೂನು ಉಲ್ಲಂಘಿಸದೆ ವಾಹನ ಚಾಲನೆ ಮಾಡಿದರೆ ಪ್ರಶಸ್ತಿ

Update: 2017-05-05 11:48 GMT

ದುಬೈ,ಮೇ 5: ಎಮಿರೇಟ್‌ನಲ್ಲಿ ರಸ್ತೆನಿಯಮ ಉಲ್ಲಂಘಿಸದೆ ವಾಹನ ಚಲಾಯಿಸಿದ 2000 ಮಂದಿಗೆ ಪೊಲೀಸರು ಪುರಸ್ಕಾರ ನೀಡಿ ಗೌರವಿಸಲಿದ್ದಾರೆ. ಒಂದುವರ್ಷದಲ್ಲಿ ನಿಯಮ ಉಲ್ಲಂಘಿಸದ ಚಾಲಕರನ್ನು ವೈಟ್ ಪಾಯಿಂಟ್ ಗೌರವಿಸಲಾಗುತ್ತಿದೆ. ವಾಹನ ಚಲಾಯಿಸುವವರನ್ನು ಗುಟ್ಟಾಗಿ ಹಿಂಬಾಲಿಸಿ ನಿಯಮ ಪಾಲಿಸುವವರನ್ನು ಗುರುತಿಸಿ ಪುರಸ್ಕಾರವನ್ನು ನೀಡಲಾಗುತ್ತದೆ.

ಶಾಪಿಂಗ್ ಮಾಲ್‌ಗಳಿಗೆ ಬರುವವರಲ್ಲಿ ಆಯ್ಕೆ ಮಾಡಿದ ಜನರ ಟ್ರಾಫಿಕ್ ಪೈಲುಗಳನ್ನು ಪರಿಶೀಲಿಸಿ ಅಪರಾಧಕೃತ್ಯಗಳಿಲ್ಲ ಎಂದು ಖಚಿತಪಡಿಸಿ ಪ್ರಶಸ್ತಿನೀಡುವುದು ಎರಡನೆಯ ರೀತಿಯಾಗಿದೆ. 2012ರಲ್ಲಿ ಈಪ್ರಶಸ್ತಿಯನ್ನು ಆರಂಭಿಸಲಾಗಿದೆ. ಮೊದಲನೆ ವರ್ಷ 700 ಮಂದಿಯನ್ನು ಪ್ರಶಸ್ತಿ ನೀಡಿಗೌರವಿಸಲಾಗಿತ್ತು. ನಿಯಮ ಪಾಲಿಸಿದ 26,740 ಮಂದಿಯಿಂದ 2000 ಮಂದಿ ವಿಜಯಿಗಳನ್ನು ಗುರುತಿಸಲಾಗಿದೆ. ಇವರಲ್ಲಿ 656 ಮಹಿಳೆಯರೂ ಸೇರಿದ್ದಾರೆ.

  ದುಬೈಯಲ್ಲಿ ನೋಂದಾಯಿಸಲಾದ ಎಮಿರೇಟ್ ನಲ್ಲೇ ಒಡಾಡುವ ವಾಹನಗಳನ್ನು ಪ್ರಶಸ್ತಿಗೆ ಪರಿಗಣಿಸಲಾಗುತ್ತದೆ. 2020ಕ್ಕಾಗುವಾಗ ಅಪಘಾತ ಸಾವುಗಳನ್ನು ಇಲ್ಲದಾಗಿಸುವುದು ಈ ಪ್ರಶಸ್ತಿಯನ್ನುನೀಡುವ ಉದ್ದೇಶವಾಗಿದೆ. 24ವೈಟ್ ಪಾಯಿಂಟುಗಳಿಸುವವರಿಂದ ಚೀಟಿ ಎತ್ತಿ ವಿಜೇತರನ್ನುಗುರುತಿಸಲಾಗುತ್ತದೆ. ಈಸಲ ಎರಡು ಸಾವಿರ ಮಂದಿಯ ಪ್ರಶಸ್ತಿ ಪಟ್ಟಿಯಲ್ಲಿ 500ಸ್ವದೇಶಿಗಳು ಆಯ್ಕೆಯಾಗಿ ಮೊದಲಸ್ಥಾನದಲ್ಲಿದ್ದರೆ, ಎರಡನೆ ಸ್ಥಾನದಲ್ಲಿ 315 ಮಂದಿ ಭಾರತೀಯರಿದ್ದಾರೆ. ಈ ಗೌರವ ಪ್ರಶಸ್ತಿ ಪಡೆಯುವವರಲ್ಲಿ ಈಜಿಪ್ಟ್, ಇಂಗ್ಲೆಂಡ್ ಹೀಗೆ ನಾನಾರಾಷ್ಟ್ರದವರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News