×
Ad

ಸದ್ದು

Update: 2017-05-06 00:02 IST
Editor : -ಮಗು

ಬಾಸ್ ತನ್ನ ಕೆಳ ಉದ್ಯೋಗಿಗೆ ಗದರಿಸಿದ.

‘‘ಊಟ ಮಾಡಿಲ್ಲವಾ? ಜೋರಾಗಿ ಮಾತನಾಡು’’

ಸಹೋದ್ಯೋಗಿ ಹೆದರುತ್ತಲೇ ಮಾತನಾಡಿದ.

ಬಾಸ್ ಮನೆಗೆ ಬಂದ. ಟಿವಿ ಆನ್ ಮಾಡಿದ. ಯಾಕೋ ವಾಲ್ಯೂಮ್ ಜೋರು ಮಾಡಿದ.

ಊಹುಂ...ಶಬ್ದ ಸರಿಯಾಗಿ ಕೇಳಿಸುತ್ತಿಲ್ಲ. ಟಿವಿ ಕೆಟ್ಟಿದೆ ಎಂದು ಮೆಕಾನಿಕ್‌ಗೆ ಫೋನ್ ಮಾಡಿದ.

ಟಿವಿ ಮೆಕಾನಿಕ್ ಪರೀಕ್ಷೆ ಮಾಡಿ, ಒಂದು ಚೀಟಿಯಲ್ಲಿ ವಿಳಾಸ ಬರೆದು ಅವನ ಕೈಗಿತ್ತ.

‘‘ಸಾರ್...ಈ ವಿಳಾಸಕ್ಕೆ ಭೇಟಿ ಮಾಡಿ...ಇವರು ಸರಿ ಮಾಡಿ ಕೊಡುತ್ತಾರೆ’’

ಬಾಸ್‌ಗೆ ಸಿಟ್ಟು ಬಂತು ‘‘ನೀವೇ ಸರಿ ಮಾಡಿಕೊಡಬೇಕು. ಟಿವಿಗೆ ವ್ಯಾರಂಟಿ ಇದೆ’’ ಅಬ್ಬರಿಸಿದ.

ಮೆಕಾನಿಕ್ ಮೆದುವಾಗಿ ಹೇಳಿದ ‘‘ಸರ್...ನಾನು ಚೀಟಿ ಕೊಟ್ಟಿರುವುದು ಕಿವಿ ತಜ್ಞರೊಬ್ಬರ ವಿಳಾಸ. ರಿಪೇರಿಯಾಗ ಬೇಕಾಗಿರುವುದು ಟಿವಿಯಲ್ಲ’’

Writer - -ಮಗು

contributor

Editor - -ಮಗು

contributor

Similar News

ಬೆಲೆ

ದಾಂಪತ್ಯ

ಶಾಂತಿ

ಬೆಳಕು

ಮಾನ್ಯತೆ!

ವ್ಯಾಪಾರ

ಆಕ್ಸಿಜನ್

ಝಲಕ್

ಸ್ವರ್ಗ

ಗೊಂದಲ!

ಪ್ರಾರ್ಥನೆ

ಆ ಚಿಂತಕ!