ಪೀಟರ್ ರೋಡ್ರಿಗಸ್ ಜೆರಿಮೆರಿ
Update: 2017-05-14 16:55 GMT
ಮುಂಬೈ, ಮೇ 14: ಮಂಗಳೂರಿನ ಸುರತ್ಕಲ್ ಮೂಲದ ಪೀಟರ್ ರೋಡ್ರಿಗಸ್ (65) ರವಿವಾರ ಮುಂಜಾನೆ ಅಲ್ಪಕಾಲದ ಅನಾರೋಗ್ಯದಿಂದ ಕುರ್ಲಾ ಪಶ್ಚಿಮದ ಕಾಜುಪಾಡದ ಅಂತೋನಿ ಚಾಳ್ನ ನಿವಾಸದಲ್ಲಿ ನಿಧನ ಹೊಂದಿದರು.
ಮೃತರು ಪತ್ನಿ ಮೋನಿಕಾ ಪಿ.ರೋಡ್ರಿಗಸ್, ಓರ್ವ ಪುತ್ರ, ಓರ್ವ ಪುತ್ರಿ ಮತ್ತು ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಮೇ 15ರಂದು ಸಂಜೆ 4 ಗಂಟೆಗೆ ಮುಂಬೈಯ ಸೈಂಟ್ ಜೂಡ್ ಚರ್ಚ್ ಜೆರಿಮೆರಿಯಲ್ಲಿ ನಡೆಯಲಿದೆ ಎಂದು ಕುಟುಂಬಸ್ತರು ತಿಳಿಸಿದ್ದಾರೆ.