ರೈತರು ಶ್ರಮಜೀವಿಗಳು: ಡಾ.ಶಿವಮೂರ್ತಿ ಮುರುಘಾ ಶರಣ

Update: 2017-05-06 17:16 GMT

ಚಿತ್ರದುರ್ಗ, ಮೇ 6: ಭಾರತ ದೇಶದಲ್ಲಿ ಅತ್ಯಂತ ಶ್ರಮದ ವರ್ಗ ಇದೆಯೆಂದರೆ ಅದು ರೈತ ವರ್ಗ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದ್ದಾರೆ.

ಮುರುಘಾಮಠ ಹಾಗೂ ಎಸ್‌ಜೆಎಂ ತಾಂತ್ರಿಕ ಮಹಾವಿದ್ಯಾಲಯ ಸಂಯುಕ್ತ ಆಶ್ರಯದಲ್ಲಿ ನಡೆದ ಶರಣ ಸಂಗಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೃಷಿಕ ವರ್ಗದ ಜತೆ ಕಾರ್ಮಿಕ ವರ್ಗ ಇದೆ. ರೈತ ಹೊಲಗದ್ದೆಗಳಲ್ಲಿ ದುಡಿದರೆ ಕಾರ್ಮಿಕರು ಕಾರ್ಖಾನೆಗಳಲ್ಲಿ ದುಡಿಯುತ್ತಾರೆ. ಹಮಾಲಿ ಮಾಡುವವರು, ಕಟ್ಟಡ ಕಟ್ಟುವವರು ಹೀಗೆ ವಿವಿಧ ರೀತಿಯಲ್ಲಿ ಕಷ್ಟ ಪಡುವವರನ್ನು ಕಾಣುತ್ತೇವೆ ಎಂದರು.

ರೈತಮುಖಂಡ ಆರನಕಟ್ಟೆ ಶಿವಕುಮಾರ್ ಮಾತನಾಡಿ, ಶ್ರಮಿಕರ ಶ್ರಮದ ಪಾಲು ರಾಷ್ಟ್ರ ನಿರ್ಮಿಸಿದೆ. ಸುಖೀ ರಾಜ್ಯ ಸಂಧಾನದಲ್ಲಿ ಉಳಿದುಕೊಂಡಿದೆ. ಬೇರೆ ರಾಷ್ಟ್ರಗಳು ಆಹಾರಧಾನ್ಯಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಆದರೆ, ನಾವು 6 ದಶಲಕ್ಷ ಟನ್‌ನಷ್ಟು ಆಹಾರ ಉತ್ಪಾದಿಸುತ್ತೇವೆ ಎಂಬುದು ನಮ್ಮ ಶ್ರಮದ ಮೌಲ್ಯ. ಇಂದಿನ ದಿನಗಳಲ್ಲಿ ಹೆಚ್ಚು ತೆರಿಗೆಯನ್ನು ಶ್ರಮಿಕರು ಕಟ್ಟುತ್ತಿದ್ದಾರೆ. ಆದರೆ, ಶ್ರಮಕ್ಕೆ ತಕ್ಕ ಫಲ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಇದೇ ವೇಳೆ ಹಗಲು ವೇಷಗಾರರ ಸಾಂಸ್ಕೃತಿಕ ಕಲಾ ಸಂಘದ ಅಧ್ಯಕ್ಷ ಎ.ಗುರುಮೂರ್ತಿಯನ್ನು ಸನ್ಮಾನಿಸಲಾಯಿತು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News