ಪಾಸ್‌ಪೋರ್ಟ್ ಅಧಿಕಾರಿಗಳಿಂದ ಪ್ರಮಾದ: ಕುಟುಂಬದ ಉಮ್ರಾ ಪ್ರಯಾಣ ಸ್ಥಗಿತ

Update: 2017-05-06 05:47 GMT

ಕಲ್ಲಿಕೋಟೆ,ಮೇ 6: ಪಾಸ್‌ಪೋರ್ಟ್ ಕಚೇರಿ ಅಧಿಕಾರಿಗಳ ತಪ್ಪು ಕ್ರಮದಿಂದಾಗಿ ಕುಟುಂಬವೊಂದರ ಉಮ್ರಾಯಾತ್ರೆ ಸ್ಥಗಿತವಾಗಿದೆ. ಕಲ್ಲಿಕೋಟೆ ಅರಕ್ಕಿಣರ್ ಆಯಿಷ ಮಂಝಿಲ್‌ನ ಮುಹಮ್ಮದ್ ಆಶಿಕ್ ಇಲ್ಯಾಸ್ ಮತ್ತುಕುಟುಂಬ ಉಮ್ರಾ ಯಾತ್ರೆಗೆ ಹೊರಟಿತ್ತು. ವಿಮಾನ ನಿಲ್ದಾಣಕ್ಕೆ ತಲುಪಿದಾಗ 2019ರವರೆಗೆ ಅವಧಿ ಇರುವ ಪಾಸ್‌ಪೋರ್ಟ್‌ಗೆ ತಪ್ಪಾಗಿ ಕ್ಯಾನ್ಸಲ್ ಸೀಲು ಹಾಕಿದ್ದು ಕಂಡು ಬಂತು.

ಮೇ 4ಕ್ಕೆ ಒಮನ್ ಮೂಲಕ ಜಿದ್ದಕ್ಕೆ ಹೋಗಲು ಪತ್ನಿ, ನಾಲ್ವರು ಮಕ್ಕಳು ,ಪತ್ನಿಯ ತಾಯಿಯನ್ನು ಸೇರಿಸಿಕೊಂಡು ಮುಹಮ್ಮದ್ ಆಶಿಕ್ ಇಲ್ಯಾಸ್ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಬೋರ್ಡಿಂಗ್ ಲಗೇಜ್ ಇತ್ಯಾದಿ ಎಲ್ಲವನ್ನೂ ಮುಗಿಸಿಕೊಂಡು ಇಮಿಗ್ರೇಶನ್‌ಬಳಿ ಬಂದಾಗ ಆಶಿಕ್‌ರ ಪತ್ನಿ ಆಯಿಶಾ ರಿನಾರ ಪಾಸ್‌ಪೋರ್ಟಿನಲ್ಲಿ ಕ್ಯಾನ್ಸಲ್ ಮುದ್ರೆ ಒತ್ತಿರುವುದು ಗಮನಕ್ಕೆ ಬಂದಿದೆ. ನಂತರ ವಿಮಾನನಿಲ್ದಾಣದ ಅಧಿಕಾರಿಗಳು ಪ್ರಯಾಣನಿಷೇಧಿಸಿದ್ದಾರೆ.

ಪ್ರಯಾಣಕ್ಕಾಗಿ ಕುಟುಂಬದವರು ಮೇ 3ರಂದು ರಾತ್ರೆ 12ಗಂಟೆಯಿಂದ ವಿಮಾನ ನಿಲ್ದಾಣದಲ್ಲಿ ಕಾದು ಕುಳಿತಿದ್ದರು. ಉಮ್ರಾ ಯಾತ್ರೆಗೆ ಮಕ್ಕಳಿಗೆ ಪಾಸ್‌ಪೋರ್ಟು ಕೇಳಿದಾಗ ಆಯಿಶಾ ರಿನಾರ ಪಾಸ್‌ಪೋರ್ಟಿನಲ್ಲಿ ತಪ್ಪಾಗಿ ಕ್ಯಾನ್ಸಲ್ ಸೀಲು ಹೊಡೆದಿತ್ತು. ಉಮ್ರಾ ಪ್ರಯಾಣಕ್ಕೆ ಇನ್ನು ಶುರುವಿನಿಂದ ತೊಡಗಬೇಕಾದ ಪರಿಸ್ಥಿತಿ ಕುಟುಂಬದ ಪಾಲಿಗೊದಗಿದೆ.ಈ ಕುರಿತು ದೂರು ನೀಡಿದಾಗ ಪಾಸ್‌ಪೋರ್ಟ್ ಅಧಿಕಾರಿಗಳು ತಪ್ಪನ್ನು ಸರಿಪಡಿಸಿ ಹೊಸ ಪಾಸ್‌ಪೋರ್ಟನ್ನು ಕೊಟ್ಟಿದ್ದಾರೆ. ಆದರೆ, ಸಮಯ, ಹಣ ನಷ್ಟವಾದದ್ದಲ್ಲದೆ ಮಾನಸಿಕ ಕಷ್ಟ ಅನುಭವಿಸಬೇಕಾಯಿತು. ಪಾಸ್‌ಪೋರ್ಟ್ ಅಧಿಕಾರಿಗಳ ವಿರುದ್ಧ ಕಾನೂನುಹೋರಾಟಕ್ಕೆ ಕುಟುಂಬ ಸಿದ್ಧತೆ ನಡೆಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News