ಮಕ್ಕಾ: ಪೀಠೋಪಕರಣ ಗೋದಾಮಿನಲ್ಲಿ ಬೆಂಕಿ ಆಕಸ್ಮಿಕ; ಮೂವರು ಕಾರ್ಮಿಕರ ಸಾವು

Update: 2017-05-13 08:17 GMT

ಮಕ್ಕ, ಮೇ 13: ಪೀಠೋಪಕರಣಗಳ ಗೊದಾಮಿನಲ್ಲಿ ಕಾಣಿಸಿಕೊಂಡ ಬೆಂಕಿ ಆಕಸ್ಮಿಕದಿಂದಾಗಿ ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ. ಮಕ್ಕದ ಶಾರಿಅ್ ಅಲ್‌ಹಜ್‌ನಲ್ಲಿ ಘಟನೆ ನಡೆದಿದೆ. ದಟ್ಟ ಹೊಗೆಯಿಂದ ಉಸಿರುಗಟ್ಟಿ ಕಾರ್ಮಿಕರು ಮೃತಪಟ್ಟರು ಎಂದು ಮಕ್ಕಸಿವಿಲ್ ಡಿಫೆನ್ಸ್ ವಕ್ತಾರ ಕರ್ನಲ್ ನಾಇಫ್ ಅಲ್‌ಶರೀಫ್ ಹೇಳಿದ್ದಾರೆ.

ಕೆಲಸ ಮಾಡುವ ಕಟ್ಟಡದ ಎರಡನೆ ಮಹಡಿಯಲ್ಲಿ ಕಬ್ಬಿಣದ ಶೀಟ್‌ನಿಂದ ಮಾಡಿದ ಕೋಣೆಯಲ್ಲಿ ಕಾರ್ಮಿಕರು ನಿದ್ರಿಸುತ್ತಿದ್ದರು. ಮೃತಪಟ್ಟ ಕಾರ್ಮಿಕರು ಯಾವ ದೇಶದ ನಾಗರಿಕರೆಂದು ಸದ್ಯ ಗೊತ್ತಾಗಿಲ್ಲ. ಶುಕ್ರವಾರ ಬೆಳಗ್ಗೆ ಫರ್ನಿಚರ್ ಅಂಗಡಿ ಅಗ್ನಿ ಅನಾಹುತಕ್ಕೆ ತುತ್ತಾಗಿತ್ತು. ಪೀಠೋಪಕರಣ ಮಾಡಲು ಅಗತ್ಯವಿದ್ದ ಮರಗಳು, ಪೀಠೋಪಕರಣಗಳು, ಕೆಮಿಕಲ್ ಸಂಪೂರ್ಣ ಸುಟ್ಟುಹೋಗಿದೆ. ಬೆಂಕಿ ಹೊತ್ತಿಕೊಳ್ಳಲು ಕಾರಣವೇನೆಂದು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News